ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಯ ವಿಜಡಮ್ ಲ್ಯಾಂಡ್ ಶಾಲೆಯಲ್ಲಿ ಆವರಣದಲ್ಲಿ ಬಿ.ಸಿ.ಆರ್.ಎಫ್ ತಂಡದೊಂದಿಗೆ ಜೆ.ಎಸ್.ಡ್ಲ್ಯೂ ಸ್ಟೀಲ್ ಸಿಟಿ ರನ್ 2026, 5ನೇ ಆವೃತ್ತಿ ಭಾನುವಾರ ಬೆಳಿಗ್ಗೆ 5 ಗಂಟೆ 50 ನಿಮಿಷಕ್ಕೆ ಆರಂಭವಾಯಿತು. ವಿವಿಧ ರಾಜ್ಯಗಳಿಂದ ರನ್ನರ್ಸ್ ಗಣಿನಾಡು ಬಳ್ಳಾರಿಗೆ ಆಗಮಿಸಿ 3, 5 ಹಾಗೂ 10, 16 ಕಿಲೋಮೀಟರ್ ಓಟದಲ್ಲಿ 5335 ಓಟಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬಳ್ಳಾರಿ ಸೈಕ್ಲಿಸ್ಟ್ಸ್ ಅಂಡ್ ರನ್ನರ್ಸ್ ಫೌಂಡೇಶನ್ (BCRF) ವತಿಯಿಂದ ಆಯೋಜಿಸಲಾಗಿದ್ದ ಐತಿಹಾಸಿಕ 5ನೇ ಆವೃತ್ತಿಯ "ಸ್ಟೀಲ್ ಸಿಟಿ ರನ್–2026" ಭಾನುವಾರ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಉತ್ಸಾಹಭರಿತವಾಗಿ ನಡೆಯಿತು. ಆರೋಗ್ಯ, ಫಿಟ್ನೆಸ್ ಹಾಗೂ ಓಟದ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಬೃಹತ್ ಕ್ರೀಡಾ ಉತ್ಸವದಲ್ಲಿ ಸಾವಿರಾರು ಓಟಗಾರರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬಳ್ಳಾರಿಯ ಮಾಜಿ ಶಾಸಕ ಹಾಗೂ ಹಿರಿಯ ರಾಜಕಾರಣಿ ಸೂರ್ಯನಾರಾಯಣ ರೆಡ್ಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಓಟಗಳು ಪ್ರೇರಣೆಯಾಗಿದ್ದು, ಯುವಜನರು ಸೇರಿದಂತೆ ಎಲ್ಲ ವಯೋಮಾನದವರು ದೈಹಿಕ ಸದೃಢತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.

BCRF ಅಧ್ಯಕ್ಷ ಡಾ. ತಿಪ್ಪಾರೆಡ್ಡಿ ಹಾಗೂ ಬಿ.ಕೆ. ಸುಂದರ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಸ್ಟೀಲ್ ಸಿಟಿ ರನ್ ಬಳ್ಳಾರಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಫಿಟ್ನೆಸ್ ಕಾರ್ಯಕ್ರಮವಾಗಿ ಬೆಳೆದಿದೆ ಎಂದು ತಿಳಿಸಿದರು. ಈ ಬಾರಿ ಮೊದಲ ಬಾರಿಗೆ ವೃತ್ತಿಪರ ಓಟಗಾರರಿಗಾಗಿ 16 ಕಿ.ಮೀ (10 ಮೈಲರ್) ಟೈಮ್‌ಡ್ ರನ್ ಆಯೋಜಿಸಿರುವುದು ವಿಶೇಷ ಆಕರ್ಷಣೆಯಾಗಿತ್ತು ಎಂದರು. ಬಿಸಿಆರ್. ಎಫ್ ಆರೋಗ್ಯವೇ ಮಹಾಭಾಗ್ಯ*ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬ ಪ್ರತಿನಿತ್ಯ ದೇಹವನ್ನು ದಂಡಿಸುವ ಕೆಲಸ ಮಾಡಬೇಕು, ಆರೋಗ್ಯ ಚನ್ನಾಗಿ ಇದ್ದರೆ ಏನಾದ್ರೂ ಸಾಧನೆ ಮಾಡಬಹುದು ಎಂದು ಬಿಸಿಆರ್ ಎಫ್ ತಂಡದ ಅಧ್ಯಕ್ಷ ಡಾ.ತಿಪ್ಪಾರೆಡ್ಡಿ ತಿಳಿಸಿದರು.
16 ಕಿ.ಮೀ, 10 ಕಿ.ಮೀ, 5 ಕಿ.ಮೀ ಟೈಮ್‌ಡ್ ರನ್ ಹಾಗೂ 3 ಕಿ.ಮೀ ಮಜಾ ರನ್ ವಿಭಾಗಗಳಲ್ಲಿ ವಿವಿಧ ವಯೋಮಾನದ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಿಗೆ ವಯೋಮಿತಿ ಹಾಗೂ ಲಿಂಗ ಆಧಾರಿತ ವಿಭಾಗಗಳಲ್ಲಿ ಒಟ್ಟು ₹7 ಲಕ್ಷಕ್ಕೂ ಅಧಿಕ ಬಹುಮಾನಗಳನ್ನು ವಿತರಿಸಲಾಯಿತು. ಜೊತೆಗೆ ಭಾಗವಹಿಸಿದವರಿಗೆ ಟಿ-ಶರ್ಟ್, ಬಿಬ್ ಸಂಖ್ಯೆ, ಉಪಾಹಾರ, ನೀರಿನ ವ್ಯವಸ್ಥೆ, ಮಾರ್ಗಸಹಾಯ, ಉಚಿತ ಛಾಯಾಚಿತ್ರ, ಫಿನಿಷರ್ ಮೆಡಲ್ ಹಾಗೂ ಇ-ಪ್ರಮಾಣಪತ್ರಗಳನ್ನು ನೀಡಲಾಯಿತು.
2026, ಆಗಸ್ಟ್ 2 ಭಾನುವಾರ ಬೆಳಿಗ್ಗೆ 6 ಗಂಟೆಗೆ ಬಳ್ಳಾರಿ ರನ್ನಿಂಗ್ ಅಂಡ್ ಸೈಕ್ಲಿಂಗ್ ಕ್ಲಬ್ ಹಾಗೂ ಜಿಂದಾಲ್ ಸ್ಟಿಲ್ ರನ್ನಿಂಗ್ ನಲ್ಲಿ16,10, 5 ಹಾಗೂ 3 ಕಿಲೋಮೀಟರ್ ಅಭ್ಯರ್ಥಿಗಳು ಭಾಗವಹಿಸಿದ್ದರು.

ವಿಶೇಷ. ಬಿಸಿಆರ್.ಎಫ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರು ಸೇವೆ ಕೆಲಸ ಮಾಡಿದರು.ಅಭ್ಯರ್ಥಿಗಳಿಗೆ ಕುಡಿಯುವ ನೀರು, ಒ.ಆರ್.ಎಸ್, ಟಿಫನ್ ವ್ಯವಸ್ಥೆ ಮಾಡಲಾಯಿತು. ಬಳ್ಳಾರಿಯ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಗೃಹ ರಕ್ಷಕ ದಳದ ಸಿಬ್ಬಂದಿಗಳು,ತುರ್ತುಪರಿಸ್ಥಿತಿಗೆ ಅಂಬುಲೇನ್ಸ್ ವ್ಯವಸ್ಥೆ ಮಾಡಲಾಯಿತು.
7 ಲಕ್ಷ ನಗದು ಹಣ ಬಹುಮಾನ:
3 ಹಾಗೂ 5 ಮತ್ತು 10 , 16 ಕೀಲೋ ಮೀಟರ್ ವಿವಿಧ ವಯಸ್ಸಿನ ವರ್ಗಗಳಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ, ಮುಖ್ಯವಾಗಿ ಬಳ್ಳಾರಿ ನಗರದ ಅಭ್ಯರ್ಥಿಗಳಿಗೆ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ನಗದುಹಣ ಹಾಗೂ ಪ್ರಮಾಣಪತ್ರ ನೀಡಿದರು.
ಓಟದಲ್ಲಿ ಭಾಗವಹಿಸಿದ ಗಣ್ಯರು
10 ಹಾಗೂ 5 ಕೀಲೋ ಮೀಟರ್ ಓಟದಲ್ಲಿ ಬಳ್ಳಾರಿ ಜಿಲ್ಲೆಯ ಸಿಪಿಐ ಸುಭಾಷ್ ಚಂದ್ರ, 10K ನಲ್ಲಿ ಮಂಗಳಮುಖಿ ಚಂದಿನಿ, ಮುಖ್ಯವಾಗಿ ಬಳ್ಳಾರಿ ಜಿಲ್ಲೆಯ ಕೊಲಿಮಿ ಚೌಕ್ ನ ಸುಲೋಚನಾ 70 ವರ್ಷ, 5 ಕಿಲೋಮೀಟರ್ ಓಟದಲ್ಲಿ ಭಾಗವಹಿಸಿ ಪೂರ್ಣಗೊಳಿಸಿದ್ದಾರೆ.
ಜೆ.ಎಸ್.ಡ್ಲ್ಯೂ ಸ್ಟೀಲ್ ಸಿಟಿ ರನ್ ಬಳ್ಳಾರಿ 2026ರ ಓಟದಲ್ಲಿ 16 ಕಿಲೋಮೀಟರ್ ಓಟದಲ್ಲಿ 404 ಜನ ಮಹಿಳೆಯರು, 27 ಪುರುಷರು ಒಟ್ಟು 251 ಜನ ಭಾಗವಹಿಸಿದ್ದಾರೆ.
ಜೆ.ಎಸ್.ಡ್ಲ್ಯೂ ಸ್ಟೀಲ್ ಸಿಟಿ ರನ್ ಬಳ್ಳಾರಿ 2026ರ ಓಟದಲ್ಲಿ 10 ಕಿಲೋಮೀಟರ್ ಓಟದಲ್ಲಿ 123 ಜನ ಮಹಿಳೆಯರು, 708 ಪುರುಷರು ಒಟ್ಟು 831ಜನ ಭಾಗವಹಿಸಿದ್ದಾರೆ.
ಜೆ.ಎಸ್.ಡ್ಲ್ಯೂ ಸ್ಟೀಲ್ ಸಿಟಿ ರನ್ ಬಳ್ಳಾರಿ 2026ರ ಓಟದಲ್ಲಿ 5 ಕಿಲೋಮೀಟರ್ ಓಟದಲ್ಲಿ 1079 ಜನ ಮಹಿಳೆಯರು, 2733 ಪುರುಷರು ಒಟ್ಟು 3812ಜನ ಭಾಗವಹಿಸಿದ್ದಾರೆ.
16K ಮಹಿಳಾ ವಿಭಾಗದಲ್ಲಿ 18-34 ವರ್ಷ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಸೆನೆಟ್ ಕೆಪಲ್ ಗನ್, ದ್ವಿತೀಯ ಸ್ಥಾನ ರಾಜೇಶ್ವರಿ.ಜಿ, ತೃತೀಯ ಸ್ಥಾನ ಖುಷ್ಬು ಬಗೆಲ್ ಪಡೆದುಕೊಂಡಿದ್ದಾರೆ.
16K ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಶಿವಾನಂದ ಲಕ್ಷಣ ಚಿಕಿರಿ, ದ್ವಿತೀಯ ಸ್ಥಾನ ಪ್ರಜ್ವಲ್.ಎಸ್.ವೈ , ತೃತೀಯ ಸ್ಥಾನ ಮಲ್ಲೇಶ್ ಸುಣಗಡ ಪಡೆದುಕೊಂಡಿದ್ದಾರೆ.
10K ಮಹಿಳಾ ವಿಭಾಗದಲ್ಲಿ 15-24 ವರ್ಷದಲ್ಲಿ ಪ್ರಥಮಸ್ಥಾನ ಕೃಷಿ ಸಿಂಗ್, ದ್ವಿತೀಯ ಸ್ಥಾನ ಪ್ರಿಯ ಪಾಟೀಲ್, ತೃತೀಯ ಯು.ಶಿರಿಷಾ, ನಾಲ್ಕುನೆ ಸ್ಥಾನ ಸಂಧ್ಯಾ .ಜಿ.ಎಲ್ ಮತ್ತು ಐದನೇ ಸ್ಥಾನ ಕೋಮಲ್ ಪುರೋಹಿತ್ ಪಡೆದುಕೊಂಡರು.
10K ವಿಭಾಗದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ನವ ದೀಪ್, ದ್ವಿತೀಯ ಸ್ಥಾನ ಶ್ರಿಕಾಂತ.ಯು, ತೃತೀಯ ಸ್ಥಾನ ಪೆಲಿಕ್ಷಾಮ, ನಾಲ್ಕನೇ ಸ್ಥಾನ ಮಹೇಶ್.ಆರ್, ಐದನೇ ಸ್ಥಾನ ಆನಂದ ಯಾದವ್ ಪಡೆದುಕೊಂಡಿದ್ದಾರೆ
5K ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಅರ್ಜು, ದ್ವಿತೀಯ ಸ್ಥಾನ ಆರತಿ, ತೃತೀಯ ಸ್ಥಾನ ನೂರ್ ಜಹಾನ್ ಮುಜ್ವಾರ್, ನಾಲ್ಕನೇ ಸ್ಥಾನ ಮೆಘನ, ಐದನೇ ಸ್ಥಾನ ಬೆಳಗಾವಿ ಪವಿತ್ರ ಪಡೆದುಕೊಂಡಿದ್ದಾರೆ.
5K ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಕರುಣ್, ದ್ವಿತೀಯ ಸ್ಥಾನ ವೈಭವಾ ಪಾಟೀಲ್, ತೃತೀಯ ಸ್ಥಾನ ಆನಂದ ನಿತಿನ್, ನಾಲ್ಕನೇ ಸ್ಥಾನ ಜಗದೀಶ್.ಬಿ, ಐದನೇ ಸ್ಥಾನ ರಾಘು ಯಾದವ್ ಪಡೆದುಕೊಂಡಿದ್ದಾರೆ.

ಮುಖ್ಯವಾಗಿ ಬಳ್ಳಾರಿ ಜಿಲ್ಲೆಯ ಕೊಲಿಮಿ ಚೌಕ್ ನ ಸುಲೋಚನಾ 70 ವರ್ಷ, 5 ಕಿಲೋಮೀಟರ್ ಓಟದಲ್ಲಿ ಭಾಗವಹಿಸಿ ಪೂರ್ಣಗೊಳಿಸಿದ್ದಾರೆ.
ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೂರ್ಯನಾರಾಯಣ ರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ, ಜಿಂದಾಲ್ ಸ್ಟೀಲ್ ಕಂಪನಿಯ ಸಿಇಒ ಮುರುಗನ್, ಎನ್.ಬಿ ಇನ್ಫ್ರಟೆಕ್ ಮಹಮ್ಮದ್ ರಫಿಕ್, ಬಿ.ಐ.ಟಿ.ಎಂ ಪೃಥ್ವಿರಾಜ್, ಕಿಷ್ಕಿಂಧೆ ವಿಶ್ವವಿದ್ಯಾಲಯದ ಟ್ರಸ್ಟಿ, ಡಾ.ಮಹಿಪಾಲ್, ಮಿನಾರಾ ಸ್ಟೀಲ್ ನ ಹನುಮಂತ ರೆಡ್ಡಿ, ಬ್ರಹ್ಮಯ ನಾಯ್ಡು, ಎಸ್.ಕೆ ಮೋದಿ ಫೌಂಡೇಶನ್ ಮಂಜು ಮೋದಿ, ಬಿ.ಸಿ.ಆರ್.ಎಫ್ ಅಧ್ಯಕ್ಷ ಡಾ.ತಿಪ್ಪಾರೆಡ್ಡಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಬಿಸಿಆರ್.ಎಫ್ ತಂಡದ ಸದಸ್ಯರಾದ ಸಂದೀಪ್, ಪ್ರಶಾಂತ, ಸಾಗರ, ವಿಕಾಸ್, ಓಂ, ಡಾ.ಸುಂದರ್, ಜೋಸ್ನ, ಗಿರೀಶ್ ಕುಮಾರ್ ಗೌಡ ಮತ್ತು 300 ಕ್ಕಿಂತ ಹೆಚ್ಚಿನ ಸ್ವಯಂ ಸೇವಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.