ಸಚಿವರ ಸ್ಪೇರ್ ಕಾರು ಮತ್ತು ಬೆಂಗಾವಲು ಪಡೆಯ ಕಾರು ಅಪಘಾತ
ವಿಜಯನಗರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಸ್ಪೇರ್ ಕಾರು ಮತ್ತು ಬೆಂಗಾವಲು ಪಡೆ ವಾಹನ ಅಪಘಾತವಾಗಿದ್ದು, ಬೆಂಗಾವಲು ಪಡೆಯ ASI ಗೆ ಸಣ್ಣ ಪುಟ್ಟ ಗಾಯ, ಒಳಪೆಟ್ಟುಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿಯ ರಾಹೆ 50 ರಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕನಕಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದ್ದು, ಅಪಘಾತದ ಬಳಿಕ ಗಾಯಾಳು ಪೊಲೀಸರನ್ನ ಆಸ್ಪತ್ರೆಗೆ ರವಾನಿಸಿದ ನಂತರ ಸಚಿವ ತಂಗಡಗಿ ಬೆಂಗಳೂರಿಗೆ ತೆರಳಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸ್ ಸಿಬ್ಬಂದಿಯು ಚಿಕಿತ್ಸೆ ಪಡೆಯುತ್ತಿದ್ದಾರೆ.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.