ನಾಯಕನಹಟ್ಟಿ : ಯುವಕರು ಜೆ.ಡಿ.ಎಸ್. ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಆನೆ ಬಲ ಬಂದಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಮಂಜುನಾಥ ಹೇಳಿದರು.
ಸಮೀಪದ ತಳಕು ಗ್ರಾಮದಲ್ಲಿ ಶನಿವಾರ ಅರಣ್ಯ ಇಲಾಖೆಯಲ್ಲಿ ಜೆ.ಡಿ.ಎಸ್. ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಮು0ಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆ ಹತ್ತಿರ ಬರುವುದರಿಂದ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಶ್ರಮವಹಿಸಬೇಕು. ರೈತರು ಬಡವರು, ಸಾಮಾನ್ಯ ಜನರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಪಕ್ಷವಾಗಿ ಜೆ.ಡಿ.ಎಸ್. ಬೆಳೆದಿದೆ. ಪಕ್ಷಕ್ಕೆ ಬರುವ ಎಲ್ಲರನ್ನೂ ಗೌರವದಿಂದ ನೋಡಿಕೊಳ್ಳುತ್ತೇವೆ. ಜೆ.ಡಿ.ಎಸ್. ಪಕ್ಷ ಜಾತಿ, ಮತ, ಬೇದ ಬಾವ ಇಲ್ಲದೇ ಸರ್ವಜನಾಂಗದ ಶಾಂತಿತೋಟ ಇದ್ದಂತೆ ಎಂದರು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಬೂತ್ ಮಟ್ಟದಲ್ಲಿ ನೊಂದಣಿ ಮಾಡಿಸುವುದುರ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಹೊತ್ತು ನೀಡಬೇಕೆಂದು ಮನವಿ ಮಾಡಿಕೊಂಡರು. ಮೊಳಕಾಲ್ಮೂರಿನಲ್ಲಿ ದೊಡ್ಡ ಮಟ್ಟದ ಸಭೆ ನಡೆಸಬೇಕೆಂದು ಪದಾಧಿಕಾರಿಗಳು ಸೂಚಿಸಿದರು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಪ್ರಬಲ ಟಿಕೆಟ್ ಆಕಾಂಕ್ಷಿ ಟಿ.ವೀರಭದ್ರಪ್ಪ ಮಾತನಾಡಿ ಮೊಳಕಾಲ್ಮೂರು ಕ್ಷೇತ್ರದಾದ್ಯಂತ ಹಗಲು-ರಾತ್ರಿ ಎನ್ನದೇ ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಮೃತಪಟ್ಟವರಿಗೆ, ಕ್ರೀಡೆಗೆ, ವಿದ್ಯಾರ್ಥಿಗಳಿಗೆ, ಬಡವರಿಗೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಆದ್ದರಿಂದ ಜೆ.ಡಿ.ಎಸ್. ನೂತನ ಜಿಲ್ಲಾಧ್ಯಕ್ಷರಾದ ಮಂಜುನಾಥ್‌ರವರೆ ಈ ಭಾರಿ ನನಗೆ ಟಿಕೆಟ್ ಕೊಡಿಸಿ ಗೆಲ್ಲುವುದು ನಿಜ ೨೦೨೮ರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್‌ಸ್ವಾಮಿಯವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಖಚಿತ ಮೊಳಕಾಲ್ಮೂರು ಕ್ಷೇತ್ರದಲ್ಲಿ ಟಿ.ವೀರಭದ್ರಪ್ಪ ಗೆಲ್ಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ನೋಡಿ ರಾಜ್ಯದ ಜನತೆ ಬೇಸತ್ತಿದ್ದು ೨೦೨೮ರ ಚುನಾವಣೆಯಲ್ಲಿ ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ನೇತೃತ್ವದ ಅಧಿಕಾರಕ್ಕೆ ಬರುವುದು ಖಚಿತ ಎಂದು ಸ್ಪೋಟಕ ಭವಿಷ್ಯ ನುಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್‌ಸ್ವಾಮಿಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ೨೫ ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದಾರೆ. ರಾಜ್ಯದಲ್ಲಿ ಲಾಟರಿ ಮತ್ತು ಸರಾಯಿ ನಿಷೇಧ ಮಾಡುವ ಮೂಲಕ ಬಡ ಮತ್ತು ಸಾಮಾನ್ಯ ವರ್ಗದ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ದೊರಕಿಸಿ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಜಿಯವರು ವಿಶ್ವವೇ ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ಇಡೀ ಪ್ರಪಂಚವೇ ಅವರನ್ನು ಕೊಂಡಾಡುತ್ತಿದೆ. ಹಗಲು-ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ ಎಂದು ಅವರನ್ನು ಕೊಂಡಾಡಿದರು.
ರಾಜ್ಯ ಯುವ ಕಾರ್ಯದರ್ಶಿ ವಕೀಲರಾದ ಹನುಮಂತರಾಯ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೩ ವರ್ಷ ಕಳೆದರೂ ರೈತರ ಮೇಲೆ ಸ್ವಲ್ಪವೂ ಕಾಳಜಿ ತೋರಿಸುತ್ತಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಕುಂಟಿತವಾಗಿದೆ. ದಾವಣಗೆರೆ, ಬಾಗಲಕೋಟೆ ಚುನಾವಣೆಯಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದರು. ತೋಟಗಾರಿಕೆ ಸಚಿವರಾದ ಮಲ್ಲಿಕಾರ್ಜುನರವರೇ ನೀವು ಯಾವ ಜಿಲ್ಲೆಗೆ ಎಂದಾದರೂ ಭೇಟಿ ನೀಡಿದ್ದೀರಾ? ಎಂದು ಪ್ರಶ್ನಿಸಿದರು. ೨೦೨೮ರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್‌ಸ್ವಾಮಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಖಚಿತ ಎಂದರು. ರೈತರ ಬಗ್ಗೆ ಚಿಂತಿಸುವ ಏಕೈಕ ವ್ಯಕ್ತಿ ಹೆಚ್.ಡಿ. ಕುಮಾರ್‌ಸ್ವಾಮಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್. ನೂತನ ಜಿಲ್ಲಾಧ್ಯಕ್ಷರಾದ ಮಂಜುನಾಥ, ರಾಜ್ಯದ ಯುವ ಕಾರ್ಯದರ್ಶಿ ಹನುಮಂತರಾಯ, ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷರಾದ ಕರಿಬಸಪ್ಪ, ತಾಲ್ಲೂಕು ಓ.ಬಿ.ಸಿ. ಅಧ್ಯಕ್ಷ ಅಬ್ಬೇನಹಳ್ಳಿ ಚನ್ನಬಸಪ್ಪ, ಎಸ್.ಸಿ. ಘಟಕದ ಅಧ್ಯಕ್ಷ ಮಹಂತೇಶ್, ಬಿ.ಜಿ.ಕೆರೆ. ಕಸಬ ಅಧ್ಯಕ್ಷರಾದ ತಿಪ್ಪೇರುದ್ರಪ್ಪ, ಅಬ್ಬೇನಹಳ್ಳಿ ದೇವರಾಜ್, ತಳಕು ಹೋಬಳಿ ಅಧ್ಯಕ್ಷ ಓಬಣ್ಣ, ಎಸ್.ಟಿ. ಅಧ್ಯಕ್ಷ ಪ್ರಕಾಶ್, ಯುವ ಘಟಕದ ಅಧ್ಯಕ್ಷ ಚನ್ನಕೇಶವ, ವಕೀಲರಾದ ಗೋಪಾಲ, ಎಸ್.ಸಿ. ಅಧ್ಯಕ್ಷ ಹನುಮಂತ, ಓ.ಬಿ.ಸಿ.ಘಟಕದ ಅಧ್ಯಕ್ಷ ಕುಮಾರ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡರು. ಮತ್ತು ತಳಕು ಹೋಬಳಿಯ ಗಡಿಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಪಕ್ಷದ ಕಾರ್ಯಕರ್ತರು ಜೆ.ಡಿ.ಎಸ್. ಪಕ್ಷಕ್ಕೆ ಸೇರ್ಪಡೆಗೊಂಡರು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಪ್ರಬಲ ಟಿಕೆಟ್ ಆಕಾಂಕ್ಷಿ ಟಿ.ವೀರಭದ್ರಪ್ಪ ಮಾತನಾಡಿ ಮೊಳಕಾಲ್ಮೂರು ಕ್ಷೇತ್ರದಾದ್ಯಂತ ಹಗಲು-ರಾತ್ರಿ ಎನ್ನದೇ ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಮೃತಪಟ್ಟವರಿಗೆ, ಕ್ರೀಡೆಗೆ, ವಿದ್ಯಾರ್ಥಿಗಳಿಗೆ, ಬಡವರಿಗೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಆದ್ದರಿಂದ ಜೆ.ಡಿ.ಎಸ್. ನೂತನ ಜಿಲ್ಲಾಧ್ಯಕ್ಷರಾದ ಮಂಜುನಾಥ್‌ರವರೆ ಈ ಭಾರಿ ನನಗೆ ಟಿಕೆಟ್ ಕೊಡಿಸಿ ಗೆಲ್ಲುವುದು ನಿಜ 2028 ರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್‌ಸ್ವಾಮಿಯವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಖಚಿತ ಮೊಳಕಾಲ್ಮೂರು ಕ್ಷೇತ್ರದಲ್ಲಿ ಟಿ.ವೀರಭದ್ರಪ್ಪ ಗೆಲ್ಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.