LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊರಿಯಾ ಕನ್ನಡ ಕೂಟದಿಂದ ಯುಗಾದಿ ಹಬ್ಬದ ಸಂಭ್ರಮ

ಸುವಾನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಸುವಾನ್ ನಗರದಲ್ಲಿ ಕೊರಿಯಾ ಕನ್ನಡ ಕೂಟ (KKK) ವತಿಯಿಂದ ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರೇಟ್ ಹಿಮಾಲಯಾ ರೆಸ್ಟೋರೆಂಟ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡಿಗರು ಕುಟುಂಬ ಸಮೇತವಾಗಿ ಭಾಗವಹಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

 

ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಪ್ರದರ್ಶನಗಳು ಹಾಗೂ ಮಕ್ಕಳ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು. ಉತ್ತರ ಕರ್ನಾಟಕದ ವಿಶೇಷತೆಗಳಲ್ಲಿ ಒಂದಾದ ‘ಒಡಪು ’ ಹೇಳುವುದು  ಗಮನ ಸೆಳೆಯಿತು.



ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸುದು ಹಾಗೂ ಸಮುದಾಯದ ಒಗ್ಗಟ್ಟನ್ನು ಬಲಪಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

 

ಕಾರ್ಯಕ್ರಮದ ರೂವಾರಿಯಾಗಿ ಬಳ್ಳಾರಿಯ ಶಂಭುಲಿಂಗ ಹಾಗೂ ಕೊಳ್ಳೇಗಾಲದ ಕೇಶವಾನಂದ ಪ್ರಭು ಕಾರ್ಯ ನಿರ್ವಹಿಸಿದರು. ಮೈಸೂರಿನ ನಾಗರಾಜ ಬಸವೇಗೌಡ ಮತ್ತು ಶ್ರೀಮತಿ ಲೀನಾ ರವರು ಪೂಜೆಯನ್ನು ನೆರವೇರಿಸಿ, ಹೋಳಿಗೆ, ಚಿತ್ರಾನ್ನ ಹಾಗೂ ಕೋಸಂಬರಿಯ ಪ್ರಸಾದದೊಂದಿಗೆ ತಾಂಬೂಲ (ಎಲೆ, ಅಡಿಕೆ, ಸುಣ್ಣ) ವಿತರಿಸಿದರು. ವಿದೇಶದ ನೆಲದಲ್ಲಿ ಇಂತಹ ಪರಂಪರೆಯ ಹಬ್ಬದ ಊಟ ಮತ್ತು ತಾಂಬೂಲವನ್ನು ಸಿದ್ಧಪಡಿಸಿ ವಿತರಿಸುವುದು ಅಪರೂಪವಾಗಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.



Samsung ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ವಿಶ್ವನಾಥ್ ಕಾರ್ಯಕ್ರಮದಲ್ಲಿ ಮಾತನಾಡಿ ಸಮುದಾಯದ ಒಗ್ಗಟ್ಟಿನ ಮಹತ್ವವನ್ನು ವಿವರಿಸಿದರು. ಕೊಟ್ಟೂರಿನ ಸೌಮ್ಯಶ್ರೀ ಹಾಗೂ ಮಂಡ್ಯದ ಶಿಲ್ಪ ರಾಮೇಗೌಡ ಕಾರ್ಯಕ್ರಮವನ್ನು ನಿರೂಪಿಸಿದರು. ದಾಂಡೇಲಿಯ ಇಕ್ಬಾಲ್ ಕಾಜಿ ಮುಂಬರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೊನೆಯಲ್ಲಿ ದಾವಣಗೆರೆಯ ಮಂಜುನಾಥ್ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST