LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಮಿಳುನಾಡು : ಎಐಎಡಿಎಂಕೆ ಪರವಾಗಿ  ಎಡಪ್ಪಾಡಿ ಪಳನಿಸ್ವಾಮಿ ಪ್ರವಾಸ

ಬಿಜೆಪಿ ನಾಯಕರಿಗೆ ಆಹ್ವಾನ..

ಪ್ರತ್ಯಕ್ಷ ವರದಿ: ಡಾ.ವರ ಪ್ರಸಾದ ರಾವ್ ಪಿ ವಿ.

 2026 ರ ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವು ತಿಂಗಳುಗಳು ಬಾಕಿ ಇರುವುದರಿಂದ ತಮಿಳು ನಾಡಿನ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ವಿಶೇಷವಾಗಿ ತಮಿಳುನಾಡಿನಲ್ಲಿ ವಿರೋಧ ಪಕ್ಷವಾದ ಎಐಎಡಿಎಂಕೆ ಪರವಾಗಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಇದೇ ತಿಂಗಳು ಜುಲೈ 7, 2025 ರಂದು ರಾಜ್ಯದ ಎಲ್ಲಡೇ ತಮ್ಮ ರಾಜಕೀಯ  ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ಅವರು "ಜನರನ್ನು ರಕ್ಷಿಸಿ ಮತ್ತು ತಮಿಳುನಾಡನ್ನು ಉಳಿಸಿ" ಹೆಸರಿನಲ್ಲಿ ತಮಿಳುನಾಡಿನಾದ್ಯಂತ ಈ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಸದಸ್ಯರನ್ನು ಸಹ ಈ ಪ್ರವಾಸದ ಸಮಯದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. "ಜನರನ್ನು ರಕ್ಷಿಸಿ ಮತ್ತು ತಮಿಳುನಾಡನ್ನು ಉಳಿಸಿ"  ಈ ಆಹ್ವಾನದ ಹೆಸರಿನಲ್ಲಿ ಜುಲೈ 7, 2025 ರಂದು ಪ್ರಾರಂಭವಾಗುವ ಪ್ರಚಾರ ಪ್ರವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಯಿನಾರ್ ನಾಗೇಂದ್ರನ್ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.ಈ ಬಗ್ಗೆ ಇಂದು ಎಡಪ್ಪಾಡಿ ಪಳನಿಸ್ವಾಮಿ ಅವರು ದೃಢಪಡೆಸಿದ್ದಾರೆ.



. "ಜನರನ್ನು ರಕ್ಷಿಸಿ ಮತ್ತು ತಮಿಳುನಾಡನ್ನು ಉಳಿಸಿ"  - ಎಡಪ್ಪಾಡಿ ಪಳನಿಸ್ವಾಮಿ ಪ್ರವಾಸ:

 

2026 ರ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವು ತಿಂಗಳುಗಳು ಬಾಕಿ ಇರುವಾಗ, ಎಐಎಡಿಎಂಕೆ ಪಕ್ಷದ ವತಿಯಿಂದ ತೀವ್ರ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು  ಜುಲೈ 7, 2025 ರಂದು ತಮ್ಮ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ಈ ಪ್ರವಾಸದ ಸಮಯದಲ್ಲಿ, ಅವರು ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಜನರನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಚರ್ಚೆ ಸಂವಾದ ನಡೆಸಲಿದ್ದಾರೆ.  ಮೊದಲ ಹಂತದಲ್ಲಿ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳಯಂ ಕ್ಷೇತ್ರದಿಂದ ಪ್ರವಾಸ ಆರಂಭವಾಗಲಿದೆ.

 

ಬಿಜೆಪಿ ನಾಯಕರಿಗೆ ಹಾಗೂ  ಸದಸ್ಯರಿಗೆ ಆಹ್ವಾನ:

 

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರ ಪ್ರವಾಸದ ಉದ್ಘಾಟನಾ ಸಮಾರಂಭಕ್ಕೆ ಮೈತ್ರಿಕೂಟದ ಪಕ್ಷವಾಗಿರುವ  ಬಿಜೆಪಿ ಪಕ್ಷವನ್ನು  ಆಹ್ವಾನ ನೀಡಲಾಗಿದೆ. "ಜನರನ್ನು ರಕ್ಷಿಸಿ ಮತ್ತು ತಮಿಳುನಾಡನ್ನು ಉಳಿಸಿ"  ಈ ಆಹ್ವಾನದ ಹೆಸರಿನಲ್ಲಿ   , ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಪ್ರವಾಸದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅದೇ ರೀತಿ, ಎಐಎಡಿಎಂಕೆ ಮಾತ್ರವಲ್ಲದೆ ಮೈತ್ರಿ ಪಕ್ಷ ಬಿಜೆಪಿ ಕೂಡ ಈ ಸಂಪೂರ್ಣ ಪ್ರವಾಸದಲ್ಲಿ ಭಾಗವಹಿಸಲಿದೆ ಎಂದು ವರದಿಯಾಗಿದೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST