LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಆಷಾಢ ಮಾಸ : ಕೌಲ್ ಬಜಾರ್ ನಲ್ಲಿ ಪಂಢರಿನಾಥನ ಆರಾಧನೆ

ಬಳ್ಳಾರಿ : ಆಷಾಢ ಮಾಸದ ಪ್ರಯುಕ್ತ ಕೌಲ್ ಬಜಾರ್ ನ ಭಾವಸಾರ ಕ್ಷತ್ರಿಯ ಸಮಾಜದವತಿಯಿಂದ ಪಂಢರಿನಾಥನ ಪೂಜೆ ಹಾಗೂ ವಿವಿಧ ಧಾರ್ಮಿಕ ಆಚರಣೆಗಳು ನಡೆದವು.

 

ಇಲ್ಲಿನ ಟೇಲರ್ ಬೀದಿಯಲಿ ರುವ ಶ್ರೀ ಪಾಂಡುರಂಗ ದೇವಸ್ಥಾನ ದಲ್ಲಿ ಆಷಾಡ ಬಹುಳ ಏಕಾದಶಿ ಅಂಗವಾಗಿ ಆಯೋಜಿಸಿದ್ದ ಧಾಮಿ೯ಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾಯ೯ಕ್ರಮಗಳೂ ನಡೆದವು. ಪ್ರತಿನಿತ್ಯ ಬೆಳಿಗ್ಗೆ ಕಾಕಡಾರತಿ, ಜ್ಞಾನೇಶ್ವರಿ ಪಾರಾಯಣ, ಮಧ್ಯಾಹ್ನ ಪಂಢರಿ ಸಾಂಪ್ರದಾಯಕ ಭಜನೆ, ದಿಂಡಿ ಸೋಹಳಾ ನಡೆದವು.

 

ಸಂಜೆಯ ಹೊತ್ತು ಭಾರತಿ ನಾಟ್ಯ ಕಲಾ ಟ್ರಸ್ಟ್ ನ ವೈಷ್ಣವಿ ಕುಲಕಣಿ೯ ಮತ್ತು ತಂಡವದವರಿಂದ ಭರತನಾಟ್ಯ, ಕೋಲಾಟ, ಭಜನಾ ತಂಡಗಳಿಂದ ಸಂಗೀತ ಹಾಗೂ ಭಜನೆ ನಡೆದವು. ಶ್ರೀ ಪಾಂಡುರಂಗ ರುಕ್ಮಿಣಿ ವಿಗ್ರಹಗಳಿಗೆ ರಜತ ಕವಚ ಧಾರಣೆ ಮಾಡಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿದ್ದ ಭಕ್ತರು ಜಗತ್ತಿನ ತಂದೆ-ತಾಯಿಯರ ವೈಭವ ಕಂಡು ಭಕ್ತಿ ಪರವಶರಾದರು. ವಾರಕರಿ ಸಂತ ಸಮಾರಾಧನೆ ನಡೆಯಿತು. ದೇವಸ್ಥಾನ ದ ಅಚ೯ಕರಾದ ವೆಂಕಟೇಶಾಚಾರ್ ಪೂಜಾ ಕೈಂಕಯ೯ಗಳನ್ನು ನೇರವೇರಿಸಿದರು.

 



ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮಗಳಲ್ಲಿ ಹಾನಗಲ್, ಹೊಸಪೇಟಿ, ಕೊಪ್ಪಳ, ಬೆಳಗಾವಿ ಅಲ್ಲದೆ ಇನ್ನೂ ಹಲವಾರು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಭಜನಾ ಮಂಡಳಿಗಳು ಪಾಲ್ಗೊಂಡು ಭಗವಂತನನ್ನು ಹಾಡಿ, ಹಾರೈಸಿ, ಅರ್ಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರತಿ ನಾಟ್ಯಕಲಾ ಟ್ರಸ್ಟಿನ ವೈಷ್ಣವಿ ಕುಲಕರ್ಣಿ ತಂಡದ ಕಲಾವಿದರಿಗೆ  ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

 

ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ಎಲ್. ಶೀಧರ ರಾವ್, ಯು.ರಮೇಶರಾವ್, ಎಸ್. ದುಗೋ೯ಜಿರಾವ್, ಎಲ್. ರಮೇಶ್ ರಾವ್, ಎಲ್. ವಿಠ್ಠಲ್ ರಾವ್, ಆರ್. ಶ್ರೀನಿವಾಸರಾವ್ ಇನ್ನು ಮುಂತಾದದವರು ಉಪಸ್ಥಿತರಿದ್ದರು. 

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ