LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚೆನ್ನೈನ 50 ಸ್ಥಳಗಳಲ್ಲಿ ಕುಡಿಯುವ ನೀರಿನ ಎಟಿಎಂಗಳು ಚಾಲನೆ

ಚೆನ್ನೈ : ಚೆನ್ನೈ ಇತ್ತೀಚೆಗೆ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದನ್ನು ಪರಿಹರಿಸಲು ತಮಿಳುನಾಡು ಸರ್ಕಾರ ವಿವಿಧ ನಗರ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಭಾಗವಾಗಿ, ಚೆನ್ನೈನಲ್ಲಿ ಸಾರ್ವಜನಿಕರು ಸೇರುವ ಪ್ರದೇಶಗಳಲ್ಲಿ ಉಚಿತ ಕುಡಿಯುವ ನೀರಿನ ಎಟಿಎಂಗಳನ್ನು ಸ್ಥಾಪಿಸಲಾಗಿದೆ.



ಚೆನ್ನೈನ ಮರೀನಾ ಬೀಚ್ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಉಚಿತ ಕುಡಿಯುವ ನೀರು ಒದಗಿಸುವ ಸ್ವಯಂಚಾಲಿತ ಯಂತ್ರಗಳ ಬಳಕೆಯ ಎ ಟಿ ಎಂ ವನ್ನು ಉದ್ಘಾಟಿಸಿದರು.

ಚೆನ್ನೈ ಕುಡಿಯುವ ನೀರಿನ ಮಂಡಳಿಯು ಜನರು ಹೆಚ್ಚು ಸೇರುವ 50 ಸ್ಥಳಗಳಲ್ಲಿ ಕುಡಿಯುವ ನೀರಿನ ಎಟಿಎಂಗಳನ್ನು ಸ್ಥಾಪಿಸಲಿದೆ.ಇವುಗಳಲ್ಲಿ, ಒಂದು ಸಮಯದಲ್ಲಿ ಒಂದು ಟಂಬ್ಲರ್‌ನಲ್ಲಿ 150 ಮಿಲಿ ನೀರನ್ನು ಪಡೆಯಬಹುದು. ನೀರಿನ ಬಾಟಲಿಗಳಲ್ಲಿ 1 ಲೀಟರ್ ವರೆಗೆ ನೀರನ್ನು ಪಡೆಯಬಹುದು ಎಂದು ವರದಿಯಾಗಿದೆ.



 ಇದರ ಮೂಲಕ ಜನರು ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಪಡೆಯಲು ಸಾಧ್ಯವಾಗುತ್ತದೆ. ಈ ಎಟಿಎಂಗಳನ್ನು ಕಡಲತೀರಗಳು, ಬಸ್ ನಿಲ್ದಾಣಗಳು, ಉದ್ಯಾನವನಗಳು, ಶಾಲೆಗಳು, ಕಾಲೇಜು ಪ್ರದೇಶಗಳು, ಮಾರುಕಟ್ಟೆಗಳು ಮುಂತಾದ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST