ತಿರುಮಲ: ವಿಶ್ವವಿಖ್ಯಾತ ತಿರುಪತಿ ವೆಂಕಟರಮಣನ ದರ್ಶನಕ್ಕೆ ಹಲವಾರು ರಾಜ್ಯಗಳಿಂದ ಆಗಮಿಸಿರುವ ಭಕ್ತರು ತಿರುಪತಿ-ತಿರುಮಲದಲ್ಲಿ ದುಡು ದುಡು ಎಲ್ಲೆಡೆ ಹರಿದಾಡುತ್ತಿದ್ದು ಧನ್ಯತಾಭಾವ ಹೊಂದುತ್ತಿದ್ದಾರೆ. ಇಂದೂ ಸಹ ತಿರುಮಲದಲ್ಲಿ ಎಂದಿನಂತೆ ಭಕ್ತರ ಸಂಚಾರ ಸಾಮಾನ್ಯವಾಗಿತ್ತು.
ತಿರುಪತಿ ತಿರುಮಲ ದೇವಸ್ಥಾನದಿಂದ ಭಕ್ತರಿಗೆ ಉಚಿತ ದರ್ಶನಕ್ಕಾಗಿ ವ್ಯವಸ್ಥೆ ಮಾಡಿದ್ದು 10 ಕಾಂಪಾರ್ಟ್ಮೆಂಟ್‌ಗಳಲ್ಲಿ ಭಕ್ತರು ಕಾಯುತ್ತಿದ್ದಾರೆ. ಸರ್ವದರ್ಶನ ಭಕ್ತರಿಗೆ 8 ಗಂಟೆಗಳ ಸಮಯ ಬೇಕಾಗುತ್ತದೆ. ರೂ. 300 ವಿಶೇಷ ದರ್ಶನಕ್ಕೆ 3 ಗಂಟೆಗಳ ಸಮಯ ಬೇಕಾಗುತ್ತದೆ. ಸರ್ವದರ್ಶನ ಟೋಕನ್ ಪಡೆದ ಭಕ್ತರಿಗೆ 3-5 ಗಂಟೆಗಳ ಸಮಯ ಬೇಕಾಗುತ್ತದೆ ಎಂದು ಟಿಟಿಡಿ ತಿಳಿಸಿದೆ.
ನಿನ್ನೆ ಒಂದೇ ದಿನ ಅಖಿಲಾಂಡ ಕೋಟಿ ಬ್ರಾಹ್ಮಾಂಡ ನಾಯಕನಾದ ಶ್ರೀನಿವಾಸ ಸ್ವಾಮಿಯನ್ನು ದರ್ಶಿಸಿದ ಭಕ್ತರ ಸಂಖ್ಯೆ 72,283 ಇದ್ದು ಸ್ವಾಮಿಗೆ ತಲೆ ಕೂದಲು ಸಮರ್ಪಿಸಿದ ಭಕ್ತರ ಸಂಖ್ಯೆ 22,583 ಇತ್ತು. ಸ್ವಾಮಿಯ ಹುಂಡಿ ಆದಾಯ ಒಂದೇ ದಿನಕ್ಕೆ 4.54 ಕೋಟಿ ಇತ್ತು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.