ಶಿಕ್ಷಣದ ವಿವಿಧ ಮಾರ್ಗಗಳು
ಎಸ್‌ಎಸ್‌ಎಲ್‌ಸಿ ನಂತರ ಸಾಮಾನ್ಯವಾಗಿ ವಿದ್ಯಾರ್ಥಿಗಳು ಪಿಯುಸಿ (PUC) ಆಯ್ಕೆ ಮಾಡುತ್ತಾರೆ. ಇದರಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲೆ ವಿಭಾಗಗಳು ಪ್ರಮುಖವಾಗಿವೆ.
ವಿಜ್ಞಾನ ವಿಭಾಗ (Science): ವೈದ್ಯಕೀಯ, ಇಂಜಿನಿಯರಿಂಗ್, ಫಾರ್ಮಸಿ, ಕೃಷಿ ಇತ್ಯಾದಿ ಕ್ಷೇತ್ರಗಳಿಗೆ ದಾರಿ ತೆರೆದಿಡುತ್ತದೆ.
ವಾಣಿಜ್ಯ ವಿಭಾಗ (Commerce): ಅಕೌಂಟಿಂಗ್, ಫೈನಾನ್ಸ್, ಬ್ಯಾಂಕಿಂಗ್, ಚಾರ್ಟರ್ಡ್ ಅಕೌಂಟೆನ್ಸಿ, ಕಂಪನಿ ಸೆಕ್ರಟರಿ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿವೆ.
ಕಲೆ ವಿಭಾಗ (Arts): ಸಾಮಾಜಿಕ ವಿಜ್ಞಾನ, ರಾಜಕೀಯ, ಇತಿಹಾಸ, ಮನೋವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನಕ್ಕೆ ಅವಕಾಶ.
ಇದರ ಜೊತೆಗೆ ಡಿಪ್ಲೊಮಾ ಕೋರ್ಸ್‌ಗಳು, ಐಟಿಐ ತರಬೇತಿ, ಮತ್ತು ಪ್ಯಾರಾಮೆಡಿಕಲ್ ಕೋರ್ಸ್‌ಗಳು ಕೂಡ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ.
ವೃತ್ತಿಪರ ಕೋರ್ಸ್‌ಗಳ ಮಹತ್ವ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಬೇಕು.
ಚಾರ್ಟರ್ಡ್ ಅಕೌಂಟೆನ್ಸಿ (CA)
ಕಂಪನಿ ಸೆಕ್ರಟರಿ (CS)
ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆನ್ಸಿ (CMA)
ಡಿಜಿಟಲ್ ಮಾರ್ಕೆಟಿಂಗ್, ಡೇಟಾ ಅನಾಲಿಟಿಕ್ಸ್
ಗ್ರಾಫಿಕ್ ಡಿಸೈನ್, ಅನಿಮೇಶನ್
ಇವುಗಳು ವಿದ್ಯಾರ್ಥಿಗಳಿಗೆ ಕೇವಲ ಉದ್ಯೋಗವಲ್ಲ, ಉದ್ಯಮಿತ್ವದ ದಾರಿಯನ್ನೂ ತೆರೆದಿಡುತ್ತವೆ.
ಕೌಶಲ್ಯಾಧಾರಿತ ಶಿಕ್ಷಣ – ಕಾಲದ ಅಗತ್ಯ
ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೌಶಲ್ಯ (Skills) ಪ್ರಮುಖ ಪಾತ್ರವಹಿಸುತ್ತಿದೆ. ಸಂವಹನ ಕೌಶಲ್ಯ, ಡಿಜಿಟಲ್ ಜ್ಞಾನ, ಸಮಸ್ಯೆ ಪರಿಹಾರ ಸಾಮರ್ಥ್ಯ, ತಂಡದಲ್ಲಿ ಕೆಲಸ ಮಾಡುವ ಗುಣಗಳು ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ.
ಶಿಕ್ಷಣವು ಪುಸ್ತಕಾಧಾರಿತವಾಗಿರದೆ, ಪ್ರಾಯೋಗಿಕ ಅನುಭವದೊಂದಿಗೆ ಸಾಗಬೇಕು. ಇಂಟರ್ನ್‌ಶಿಪ್‌ಗಳು, ತರಬೇತಿಗಳು ಮತ್ತು ಕಾರ್ಯಾಗಾರಗಳು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ಪೋಷಕರ ಪಾತ್ರ
ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರದಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಕೆಲವೊಮ್ಮೆ ಪೋಷಕರು ತಮ್ಮ ಆಸೆಯನ್ನು ಮಕ್ಕಳ ಮೇಲೆ ಹೇರಲು ಯತ್ನಿಸುತ್ತಾರೆ. ಆದರೆ ಪ್ರತಿ ಮಗುವಿಗೂ ವಿಭಿನ್ನ ಆಸಕ್ತಿ ಮತ್ತು ಸಾಮರ್ಥ್ಯ ಇರುತ್ತದೆ. ಆದ್ದರಿಂದ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು, ಅವರಿಗೆ ಮಾರ್ಗದರ್ಶನ ನೀಡುವುದು ಸೂಕ್ತ.
ಸರಿಯಾದ ನಿರ್ಧಾರ ಹೇಗೆ?
ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಕೆಳಗಿನ ಅಂಶಗಳನ್ನು ಗಮನಿಸಬೇಕು:
ಸ್ವಂತ ಆಸಕ್ತಿ ಮತ್ತು ಶಕ್ತಿ
ಭವಿಷ್ಯದ ಉದ್ಯೋಗಾವಕಾಶಗಳು
ತಂತ್ರಜ್ಞಾನ ಅಭಿವೃದ್ಧಿಯ ಪರಿಣಾಮ
ಮಾರ್ಗದರ್ಶಕರ ಸಲಹೆ
ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದೊಂದಿಗೆ ತೆಗೆದುಕೊಳ್ಳುವ ನಿರ್ಧಾರವು ಜೀವನವನ್ನು ಯಶಸ್ವಿಯನ್ನಾಗಿ ಮಾಡುತ್ತದೆ.
ಎಸ್‌ಎಸ್‌ಎಲ್‌ಸಿ ನಂತರದ ಹಂತವು ಜೀವನದ ಪ್ರಮುಖ ತಿರುವಾಗಿದೆ. ಇಂದಿನ ಯುವಕರಿಗೆ ಅನೇಕ ದಾರಿಗಳಿವೆ, ಆದರೆ ಎಲ್ಲ ದಾರಿಗಳೂ ಯಶಸ್ಸಿಗೆ ಕರೆದೊಯ್ಯುವುದಿಲ್ಲ. ಸರಿಯಾದ ದಾರಿಯನ್ನು ಆಯ್ಕೆ ಮಾಡುವುದು, ನಿರಂತರ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ಮುಂದುವರಿಯುವುದು ಅತ್ಯಂತ ಮುಖ್ಯ.
“ಆಯ್ಕೆ ಸರಿಯಾದರೆ ಭವಿಷ್ಯ ಉಜ್ವಲ” ಎಂಬ ಮಾತು ಇಂದಿನ ವಿದ್ಯಾರ್ಥಿಗಳಿಗೆ ಬಹಳ ಅನ್ವಯಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಕನಸುಗಳನ್ನು ಗುರುತಿಸಿ, ಸರಿಯಾದ ಮಾರ್ಗದಲ್ಲಿ ಹೆಜ್ಜೆ ಇಡುವುದು ಅವಶ್ಯಕ.
—ಡಾ. ವೆಂಕಟೇಶ್ ಬಾಬು ಎಸ್