LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತೆ ದಿನ

ಇಡೀ ದೇಶದಲ್ಲಿ ಕರಾವಳಿ ಸ್ವಚ್ಛತೆ ಅಭಿಯಾನ ನಡೆಸಿದ ಎಚ್.ಸಿ.ಎಲ್ ಫೌಂಡೇಶನ್

ಬೆಂಗಳೂರು : ಜಾಗತಿಕ ತಂತ್ರಜ್ಞಾನ ಕಂಪನಿ ಎಚ್.ಸಿ.ಎಲ್ ಟೆಕ್ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಕಾರ್ಯಸೂಚಿ ಮುನ್ನಡೆಸುವ ಎಚ್.ಸಿ.ಎಲ್ ಫೌಂಡೇಶನ್ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕರಾವಳಿ ಸ್ವಚ್ಛತೆ ಅಭಿಯಾನವನ್ನು ನಡೆಸುತ್ತಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ ಸ್ಥಳೀಯರು, ಎಚ್.ಸಿ.ಎಲ್ ಉದ್ಯೋಗಿಗಳು ಮತ್ತು ಪಾಲುದಾರ ಸಂಸ್ಥೆಗಳು ಭಾಗವಹಿಸಿದ್ದು, ಅಂದಾಜು 20,000 ಕಿಲೋ ಸಮುದ್ರ ಕಸವನ್ನು ತೆಗೆದುಹಾಕಿದೆ. ಇದರಲ್ಲಿ 5,000ಕ್ಕೂ ಅಧಿಕ ಸ್ವಯಂಸೇವಕರು ಭಾಗವಹಿಸಿದ್ದರು. ಇಲ್ಲಿ ಯಶಸ್ವಿಯಾಗಿ 560,000 ಕೆ.ಜಿ ಸಮುದ್ರಕಸವನ್ನು ಭಾರತದ ಕರಾವಳಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.



2024 ರಲ್ಲಿ ಸಮುದ್ರ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು  ಸಾಧಿಸಲಾಗಿದ್ದು, ಭಾರತದ ಜಲಚರ ಜೀವವೈವಿಧ್ಯತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಎಚ್.ಸಿ.ಎಲ್ ಫೌಂಡೇಶನ್, ಭಾರತದ ಕೋಸ್ಟ್ ಗಾರ್ಡ್ ಮತ್ತು ದಿ ಹ್ಯಾಬಿಟಾಟ್ಸ್ ಟ್ರಸ್ಟ್ ಒಪ್ಪಂದಕ್ಕೆ ಸಹಿ ಮಾಡಿವೆ. ಈ ಪಾಲುದಾರಿಕೆ ಅಡಿಯಲ್ಲಿ, ವೈಜ್ಞಾನಿಕ ಪರಿಣಿತಿ, ಕಾರ್ಯಾಚರಣೆ ಸಾಮರ್ಥ್ಯ ಮತ್ತು ಬೇರು ಮಟ್ಟದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಸಾಧಿಸುವ ಮೂಲಕ ಇಡೀ ದೇಶದ ಕರಾವಳಿ ಪ್ರದೇಶದಲ್ಲಿ ಸಂರಕ್ಷಣೆಗೆ ಪ್ರಯತ್ನ ನಡೆಸಲಾಗುತ್ತದೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST