LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳಾ ಮೀಸಲಾತಿಗಾಗಿ ಸಚಿವ ಸ್ಥಾನವನ್ನೇ ತ್ಯಜಿಸಿದ್ದ ಅಂಬೇಡ್ಕರ್

ನಾಯಕನಹಟ್ಟಿ : ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳಾ ಮೀಸಲಾತಿಗಾಗಿ ಸಚಿವ ಸ್ಥಾನವನ್ನು ತ್ಯಜಿಸಿ ಸಂಪುಟದಿAದ ಹೊರ ನಡೆದ ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಶಿವಶರಣ ಹರಳಯ್ಯ ಸ್ವಾಮೀಜಿ ಹೇಳಿದರು.

 

ಹೋಬಳಿಯ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಲ್ಲಿ ಜೈ ಭೀಮ್ ಮಾದಿಗರ ಯುವಕ ಸಂಘದಿAದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ 135ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ರವರ 119ನೇ ಜಯಂತಿ ಕಾರ್ಯಕ್ರಮದ ಅಂಬೇಡ್ಕರ್ ಭಾವ ಚಿತ್ರದಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಶಿಕ್ಷಣ ಕೊಡಬೇಕೆಂದು ಅಂಬೇಡ್ಕರ್ ಪ್ರಪ್ರಥಮ ಬಾರಿಗೆ ಹೋರಾಟ ಮಾಡಿದರು. ಅವರು ಬರೆದ ಸಂವಿಧಾನದಿAದ ಎಲ್ಲಾ ವರ್ಗದವರಿಗೆ ಮೀಸಲಾತಿಯನ್ನು ತಂದು ಕೊಟ್ಟಿದ್ದಾರೆ. ಅವರ ಜಯಂತಿ ಎಲ್ಲಾ ಜಾತಿ ಜನಾಂಗಗಳು ಆಚರಣೆ ಮಾಡಬೇಕು ಜಯಂತಿ ಎಂದರೆ ಸ್ವಾಭಿಮಾನದ ಸಂಕೇತ ಎಂದರು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರು ಹಾಕಿಕೊಟ್ಟ ದಾರಿಯಲ್ಲಿ ಸ್ವ್ವಾವಲಂಭಿ ಬದುಕನ್ನು ಕಟ್ಟಿಕೊಳ್ಳಬೇಕು. ಒಂದು ಒತ್ತು ಉಪವಾಸ ಇದ್ದರು ಚಿಂತಿಸಬೇಡಿ ಮಕ್ಕಳಿಗೆ ಒಳ್ಳೆ ಶಿಕ್ಷಣವನ್ನು ಕೊಡಿಸಿ ಎಂದು ಅಂಬೇಡ್ಕರ್‌ರವರು ಹೇಳಿದ್ದಾರೆ ಎಂದು ಪೋಷಕರುಗಳಿಗೆ, ಮಹಿಳೆಯರಿಗೆ ಸಲಹೆ ನೀಡಿದರು.

 

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಮಾತನಾಡಿ ಅಂಬೇಡ್ಕರ್ ರವರ ಆಚಾರ ವಿಚಾರಗಳು ಪ್ರತಿಯೊಬ್ಬರು ಪಾಲಿಸಬೇಕು. ಬಾಲ್ಯದಲ್ಲಿತೇ ಅವರು ಸಾಕಾಷ್ಟು ನೋವುಗಳನ್ನು ಅನುಭವಿಸಿ ನಮ್ಮ ದೇಶಕ್ಕೆ ಸಂವಿಧಾನವನ್ನು ಕೊಟ್ಟಿದ್ದಾರೆ. ಆದ್ದರಿಂದ ರಾಷ್ಟçದ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು ಜೊತೆಗೆ ಮಹಿಳೆಯರಿಗೆ ಸಮಾನತೆಯ ಹಕ್ಕು ತಂದು ಕೊಟ್ಟಿದ್ದಾರೆ. ಶೇಕಡ  99% ರಷ್ಟು ಜನರಿಗೆ ಬದುಕಿನ ದಾರಿ ತೋರಿಸಿದ್ದಾರೆ. ಅಂಬೇಡ್ಕರ್‌ರವರು ಜಾತಿ ವ್ಯವಸ್ಥೆ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದರು. ಶಿಕ್ಷಣವು ಸಾಮಾಜಿಕ ಬದಲಾವಣೆಯನ್ನು ಅನ್ಯಾಯ ವಿರುದ್ಧ ಹೋರಾಡುವ ಮೂಲಕ ಮೊದಲ ಹೆಜ್ಜೆಯಾಗಿದೆ. ನೀವು ಒಂದು ದೇವಾಲಯ ನಿರ್ಮಿಸಿದರೆ ನೂರಾರು ಜನ ಬಿಕ್ಷÄಕರು ಹುಟ್ಟಿಕೊಳ್ಳುತ್ತಾರೆ. ಆದರೆ ಒಂದು ಗ್ರಂಥಾಲಯ ನಿರ್ಮಿಸಿದರೆ ನೂರಾರು ಜ್ಞಾನಿಗಳು ಉದಯಿಸುತ್ತಾರೆ ಎಂಬುವುದಾಗಿ ಗ್ರಂಥಾಲಯದ ಮಹಾತ್ವ ಕುರಿತು ಅಂಬೇಡ್ಕರ್‌ರವರ ಮಾತುಗಳನ್ನು ನಾವು ಆಗಾಗ ಬರುತ್ತವೆ. ಶಿಕ್ಷಣದಿಂದ ಸಿಗುವ ಜ್ಞಾನ ದೇವಾಲಯದಿಂದ ಸಿಗಲ್ಲ. ದೇವಾಲಯಕ್ಕೆ ಹೋಗುವ ಬದಲು ಗ್ರಂಥಾಲಯಕ್ಕೆ ಹೋಗಿ, ಶಿಕ್ಷಣ ಕಲಿತು ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಡಾ.ಬಿ.ಆರ್.ಅಂಬೇಡ್ಕರ್‌ರವರು ದೇಶದ ಜನರಿಗೆ ಸಲಹೆ ನೀಡಿದ್ದರು. ಶೋಷಿತರು ದೀನ ದಲಿತರು ಮುಖ್ಯವಾಹಿನೆ ತರುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಎಲ್ಲಾರು ಚೆನ್ನಾಗಿ ಓದಬೇಕೆಂದು ಸಲಹೆ ನೀಡಿದರು. ಶೋಷಿತರು ದೀನ ದಲಿತರ ಬಾಬಾ ಸಾಹೇಬರು ತಮ್ಮ ಹಿಡಿ ಜೀವನವನ್ನು ಮುಡುಪಾಗಿಟ್ಟರು. 12ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ಪಿಡುಗು ತೊಡೆದು ಹಾಕಲು ಬಸವಣ್ಣ ಶ್ರಮಿಸಿದರು. ತಮ್ಮ ಚಿಂತನೆ ವಚನ ಹಾಗೂ ಸಾಹಿತಿಗಳ ಮೂಲಕ ಜಾಗೃತಿ ಮೂಡಿಸಿ ಅನೇಕ ಮೂಡ ನಂಬಿಕೆಯನ್ನು ಹೊಗಲಾಡಿಸಿದರು. ಜಾತಿ ಪದ್ಧತಿ ವಿರುದ್ಧ ಹೋರಾಡಿ ಎಲ್ಲಾರು ಒಂದೇ ಎಂದು ಜಗತ್ತಿಗೆ ಸಾರಿದರು ಎಂದು ಅವರು ಮಾತನಾಡಿದರು.



ನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿ ಶೋಷಿತ ಸಮುದಾಯಗಳಿಗೆ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ದೀಮಂತ ನಾಯಕ ಇಡಿ ವಿಶ್ವವೇ ಮೆಚ್ಚಿ ಕೊಂಡಾಡುವ ನಮ್ಮ ದೇಶದ ಸಂವಿಧಾನವನ್ನು ರಚಿಸಿದ ಮಹ ನಾಯಕ ಅಂಬೇಡ್ಕರ್. ಅವರ ತತ್ವ ಆದರ್ಶಗಳು, ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಹೋರಾಟ ಫಲವಾಗಿ ದೇಶದ ಬಹು ಜನರಿಗೆ ಶಿಕ್ಷಣ, ಉದ್ಯೋಗ ಸಿಕ್ಕಿದೆ. ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ಮತ ಹಕ್ಕು ಕಲ್ಪಿಸಲು ಅವರು ಬಹಳ ಶ್ರಮಪಟ್ಟರು. ಮತದಾನದಲ್ಲಿ ಸಾಮಾನತೆಯನ್ನು ನೀಡಿದ್ದಾರೆ. ಕೊಟ್ಯಾಧಿಪತಿ ಒಂದೆ ಮತ ಹಾಗೂ ಕಟ್ಟೆಕಡೆಯ ವ್ಯಕ್ತಿಗೂ ಒಂದೆ ಮತ ಚಲಾವಣೆ ಮಾಡುವ ಹಕ್ಕು ಒದಗಿಸಿಕೊಟ್ಟಿದ್ದಾರೆ. ಡಿಜೆ ಕುಣಿದು ಕುಪ್ಪಳಿಸುವುದರಲ್ಲಿ ಅಂಬೇಡ್ಕರ್‌ರವನ್ನು ಕಾಣಲ್ಲ, ಬದಲಾಗಿ ಪುಸ್ತಕದಲ್ಲಿ ಮಾತ್ರ ಅವರನ್ನು ಕಾಣಬಹುದು ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಯಲ್ಲಪ್ಪ ವೈ., ವಕೀಲ ಹಿರೇಹಳ್ಳಿ ಮಲ್ಲೇಶ್, ಅಬ್ಬೇನಹಳ್ಳಿ ಆನಂದಪ್ಪ ಗ್ರಾ.ಪಂ.ಮಾಜಿ ಅಧ್ಯಕ್ಷರು, ಶಂಕರಸ್ವಾಮಿ ಗ್ರಾ.ಪಂ.ಮಾಜಿ ಅಧ್ಯಕ್ಷರು,  ಚನ್ನಗಾನಹಳ್ಳಿ ಮಲ್ಲೇಶ್, ಜೆಜೆಹಟ್ಟಿ ತಿಪ್ಪೇಸ್ವಾಮಿ, ಓ.ಶಂಕರ್, ಸಂಜೀವಿನಿ ಜೀವನ ಟ್ರಸ್ಟ್ ಸಂಸ್ಥಾಪಕ ರಂಗಸ್ವಾಮಿ ಚಿತ್ರದುರ್ಗ, ಎತ್ತಿನಹಟ್ಟಿ ಓಬಳೇಶ್, ಮಲ್ಲೂರಹಳ್ಳಿ ಪ್ರಸನ್ನ ಕುಮಾರ್, ಆರ್.ಬಸಪ್ಪ, ಈ.ಮಧು, ವೆಂಕಟೇಶ್, ಸಿದ್ದ, ಹೊನ್ನೂರು ಮಾರಣ್ಣ, ನಿಂಗರಾಜ್, ನವೀನ್ ಮದಕರಿ, ತರಕೇಶ್, ಗುಂತಕೋಲಮ್ಮನಹಳ್ಳಿ ತಿಪ್ಪೇಸ್ವಾಮಿ (ಜೆಸಿಬಿ), ಶಿವದತ್ತ, ವಿಜಯಕರ್ನಾಟಕ ಪತ್ರಿಕೆ ವರದಿಗಾರ ಕೃಷ್ಣಮೂರ್ತಿ, ಪ್ರಕಾಶ್ ಮೌರ್ಯ, ಎಸ್.ರಾಜಣ್ಣ, ನಾಯಕನಹಟ್ಟಿ ತಿಪ್ಪೆಸ್ವಾಮಿ, ವಕೀಲ ಮೈಲಾರಪ್ಪ, ರಮೇಶ್, ಸುನೀಲ್ ನೇರಲಗುಂಟೆ ದುರುಗೇಶ್, ಅಬ್ಬೇನಹಳ್ಳಿ ಮಲ್ಲಿಕಾರ್ಜುನ, ಶಿಕ್ಷಕರುಗಳು, ಮಹಿಳೆಯರು, ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರು, ಪೊಲೀಸ್ ಇಲಾಖೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

12ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ಪಿಡುಗು ತೊಡೆದು ಹಾಕಲು ಬಸವಣ್ಣ ಶ್ರಮಿಸಿದರು. ತಮ್ಮ ಚಿಂತನೆ ವಚನ ಹಾಗೂ ಸಾಹಿತಿಗಳ ಮೂಲಕ ಜಾಗೃತಿ ಮೂಡಿಸಿ ಅನೇಕ ಮೂಡ ನಂಬಿಕೆಯನ್ನು ಹೊಗಲಾಡಿಸಿದರು. ಜಾತಿ ಪದ್ಧತಿ ವಿರುದ್ಧ ಹೋರಾಡಿ ಎಲ್ಲಾರು ಒಂದೇ ಎಂದು ಜಗತ್ತಿಗೆ ಸಾರಿದರು ಎಂದು ಅವರು ಮಾತನಾಡಿದರು.

ಜಿ.ಹೆಚ್.ಮೋಹನ್

ಬಿಜೆಪಿ ಜಿಲ್ಲಾ ಕಾರ್ಯದರ್ಶಿ
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST