LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತೀಯ ರೈಲ್ವೆಯಲ್ಲಿ ಗಂಭೀರ ರೈಲು ಅಪಘಾತಗಳ ಗಣನೀಯ ಇಳಿಕೆ

ಬೆಂಗಳೂರು : ಭಾರತೀಯ ರೈಲ್ವೆಯಲ್ಲಿ ಕೆಲ ವರ್ಷಗಳಿಂದ ಗಂಭೀರ ರೈಲು ಅಪಘಾತಗಳ ಸಂಖ್ಯೆಯಲ್ಲಿ ಗಮನಾರ್ಹ ಹಾಗೂ ನಿರಂತರ ಇಳಿಕೆ ಕಂಡುಬಂದಿದೆ.

ಇದು ಸುರಕ್ಷತೆ, ಆಧುನಿಕೀಕರಣ ಮತ್ತು ದೃಢವಾದ ಕಾರ್ಯಾಚರಣಾ ಕ್ರಮಗಳ ಮೇಲೆ ಸಂಸ್ಥೆ ನೀಡಿರುವ ನಿರಂತರ ಪ್ರಯತ್ನಗಳ ಪ್ರತೀಕವಾಗಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಗಂಭೀರ ರೈಲು ಅಪಘಾತಗಳ ಸಂಖ್ಯೆ ಕೆಳಮುಖ ಪ್ರವೃತ್ತಿಯನ್ನು ಸ್ಪಷ್ಟವಾಗಿ ತೋರಿಸುತಿದೆ.

2005–06ರಲ್ಲಿ 234 ಅಪಘಾತಗಳಿಂದ ಪ್ರಸ್ತುತ ವರ್ಷದಲ್ಲಿ (ನವೆಂಬರ್ 2025ರವರೆಗೆ) ಕೇವಲ 11 ಅಪಘಾತಗಳಿಗೆ ಇಳಿಕೆಯಾಗಿರುವುದು ಭಾರತೀಯ ರೈಲ್ವೆಯ ಬಹುಮುಖ ಸುರಕ್ಷತಾ ಕಾರ್ಯತಂತ್ರದ ಯಶಸ್ಸನ್ನು ಸ್ಪಷ್ಟಪಡಿಸುತ್ತದೆ.

ಇದಕ್ಕೆ ಪ್ರಮುಖ ಕಾರಣಗಳಾಗಿ ಪಥ ನಿರ್ವಹಣಾ ಮಾನದಂಡಗಳ ಸುಧಾರಣೆ, ಸಿಗ್ನಲಿಂಗ್ ಹಾಗೂ ರೋಲಿಂಗ್ ಸ್ಟಾಕ್ನಲ್ಲಿ ತಾಂತ್ರಿಕ ಅಭಿವೃದ್ಧಿ, ಆಧುನಿಕ ಸುರಕ್ಷತಾ ವ್ಯವಸ್ಥೆಗಳ ಅಳವಡಿಕೆ, ಸಿಬ್ಬಂದಿಗೆ ತೀವ್ರ ತರಬೇತಿ, ಮತ್ತು ಸುರಕ್ಷತಾ ನಿಯಮಾವಳಿಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆ ಕ್ರಮಗಳು ಸೇರಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.



ಪ್ರಯಾಣಿಕರ ಸುರಕ್ಷತೆಯನ್ನು ಅತ್ಯುನ್ನತ ಜವಾಬ್ದಾರಿಯಾಗಿ ಪರಿಗಣಿಸಿರುವ ಭಾರತೀಯ ರೈಲ್ವೆ, ಮುಂದಿನ ವರ್ಷಗಳಲ್ಲಿ ಅಪಘಾತಗಳ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡುವ ಉದ್ದೇಶದಿಂದ ಸುರಕ್ಷತಾ ಮೂಲಸೌಕರ್ಯವನ್ನು ಬಲಪಡಿಸಲು ಹಾಗೂ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನು ಜಾರಿಗೆ ತರಲು  ಬದ್ಧವಾಗಿದೆ ಎಂದಿದೆ.

  • 2005–06: 234 ಅಪಘಾತಗಳು

  • 2009–10: 165 ಅಪಘಾತಗಳು

  • 2014–15: 135 ಅಪಘಾತಗಳು

  • 2019–20: 55 ಅಪಘಾತಗಳು

  • 2020–21 (ಕೊವಿಡ್ ವರ್ಷ): 22 ಅಪಘಾತಗಳು

  • 2021–22 (ಕೊವಿಡ್ ವರ್ಷ): 35 ಅಪಘಾತಗಳು

  • 2022–23: 48 ಅಪಘಾತಗಳು

  • 2023–24: 40 ಅಪಘಾತಗಳು

  • 2024–25: 31 ಅಪಘಾತಗಳು

  • 2025–26 (ಏಪ್ರಿಲ್–ನವೆಂಬರ್): 11 ಅಪಘಾತಗಳು

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST