ಅಲ್ಲಿನ ಸರ್ಕಾರ ಕರ್ನಾಟಕದ ದಾಸಶ್ರೇಷ್ಠರಿಗೆ ಗೌರವ ನೀಡುವ ಮೂಲಕ ಹರಿದಾಸ ಪರಂಪರೆಗೆ ಉನ್ನತ ಸ್ಥಾನ ನೀಡಿದೆ. ಕ್ರಿ.ಶ. ೧೪೯೪-೧೫೬೪ ರಲ್ಲಿ ಜೀವಿಸಿದ್ದ ಪುರಂದರದಾಸರು ಸರ್ವಶ್ರೇಷ್ಠ ಹರಿದಾಸರಲ್ಲಿ ಓರ್ವರು. ರಾಮ ನಾಮ, ವಿಠ್ಠಲ ನಾಮಗಳನ್ನು ಹೇಳುತ್ತಾ ಸಮಾಜ ಸುಧಾರಣೆಗೆ ಜೀವನವನ್ನೇ ಮುಡಿಪಾಗಿಟ್ಟವರು. ಅಯೋಧ್ಯೆಯ ತೇಧಿ ಬಜಾರ್‌ನಲ್ಲಿರುವ ಬೃಹಸ್ಪತಿ ಕುಂಡದಲ್ಲಿ ಕರ್ನಾಟಕದ ದಾಸಶ್ರೇಷ್ಠ ಪುರಂದರದಾಸರ ಪ್ರತಿಮೆಯನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅನಾವರಣಗೊಳಿಸಿದ್ದಾರೆ.

ದಕ್ಷಿಣ ಭಾರತದ ಇನ್ನಿಬ್ಬರು ವಾಗ್ಗೇಯಕಾರರಾದ ಸಂತ ತ್ಯಾಗರಾಜರು, ಆರುಣಾಚಲ ಕವಿಗಳ ಮೂರ್ತಿಗಳನ್ನೂ ಲೋಕಾರ್ಪಣಗೊಳಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್,ಪುರಂದದಾಸರು, ತ್ಯಾಗರಾಜರು ಅರುಣಾಚಲ ಕವಿಗಳು ಭಾರತೀಯ ಶಾಸ್ತ್ರೀಯ ಸಂಗೀತ, ಭಕ್ತಿ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದವರು. ಅವರ ಕೀರ್ತನೆ, ಕಾವ್ಯಗಳು ಪ್ರೀತಿ, ಭಕ್ತಿ, ಏಕತೆಯ ಬಟ್ಟೆಗೆ ಸಮಾಜವನ್ನು ನೇಯ್ಗೆ' ಮಾಡಿದ್ದವು ಎಂದು ಬಣ್ಣಿಸಿದ್ದಾರೆ.