LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ವಿಶ್ವ ಹಿರಿಯ ನಾಗರಿಕರ ದಿನ: ಕುಣಿದು ಕುಪ್ಪಳಿಸಿದ ಹಿರಿಯ ನಾಗರಿಕರು

ಬೆಂಗಳೂರು : ಮಾರ್ಝಿ ಸಮುದಾಯ ಸಂಸ್ಥೆಯಿಂದ ವಿಶ್ವ ಹಿರಿಯ ನಾಗರಿಕರ ದಿನವನ್ನು ನಗರದ ಹೊರ ವಲಯದ ಕುಂಬಳಗೋಡುವಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.  ಸಮಾಜಕ್ಕೆ ಹಿರಿಯ ನಾಗರಿಕರು ನೀಡಿರುವ ಅಮೂಲ್ಯ ಕೊಡುಗೆಗಳನ್ನು ಹರ್ಷಭರಿತವಾಗಿ ಸ್ಮರಿಸಲಾಯಿತು. ಹಿರಿಯ ನಾಗರಿಕರು ಈ ಸಂದರ್ಭದಲ್ಲಿ ಕುಣಿದು ಕುಪ್ಪಳಿಸಿದರು.

ಆ. 21 ರಂದು ವಿಶ್ವ ಹಿರಿಯ ನಾಗರಿಕರ ದಿನದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಸಬಲೀಕರಣ ಮತ್ತು ಎಲ್ಲರನ್ನೊಳಗೊಂಡ ಭವಿಷ್ಯ ಎಂಬ ಧ್ಯೇಯ ವಾಕ್ಯಕ್ಕೆ ಪೂರಕವಾಗಿ ಹಿರಿಯ ನಾಗರಿಕರನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯ ನಡೆಸಲಾಯಿತು.



ಹಿರಿಯ ಜ್ಞಾನ, ಸ್ಥೈರ್ಯ ಮತ್ತು ಮೌಲ್ಯಗಳ ರಕ್ಷಕರಾಗಿ ಹಿರಿಯ ನಾಗರಿಕರ ಪಾತ್ರ ಈ ಸಂದರ್ಭದಲ್ಲಿ ಅನಾವರಣಗೊಂಡಿತು. ಇವು ಮುಂದಿನ ಪೀಳಿಗೆಗಳನ್ನು ಪ್ರೇರೇಪಿಸಿತು. ಹಿರಿಯ ನಾಗರಿಕರು ನೀಡುತ್ತಿರುವ ಮಾರ್ಗದರ್ಶನ ಮತ್ತು ಶಕ್ತಿಗೆ ಸಮರ್ಪಿತವಾಗಿತ್ತು.

ಮಾರ್ಝಿ ಸಮುದಾಯ ಸಂಸ್ಥೆಯ ಸದಸ್ಯ ನಿರ್ಮಾಲ ಬೈ ಮಾತನಾಡಿ, “ಇದು ನಮ್ಮ ಬಾಲ್ಯದ ಆನಂದ ಮತ್ತು ನೆನಪುಗಳನ್ನು ಮರಳಿ ತಂದ ಹೃದಯಸ್ಪರ್ಶಿ ದಿನವಾಗಿತ್ತು. ನಮ್ಮ ಕುಟುಂಬವನ್ನು ಮರೆತು ಕಾಲೇಜಿನಿಂದ ಪಿಕ್‌ ನಿಕ್‌ ಗೆ ತೆರಳಿದಂತೆ ಭಾಸವಾಯಿತು.  ಮಳೆಯ ನಡುವೆ ಪ್ರತಿಯೊಂದು ಕ್ಷಣವೂ ನಗು ಮತ್ತು ಹರ್ಷದಿಂದ ತುಂಬಿತ್ತು. ಇಂತಹ ಸಂತೋಷಭರಿತ ಪ್ರವಾಸಗಳನ್ನು ಇನ್ನೂ ಅನೇಕ ಬಾರಿ ಮುಂದುವರಿಸಬೇಕೆಂದು ಹಾರೈಸುತ್ತೇವೆ.” ಎಂದರು.



ಪ್ರಮೀಳಾ ದೇಶಪಾಂಡೆ ಮಾತನಾಡಿ, ಬೆಂಗಳೂರಿನಲ್ಲಿ ನನ್ನ ಎಂಟು ವರ್ಷದ ಬದುಕಿನಲ್ಲಿ ನಾನು ಇಷ್ಟು ಸಂತೋಷಪಟ್ಟಿದ್ದು ಇದೇ ಮೊದಲು.  ರುಚಿಯಾದ ಊಟ ದೊರೆಯಿತು.  ಈ ಮರೆಯಲಾರದ ಅನುಭವಕ್ಕಾಗಿ ನಾನು ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ತಿಳಿಸುತ್ತೇನೆ. ಇಂತಹ ಅದ್ಭುತ ಪ್ರವಾಸಗಳು ನಿರಂತರವಾಗಿರಬೇಕು ಎಂದರು.

ವರುಣಾ ದೇವಿ ಮಾತನಾಡಿ, “ವಿಶ್ವ ಹಿರಿಯ ನಾಗರಿಕರ ದಿನ ನನಗೆ ನೆನಪಿಸುತ್ತದೆ – ವಯಸ್ಸಾಗುವುದು ಎಂದರೆ ನಿಧಾನಗೊಳ್ಳುವುದು ಅಲ್ಲ, ಬದಲಾಗಿ ಜೀವನಯಾನವನ್ನು ಸ್ಮರಿಸುವುದು, ಜ್ಞಾನ ಹಂಚಿಕೊಳ್ಳುವುದು ಮತ್ತು ಪ್ರತಿಯೊಂದು ಪೀಳಿಗೆಯೊಂದಿಗೆ ಜೀವನದ ಆನಂದವನ್ನು ಆಚರಿಸುವುದಾಗಿದೆ ಎಂದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ