LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಾಸಶ್ರೇಷ್ಠ ಶ್ರೀಪುರಂದರ ದಾಸರ ಆರಾಧನೆ

ಬಳ್ಳಾರಿ: ಸಂಗೀತ ಪಿತಾಮಹ ರಂದೇ ಪ್ರಖ್ಯಾತರಾಗಿ ದಾಸಸಾಹಿತ್ಯಕ್ಕೆ ಆಪಾರ ಕೊಡುಗೆನೀಡಿ ಹಲವಾರುಲಕ್ಷಾಂತರಕೀತ೯ನೆಗಳನ್ನು ರಚಿಸಿದ ದಾಸಶ್ರೇಷ್ಠ ಶ್ರೀಪುರಂದರ ದಾಸರ ಆರಾಧನಾ ಮಹೋತ್ಸವನ್ನು ರೇಡಿಯೋ ಪಾಕ೯ ಶ್ರೀ ವ್ಯಾಸರಾಜಮಠದ ಪಂಚ ಬೃಂದಾವನ ಗಳ ಸನ್ನಿಧಾನದಲ್ಲಿ ಶ್ರೀ ವ್ಯಾಸರಾಜಮಠ (ಸೋಸಲೆ ಶಾಖಾ ಮಠ )ಬಳ್ಳಾರಿ ಹಾಗೂ ಶ್ರೀ ಗುರುರಾಜ ಸೇವಾಸಮಿತಿ (ರಿ)ಸಹಯೋಗದಲ್ಲಿಶ್ರದ್ದಾ ಭಕ್ತಿ ಯಿಂದ ಬಹಳ ವಿಜಂಭ್ರಣೆ  ಯಾಗಿ ಆಚರಿಸಲಾಯಿತು.

ಆರಾಧನೆ ಅಂಗವಾಗಿ ಬೆಳಿಗ್ಗೆ  ಅಷ್ಟೋತ್ತರ, ಪಂಚಾಮೃತ ಅಭಿಷೇಕ ನಡೆವು ನಂತರ ಶ್ರೀ ಪುರಂದರ ದಾಸರ ಪಟವನ್ನು ರಜತರಥದಲ್ಲಿ ರಿಸಿ ಮಠದ ಪ್ರಾಕಾರ ದಲ್ಲಿ ರಥೋತ್ಸವ ನೇರವೇರಿಸಲಾಯಿತು.. ರಥೋತ್ಸವ ಸಂಧರ್ಭ ದಲ್ಲಿ ವ್ಯಾಸರಾಜ. ಭಜನಾ. ಮಂಡಳಿ ಸದಸ್ಯೆ ಯರು ವಿವಿಧ ದೇವರುಗಳ,ದಾಸರ ರಚನೆಗಳನ್ನು ಸಾಮೂಹಿಕ ವಾಗಿ ಹಾಡಿದರು. ಕಂಚಿಮೇಳ ನಾನಾ ವಾದ್ಯಗಳವಾದನ  ನಡೆಯಿತು. ಪಂಡಿತ್ ಶ್ರೀ ಭೀಮಸೇನಾಚಾಯ೯ ರಾಂಪುರ ಇವರು ಪುರಂದರ ದಾಸರು ರಚಿಸಿದ ಕೀತ೯ನೆ, ಕಾವ್ಯ ಹಾಗೂ ಜೀವನ ಸಾಧನೆಗಳು ದಾಸಸಾಹಿತ್ಯಕ್ಕೆ ನೀಡಿದ ಕೊಡುಗೆ ಗಳ ಬಗ್ಗೆ ವಿಶೇಷ ಉಪನ್ಯಾಸನೀಡಿದರು. ನಂತರ ಮಹಾಮಂಗಳಾರತಿ  , ಅಲಂಕಾರ ಬ್ರಾಹ್ಮಣ ರ ಭೋಜನ. ಮತ್ತು ಭಕ್ತಾ ಧಿಗಳಿಗೆತೀರ್ಥ ಪ್ರಸಾದ ನಡೆಯಿತು. ಆರಾಧನಾ ಅಂಗವಾಗಿ ಪಂಚ ಬೃಂದಾವನ ಗಳಿಗೆ ನೂತನ ವಸ್ತ್ರಗಳ ಸಮಪ೯ಣೆ ಹಾಗೂ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಮಠಕ್ಕೆತಳಿರು ತೋರಣ. ವಿದ್ಯುದ್ದೀಪ ಗಳಿಂದ ಶೃಂಗಾರ  ಮಾಡಲಾಗಿತ್ತು. ಮಠದ ಅಚ೯ಕರಾದ ಶ್ರೀಕೆ. ಪಾಂಡು ರಂಗಾಚಾಯ೯ಹಾಗೂ ಶ್ರೀ ರಾಜೇಂದ್ರ ಆಚಾರ್ಯ ಆಲೂರ್ ಅವರು ಪೂಜಾ ಕೖಂಕಯ೯ಗಳನ್ನು ನೇರವೇರಿಸಿದರು

ಸಾಯಂಕಾಲ ಕುಮಾರಿ ಫಲ್ಗುಣಿ ಪಂತ್ ಇವರಿಂದ ದ ದಾಸವಾಣಿ ಕಾಯ೯ಕ್ರಮ ನಡೆಯಿತು  ವಿವಿಧ ದಾಸರ ಕೃತಿಹಾಗೂ ದೇವರ ನಾಮಗಳನ್ನು ಶುಶ್ರಾವ್ಯ ವಾಗಿ ಹಾಡಿ ನೆರೆದಿದ್ದ ಭಕ್ತರಿಗೆಮುದ ನೀಡಿದರು. ದಾಸವಾಣಿ ಕಾಯ೯ಕ್ರಮ ನೀಡಿದ ಕಲಾವಿದರಿಗೆ ಶ್ರೀ ಗುರುರಾಜ ಸೇ ವಾ ಸಮಿತಿ ವತಿಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ  ಗೌರ ವಿಸ ಲಾಯಿತು. ನಂತರ ಸ್ವಸ್ತಿ ವಾಚನ, ಮಂಗಳಾರತಿ,  ಪ್ರಸಾದವಿ ತರಣೆ ನಡೆಯಿತು

ಈಸಂದಭ೯ದಲ್ಲಿ ಸಮಿತಿಯ ಅಧ್ಯಕ್ಷ ರಾದ  ಆರ್. ಕೆ. ಸುಬ್ಬರಾವ್  ಕಾಯ೯ದಶಿ೯  ಕೆ. ಸತ್ಯನಾರಾಯಣ ರಾವ್, ಸಮಿತಿಯ ಕಾಯ೯ಕಾರಿ ಮಂಡಳಿಯ ನಿದೇ೯ಶಕರಾದ, ಬಿ. ಅನಂತಾಚಾರ್,   ಎಂ. ಭೀಮರಾವ್ ಕುಲಕರ್ಣಿ, ಬಿ. ಅನಂತ ಕೃಷ್ಣ, ಡಾಕ್ಟರ್. ಡಿ. ಪ್ರಭಂಜನ್ ಕುಮಾರ್, ವಿಜಯ ದೇಸಾಯಿ,  ಸಿ. ಕೆ. ನಾಗರಾಜ, ಟಿ. ಎನ್. ಸುಬ್ರಮಣ್ಯ ಆಚಾರ್ಯ, ರಾಜೇಂದ್ರ ಆಚಾಯ೯ ಆಲೂರು,ಹೆಚ್. ಎಸ್. ಕೇಶವ, ಪ್ರಭಂಜನಮುರುಡಿ,ರಘುನಂದನ ಬಾದನಹಟ್ಟಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST