LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಅದ್ದೂರಿಯಾಗಿ ನಡೆದ ಗೋವಿಂದರ ಪರಶುರಾಮ ರವರ ಸುವರ್ಣ ಕನ್ನಡಿಗ ಸನ್ಮಾನ

ಮರಿಯಮ್ಮನಹಳ್ಳಿ: ಸುವರ್ಣ ಕನ್ನಡಿಗ -2026 ರ ಪ್ರಶಸ್ತಿ ಪುರಸ್ಕೃ ಜಿ.ಪಂ ಮಾಜಿ ಸದಸ್ಯ ಗೋವಿಂದರ ಪರಶುರಾಮ ಇವರಿಗೆ ಪಟ್ಟಣದ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಸನ್ಮಾನ ಸಮಾರಂಭವನ್ನು ಸ್ನೇಹಿತರ ಬಳಗದಿಂದ ಮತ್ತು ಮರಿಯಮ್ಮನಹಳ್ಳಿ ಹೋಬಳಿಯ ಜನರಿಂದ ಹಮ್ಮಿಕೊಳ್ಳಲಾಗಿತ್ತು.‌ ನಂತರ

ಚಿದ್ರಿ ಸತೀಶ್ ಮಾತನಾಡಿ, ಸದಾ ಜನರೊಂದಿಗೆ ಬೆರೆಯುವ, ಸಾಮಾನ್ಯರ ಕಷ್ಟಕ್ಕೆ ಮಿಡಿಯುವ ಗೋವಿಂದರ ಪರಶುರಾಮ ಅವರಿಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಮರಿಯಮ್ಮನಹಳ್ಳಿ ಅಭಿವೃದ್ಧಿ ವಿಷಯದಲ್ಲಿ ಪಕ್ಷ ಭೇದವಿಲ್ಲದೆ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದು ಹೆಚ್ಚಿನ ಪುರಸ್ಕಾರ ಸಿಗಲಿ ಎಂದರು.



ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಗೋವಿಂದರ ಪರಶುರಾಮ ಮಾತನಾಡಿ, ಪ್ರಶಸ್ತಿಯಿಂದ ಇನ್ನೂ ಹೆಚ್ಚಿನ ಸಮಾಜ ಸೇವೆಗೆ ನನ್ನನ್ನು ಮುಡಿಪಾಗಿಟ್ಟು ಕೊಳ್ಳುವ ಬಯಕೆ ಹಿಮ್ಮಡಿಯಾಗಿದೆ. ಸದಾ ಜನ ಸೇವೆಗೆ ಮುಂದಾಗುವೆ ಎಂದರು.

ಈ‌ ಸಂದರ್ಭದಲ್ಲಿ ಚಿದ್ರಿ ಸತೀಶ್,ಪ.ಪಂ.ಅಧ್ಯಕ್ಷ ಆದಿಮನಿ ಹುಸೇನ್ ಬಾಷ, ಸತ್ಯನಾರಾಯಣ, ಕೃಷ್ಣನಾಯ್ಕ, ಡಾ.ಸೋಮಶೇಖರ್, ನಿವೃತ್ತ ಆರ್.ಟಿ.ಓ.ಪರಮೇಶ್ವರ, ನಿವೃತ್ತ ಶಿಕ್ಷಕ ಮಂಜುನಾಥ, ತಳವಾರ ಹುಲುಗಪ್ಪ, ತಳವಾರ ದೊಡ್ಡ ರಾಮಣ್ಣ, ರೋಗಣ್ಣನವರ ಮಂಜುನಾಥ,ಶಿಕ್ಷಕರಾದ ಬಿ ಪರಶುರಾಮ, ಎಸ್.ನವೀನ್ ಕುಮಾರ್, ರಾಘವೇಂದ್ರ ಶೆಟ್ಟಿ, ಯು.ವೆಂಕಟೇಶ, ಸೋಮಪ್ಪ ಉಪ್ಪಾರ, ಪ.ಪಂ.ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ್, ಸೈಪುಲ್ಲಾ ಶ್ರೀಕಾಂತ್, ಗರಗ ಪ್ರಕಾಶ್,  ಮಜ್ಜಿಗಿ ನಾಗರಾಜ್, ರಹಮಾನ್‌, ಅಂಜಿನಪ್ಪ, ರವಿ ಕಿರಣ್, ಮಂಜುನಾಥ, ವಸಂತ್, ಕಟಿಗಿ ರವಿಕುಮಾರ್, ಈ.ನಾಗರಾಜ, ಲೋಕಪ್ಪ, ರುದ್ರನಾಯ್ಕ, ಪರಶುರಾಮ, ಹನುಮಂತ, ಓಬಪ್ಪ, ಮಹಮ್ಮದ್ ಕೃಷ್ಣ, ಬಸವರಾಜ, ಮೌನೇಶ್, ತಿಮ್ಮರಾಜ್ ಹಾಗೂ ಯುವಕರು, ಹಿರಿಯರು ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ