LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭುವನೇಶ್ವರದ ಕಳಿಂಗ ಶಿಕ್ಷಣ ಸಂಸ್ಥೆಗಳಿಗೆ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಭೇಟಿ

ಶಿಕ್ಷಣ ಸಂಸ್ಥೆಯಲ್ಲಿ ಅತ್ಯಾಧುನಿಕ ಶಿಕ್ಷಣ, ವಿನೂನತ ಬೋಧನಾ ಕ್ರಮಗಳ ಬಗ್ಗೆ ಡಾ. ಅಚ್ಯುತ ಸಮಂತ ಅವರ ಜೊತೆ ಚರ್ಚೆ

 

ಬೆಂಗಳೂರು :  ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಡೀಮ್ಡ್ ವಿವಿ ಮಾನ್ಯತೆ ಪಡೆದಿರುವ ಭುವನೇಶ್ವರದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ – ಕಿಸ್, ಕಳಿಂಗ ಇನ್ಸ್ಟಿಟ್ಯೂಟ್ ಆಪ್ ಇಂಡಸ್ಟ್ರೀಯಲ್ ಟೆಕ್ನಾಲಜಿ -–ಕಿಟ್ ಮತ್ತು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ -ಕಿಮ್ಸ್ ಗೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಭೇಟಿ ನೀಡಿದರು.



ಒಡಿಶಾ ಪ್ರವಾಸದಲ್ಲಿರುವ ಅವರು, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ವ್ಯಾಪಕ ಅಧ್ಯಯನ ಮಾಡಿರುವ ಹಾಗೂ ಶಿಕ್ಷಣ ತಜ್ಞ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಬಂಢಾರಿ ಅವರ ಜೊತೆಗೂಡಿ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿದರು.

 

ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ – ಕಿಸ್ ಸಂಸ್ಥೆ ಯಲ್ಲಿ 40 ಸಾವಿರ ಬಡ ಬುಡಕಟ್ಟು ಮಕ್ಕಳು ಕೌಶಲ್ಯ  ತರಬೇತಿ ಪಡೆಯುತ್ತಿರುವುದನ್ನು ನೋಡಿ ಸಂತಸ ವ್ಯಕ್ತಪಡಿಸಿದರು.



ಬಳಿಕ ಕಳಿಂಗ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಅಚ್ಯುತ ಸಮಂತ ಅವರ ಜೊತೆ ಶಿಕ್ಷಣ ಸಂಸ್ಥೆಯ ಬೆಳವಣಿಗೆ, ವೈದ್ಯಕೀಯ ಶಿಕ್ಷಣ, ಕೈಗೊಂಡಿರುವ ವಿನೂತನ ಕ್ರಮಗಳು, ಅತ್ಯಾಧುನಿಕ ತಂತ್ರಜ್ಞಾನದ ಬೋಧನೆ, ಬುಡಕಟ್ಟು ಸಮುದಾಯದ ಬಡ ಮಕ್ಕಳ ಅಧ್ಯಯನ, ಕೌಶಲ್ಯ ತರಬೇತಿ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದರು. ಒಟ್ಟಾರೆ ಕಳಿಂಗ ಶಿಕ್ಷಣ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

 



ಇದೇ ಸಂದರ್ಭದಲ್ಲಿ ಮಾನ್ಯ ಸಚಿವರು ಹಾಗು ಶಾಸಕರಿಗೆ ಅಚ್ಯುತ ಸಮಂತ ಅವರು ತಾವೇ ಬರೆದಿರುವ 'ಆರ್ಟ್ ಆಫ್ ಗಿವಿಂಗ್' ಹಾಗೂ ' ಮೈ ಮದರ್ ಮೈ ಹೀರೋ' ಪುಸ್ತಕಗಳನ್ನು ನೀಡಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST