ಬೆಂಗಳೂರು : ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಿಂದ ‘ಯೋಗ ಸಪ್ತಾಹ’ವನ್ನು ಆಚರಿಸಲಾಯಿತು. ಯಶಸ್ವಿಯಾಗಿ ಯೋಗ ಕಾರ್ಯಕ್ರಮಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಆಯುಷ್ ಸಚಿವಾಲಯ ಪ್ರಶಂಶಿಸಿ "ಯೋಗ ಸಂಗಮ ಪತ್ರ" ನೀಡಿ ಗೌರವಿಸಿದೆ.

ಜೂನ್ 18ರಿಂದ 24ರವರೆಗೆ ಪ್ರತಿದಿನ ಸಂಜೆ 5 ಗಂಟೆಗೆ, ಬೆಂಗಳೂರು ದೂರದರ್ಶನದ ಆವರಣದಲ್ಲಿ, ಯೋಗ ಶಿಕ್ಷಕಿ ಪೂರ್ಣಿಮಾ ಕಂದಿ ಅವರು ದೈನಂದಿನ ಬದುಕಿಗೆ ಅಗತ್ಯವಾಗಿರುವ ವಿವಿಧ ಆಸನಗಳನ್ನು ಕಲಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಯೋಗದ ಮಹತ್ವ ಕುರಿತು ಅರಿವು ಮೂಡಿಸುವ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು.

ಜೂನ್ 21ರಂದು ಯೋಗ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ, ಅಖಿಲ ಭಾರತ ತಾಂತ್ರಿಕ ಪರಿಷತ್ತಿನ ಅಧ್ಯಕ್ಷ ಟಿ. ಜಿ. ಸೀತಾರಾಮ್ ಹಾಗೂ ಬೆಂಗಳೂರು ವಿ.ವಿ.ಐ.ಪಿ. ಉಪ ಆರಕ್ಷಕ ಆಯುಕ್ತರಾದ ಮಂಜುನಾಥ್ ಬಾಬು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಪಿ. ಐ. ಬಿ. ಹೆಚ್ಚುವರಿ ಮಹಾನಿರ್ದೇಶಕರಾದ ಎಸ್. ಜಿ. ರವೀಂದ್ರ, ದೂರದರ್ಶನದ ಅಭಿಯಂತರ ಮಹಾನಿರ್ದೇಶಕಾದ ಹಾಗೂ ಕಚೇರಿ ಮುಖ್ಯಸ್ಥರಾದ ಎ.ಹನುಮಂತ್, ಆರ್. ವಿ. ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಸುಬ್ರಮಣ್ಯ ಉಪಸ್ಥಿತರಿದ್ದರು.