LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿ ಶಾಸಕರು, ಸಂಸದರಿಗೆ ವಿಶೇಷ ತರಬೇತಿ ಶಿಬಿರ

ಭೋಪಾಲ್ : ಮುಂದಿನ ಚುನಾವಣಾ ತಯಾರಿಗಳ ಅಂಗವಾಗಿ ಬಿಜೆಪಿ ಮಧ್ಯಪ್ರದೇಶದ  ಪಚ್ಮರಿಯಲ್ಲಿ ಇಂದಿನಿಂದ  ಜೂನ್ 16ರವರೆಗೆ ಬಿಜೆಪಿ ಶಾಸಕರು ಹಾಗೂ ಸಂಸದರಿಗೆ  ಮೂರು ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಶಿಬಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.



ಈ ಶಿಬಿರದಲ್ಲಿ 201 ಜನ ಪ್ರತಿನಿಧಿಗಳು ಭಾಗವಹಿಸಲಿದ್ದು, ಪಕ್ಷದ ಕಾರ್ಯಪಧ್ಧತಿ, ಸಾರ್ವಜನಿಕ ವ್ಯವಹಾರ, ಸಮಯ ನಿರ್ವಹಣೆ ಮತ್ತು ತಂತ್ರಜ್ಞಾನ ಬಳಕೆಯ ಬಗ್ಗೆ ತರಬೇತಿ ನೀಡಲಾಗುವುದು.

ಪ್ರಧಾನಿ ಮೋದಿ ನೇತೃತ್ವದ ಸರಕಾರದ ಸಾಧನೆಗಳ ಪ್ರದರ್ಶನವೂ ನಡೆಯಲಿದೆ. ಇದೇ ವೇಳೆ ಎಲ್ಲ ಶಾಸಕರು ಮತ್ತು ಸಂಸದರು ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದಲ್ಲಿ ಮರ ನೆಡುವ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST