ಶಿಕ್ಷಣ, ಸೇರ್ಪಡೆ ಸಬಲೀಕರಣಕ್ಕಾಗಿ ಚೆಸ್ ಉತ್ತಮ ಸಾಧನವಾಗಲಿ
ಭುವನೇಶ್ವರ : ಇಲ್ಲಿನ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಮತ್ತು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಕೆಐಎಸ್‌ಎಸ್) ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್‌ನ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲು ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ಡೆಸ್ ಎಚೆಕ್ಸ್ (FIDE) ಮತ್ತು ಆಲ್ ಇಂಡಿಯಾ ಚೆಸ್ ಫೆಡರೇಶನ್ (AICF) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಭುವನೇಶ್ವರದಲ್ಲಿ 2026 ರ ಜನವರಿಯಲ್ಲಿ ಈ ಸಮ್ಮೇಳನ ನಡೆಯಲಿದ್ದು, ಕೆಐಐಟಿ ವಿಶ್ವವಿದ್ಯಾಲಯವು ಆತಿಥ್ಯ ವಹಿಸಲಿದೆ.
ಕೆಐಐಟಿ ಹಾಗೂ ಕೆಐಎಸ್‌ಎಸ್ ನ ಸಂಸ್ಥಾಪಕರಾದ ಶ್ರೀ ಅಚ್ಯುತ ಸಮಂತ ಹಾಗೂ ಫಿಡೆ ಅಧ್ಯಕ್ಷರಾದ ಅರ್ಕಾರ್ಡಿ ಡ್ವೊರ್ಕೊವಿಚ್ ಮತ್ತು ಎಐಸಿಎಫ್ ಅಧ್ಯಕ್ಷರಾದ ಶ್ರೀ ನಿತಿನ್ ನಾರಂಗ್ ಅವರು ಒಪ್ಪಂದಕ್ಕೆ ಗೋವಾದಲ್ಲಿ ಸಹಿ ಹಾಕುವ ವೇಳೆ ಉಪಸ್ಥಿತರಿದ್ದರು.
ಈ ಪಾಲುದಾರಿಕೆಯು ಕೆಐಐಟಿ, ಕೆಐಎಸ್‌ಎಸ್ ಮತ್ತು ಒಡಿಶಾಕ್ಕೆ ಹೆಮ್ಮೆಯ ವಿಷಯವಾಗಿದೆ. ಇದು ಜಾಗತಿಕ ಕ್ರೀಡಾ ಸಂಸ್ಥೆಗಳ ಬೆಳೆಯುತ್ತಿರುವ ನಂಬಿಕೆಯನ್ನು ಮತ್ತು ಕ್ರೀಡೆಗಳ ಮೂಲಕ ಶಿಕ್ಷಣದ ಶಕ್ತಿಯ ಮೇಲಿನ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಕೆಐಐಟಿ ಹಾಗೂ ಕೆಐಎಸ್‌ಎಸ್ ಸದಾ ಶಿಕ್ಷಣ ಚಟುವಟಿಕೆಗೆ ಜೊತೆಗೆ ಕ್ರೀಡಾ ಮನೋಭಾವ, ಶಿಸ್ತು ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುತ್ತಾ ಬರುತ್ತಿದೆ. ಅಚ್ಯುತ ಸಮಂತ ಅವರು, ಇಂತಹ ಚಟುವಟಿಕೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದ್ದಾರೆ. ಕ್ರೀಡೆಗಳ ಮೂಲಕ ಶಿಕ್ಷಣದ ಶಕ್ತಿಯ ಮೇಲಿನ ಸಮಂತಾ ಅವರ ನಂಬಿಕೆಗೆ ಇದು ನಿದರ್ಶನವಾಗಿದೆ.
ಕ್ರೀಡಾ ಶಿಕ್ಷಣ ಹಾಗೂ ತರಬೇತಿಯಲ್ಲಿ ಜಾಗತಿಕ ಶ್ರೇಷ್ಠ ಗುಣಮಟ್ಟವನ್ನು ಉತ್ತೇಜಿಸಲು ಕೆಐಐಟಿ ಹಲವಾರು ಅಂತರರಾಷ್ಟ್ರೀಯ ಕ್ರೀಡಾ ಸಂಸ್ಥೆಗಳೊಂದಿಗೆ ಮತ್ತು ಅನೇಕ ರಾಷ್ಟ್ರೀಯ ಒಕ್ಕೂಟಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಈಗ, ವಿಶ್ವದ ಅತ್ಯುಚ್ಚ ಚೆಸ್ ಸಂಸ್ಥೆಯಾದ ಫಿಡೆ ಜೊತೆಗಿನ ಪಾಲುದಾರಿಕೆಯು ಸಂಸ್ಥೆಯ ಪ್ರಯಾಣಕ್ಕೆ ಮತ್ತೊಂದು ಕಿರೀಟವನ್ನು ಸೇರಿಸಿದೆ.

"ಫಿಡೆ ಅಧ್ಯಕ್ಷರಾದ ಅರ್ಕಾರ್ಡಿ ಡ್ವೊರ್ಕೊವಿಚ್ ಮತ್ತು ಎಐಸಿಎಫ್ ಅಧ್ಯಕ್ಷರಾದ ಶ್ರೀ ನಿತಿನ್ ನಾರಂಗ್ ಅವರು ನಮ್ಮ ಮೇಲೆ ಹಾಗೂ ನಮ್ಮ ಸಂಸ್ಥೆಯ ಮೇಲೆ ಇಟ್ಟಿರುವ ಅಪಾರ ನಂಬಿಕೆಗೆ ಆಭಾರಿಯಾಗಿದ್ದೇನೆ. ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಗೌರವವಿದೆ. ಕ್ರೀಡೆ ಮತ್ತು ಸಾಮಾಜಿಕ ಪರಿವರ್ತನೆಯೊಂದಿಗೆ ಶಿಕ್ಷಣವನ್ನು ಸಂಯೋಜಿಸುವ ಕೆಐಐಟಿ ಮತ್ತು ಕಿಐಐಎಸ್ ನ ದೃಷ್ಟಿಕೋನದ ಬಗ್ಗೆ ಅವರಿಗಿರುವ ಮೆಚ್ಚುಗೆ ಅರ್ಥಪೂರ್ಣವಾಗಿದೆ" ಎಂದು ಡಾ. ಅಚ್ಯುತ ಸಮಂತ ಹೇಳಿದರು. ಜಾಗತಿಕ ಚೆಸ್ ಆಂದೋಲನದಲ್ಲಿ ಭಾರತವನ್ನು ನಾಯಕನನ್ನಾಗಿ ಮಾಡಲು ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಪಾಲುದಾರಿಕೆಗೆ ಅವಕಾಶ ನೀಡಿದ್ದಕ್ಕೆ ಫಿಡೆ ಮತ್ತು ಎಐಸಿಎಫ್ ಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಣ, ಸೇರ್ಪಡೆ ಮತ್ತು ಸಬಲೀಕರಣಕ್ಕಾಗಿ ಚೆಸ್ ಅನ್ನು ಒಂದು ಉತ್ತಮ ಸಾಧನವಾಗಿ ಉತ್ತೇಜಿಸಲು ಹಾಗೂ ಜಾಗತಿಕ ಚೆಸ್ ಆಂದೋಲನದಲ್ಲಿ ನಮ್ಮ ದೇಶವನ್ನು ನಿಜವಾದ ನಾಯಕನನ್ನಾಗಿ ಮಾಡಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಚೆಸ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬೆಂಬಲ ಮತ್ತು ಸಹಕಾರ ನೀಡಿದ್ದಕ್ಕಾಗಿ ಒಡಿಶಾ ಚೆಸ್ ಅಸೋಸಿಯೇಷನ್‌ಗೆ ಇದೇ ವೇಳೆ ಧನ್ಯವಾದಗಳನ್ನು ತಿಳಿಸಿದರು. ಅರ್ಕಾರ್ಡಿ ಡ್ವೊರ್ಕೊವಿಚ್ ಅವರು ಮಾತನಾಡಿ, ಈ ಒಪ್ಪಂದವು ಶಾಲಾ ಕಾಲೇಜುಗಳಲ್ಲಿ ಚೆಸ್ ಅನ್ನು ಉತ್ತೇಜಿಸಲು ಮತ್ತು ಭಾರತದಲ್ಲಿ ಅಲ್ಲದೆ ಜಾಗತಿಕವಾಗಿಯೂ ಉತ್ತಮ ಅಭ್ಯಾಸಗಳು ಮತ್ತು ಜ್ಞಾನವನ್ನು ಹಂಚಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ" ಎಂದು ಹೇಳಿದರು.
ಎಐಸಿಎಫ್ ಅಧ್ಯಕ್ಷರಾದ ನಿತಿನ್ ನಾರಂಗ್ ಅವರು ಮಾತನಾಡಿ, ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಹೆಮ್ಮೆಯ ಕ್ಷಣವಾಗಿದೆ. ಪ್ರತಿ ಶಾಲೆಯು ಮಕ್ಕಳಿಗೆ ಚೆಸ್ ನಲ್ಲಿ ಅವಕಾಶ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಎಐಸಿಎಫ್, ಕೆಐಐಟಿ ಮತ್ತು ಫಿಡೆ ಎಲ್ಲ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಮಾಡುತ್ತವೆ ಎಂಬ ವಿಶ್ವಾಸವಿದೆ ಎಂದರು.