LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿಯಲ್ಲಿ ಸವಿತಾ ಮಹರ್ಷಿ ಪುತ್ಥಳಿ ಸ್ಥಾಪನೆಗೆ ಮನವಿ

ಬಳ್ಳಾರಿ: ಬಳ್ಳಾರಿ ನಗರದಲ್ಲಿ ಸವಿತಾ ಮಹರ್ಷಿ ಅವರ ಪುತ್ತಳಿಯನ್ನು ಸ್ಥಾಪಿಸುವುದು ಹಾಗೂ ನಗರದ ಪ್ರಮುಖ ವೃತ್ತಕ್ಕೆ ಸವಿತಾ ಮಹರ್ಷಿಯವರ ಹೆಸರನ್ನು ನಾಮಕರಣ ಮಾಡುವಂತೆ ಆಗ್ರಹಿಸಿ, ಬಳ್ಳಾರಿ ಜಿಲ್ಲಾ ಸವಿತಾ ಸಮಾಜ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ, ಬಳ್ಳಾರಿ ನಗರದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಸವಿತಾ ಸಮಾಜದವರು ವಾಸಿಸುತ್ತಿದ್ದರೂ, ತಮ್ಮ ಸಮುದಾಯಕ್ಕೆ ಯಾವುದೇ ರೀತಿಯ ಗುರುತು ಇಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಮಹನೀಯರಾದ ಸವಿತಾ ಮಹರ್ಷಿ ಅವರ ಪುತ್ತಳಿಯನ್ನು ನಗರದ ಯಾವುದಾದರೂ ಪ್ರಮುಖ ವೃತ್ತದಲ್ಲಿ ಸ್ಥಾಪಿಸಿ, ಆ ವೃತ್ತಕ್ಕೆ ಮಹರ್ಷಿಯವರ ಹೆಸರನ್ನು ನಾಮಕರಣ ಮಾಡುವ ಮೂಲಕ ಸಮುದಾಯಕ್ಕೆ ಗೌರವ ನೀಡಬೇಕೆಂದು ಮನವಿ ಮಾಡಿದರು.



ಸಮುದಾಯದ ಗೌರವ ಹಾಗೂ ಸಾಮಾಜಿಕ ಗುರುತಿನ ದೃಷ್ಟಿಯಿಂದ ಈ ಮನವಿಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ವೇಳೆ ಸಮಿತಿಯ ಗೌರವಾಧ್ಯಕ್ಷ ಪಿ. ಗೋವಿಂದರಾಜುಲು, ಪ್ರಧಾನ ಕಾರ್ಯದರ್ಶಿ ಬಿ. ಅರುಣ್ ಕುಮಾರ್, ಜಿಲ್ಲಾಧ್ಯಕ್ಷ ಕೆ. ಶಿವಶಂಕರ್, ಉಪಾಧ್ಯಕ್ಷ ನಾಗರಾಜ್ ಡಿ, ಖಜಾಂಚಿ ಆರ್. ಆಂಜಿನೇಯುಲು, ಮುಖಂಡರಾದ ಸಿ.ನಾರಾಯಣಸ್ವಾಮಿ, ರಘು,  ವೆಂಕಟೇಶ್, ಮಲ್ಲಿಕಾರ್ಜುನ, ಕುಬೇರ, ಉಮೇಶ್, ಮಾರುತಿ, ರಾಜು, ಪ್ರತಾಪ್, ನರಸಿಂಹುಲು, ಅಂಜಿ, ಅನಿಲ್, ಮಧು, ಸುಮನ್ ಸೇರಿದಂತೆ ಸವಿತಾ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST