ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀಕ್ಷೇತ್ರ ಕುಂಭಕೋಣಂಗೆ ಭೇಟಿ
ಕುಂಭಕೋಣಂ : ಶ್ರೀ ವಿಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀಕ್ಷೇತ್ರ ಕುಂಭಕೋಣಂಗೆ ಭೇಟಿ ನೀಡಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.
ಶ್ರೀ ವಿಜಯೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ ಪ.ಪೂ.ಶ್ರೀ ಸ್ವಾಮೀಜಿಯವರು ವಿಶೇಷ ಪಂಚಾಮೃತಾಭಿಷೇಕ ಅರ್ಪಿಸಿದರು. ಇದರ ನಂತರ ದಿವ್ಯವಾದ ಚತುರ್ಯುಗ ಮೂರ್ತಿ ಬ್ರಹ್ಮಕರಾರ್ಚಿತ ಶ್ರೀ ಮೂಲರಾಮದೇವರ ಪೂಜೆ, ಶ್ರೀ ವಿಜಯೀಂದ್ರ ತೀರ್ಥರ ಬೃಂದಾವನಕ್ಕೆ ಮಹಾ ಮಂಗಳಾರತಿಯೊಂದಿಗೆ ಮುಕ್ತಾಯವಾಯಿತು.
[gallery ids="23796,23797,23798,23799,23800,23801"]
ಈ ಪುಣ್ಯ ಸಂಧರ್ಭದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು, ಶಿಷ್ಯರು, ಪೂಜ್ಯ ಶ್ರೀ ಸ್ವಾಮೀಜಿಯವರ ಆಶೀರ್ವಾದ ಪಡೆದು, ಶ್ರದ್ಧಾಭಕ್ತಿಯಿಂದ ಆಧ್ಯಾತ್ಮಿಕವಾಗಿ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.