ನಂತರ ವಸತಿ ಶಾಲೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿ, ಮಕ್ಕಳ ಊಟೋಪಚಾರದ ಬಗ್ಗೆ ರುಚಿ ಮತ್ತು ಶುಚಿ ಎರಡು ಇರುವಂತೆ ನೋಡಿಕೊಳ್ಳಬೇಕು ಹಾಗೂ ಶುದ್ಧ ಕುಡಿಯುವ ನೀರು ದೊರೆಯುವಂತೆ ನೋಡಿಕೊಳ್ಳಿ, ಹಾಗೆಯೇ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವಿರಲಿ ಎಂದು ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ನಿಲಯ ಪಾಲಕರಿಗೆ ಕಿವಿಮಾತು ಹೇಳಿದರು.
ವಸತಿ ನಿಲಯದಲ್ಲಿದ್ದ ರಾಶಿ-ರಾಶಿ ಪುಸ್ತಕಗಳನ್ನು ನೋಡಿದ ಸಿಇಒ ಈ ಪುಸ್ತಕಗಳನ್ನು ಇಲ್ಲಿ ಏಕೆ ಹಿರಿಸಿದ್ದಿರಿ ಎಂದು ಪ್ರಾಂಶುಪಾಲ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ವಿತರಣೆಮಾಡುವ ಸಲುವಾಗಿ ಇರಿಸಲಾಗಿದೆ ಎಂದರು. ಶಾಲೆ ಪ್ರಾರಂಭವಾಗಿ ಮೂರು ತಿಂಗಳ ಹೋದರು ಇನ್ನೂ ಯಾವಾಗ ಪುಸ್ತಕಗಳನ್ನ ವಿತರಣೆ ಮಾಡ್ತೀರಾ ಎಂದು ಪ್ರಾಂಶುಪಾಲರಿಗೆ ತರಾಟೆಗೆ ತೆಗೆದುಕೊಂಡರು.

ಸರ್ಕಾರವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪುಸ್ತಕ ಸೇರಿದಂತೆ ಪಠ್ಯಪುಸ್ತಕ ಗಳನ್ನು ವಿತರಿಸಲಾಗುತ್ತಿದೆ. ಆದರೆ ತಮ್ಮ ನಿರ್ಲಕ್ಷದಿಂದ ಸರ್ಕಾರದ ಸವಲತ್ತು ಸದುಪಯೋಗವಾಗದಿರುವದರಿಂದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಮರೇಶ ಯಾದವ, ಮಾನ್ವಿ ಟಿಎಚ್ಒ ಶರಣಬಸವರಾಜ, ಪಿಡಿಓ ತಿಮ್ಮಣ್ಣ, ತಾಪಂ ಎಡಿಗಳಾದ ಶಿವನಂದಾ, ಸೋಮನಗೌಡ ಉಪಸ್ಥಿತರಿದ್ದರು. ಪಾಮನಕಲ್ಲೂರುನ ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಪ್ರೌಢಶಾಲೆ, ವಸತಿನಿಯಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.