ಬೆಂಗಳೂರು : ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 ಮತ್ತು ವಿಜಯನಗರದ ಲಯನ್ಸ್ ಕ್ಲಬ್ ಸಹಯೋಗದಡಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ವಿಶ್ವ ಆಲ್ಝೈಮರ್ ಮಾಚಾರಣೆ ಹಿನ್ನೆಲೆಯಲ್ಲಿ ಅಂಗವಾಗಿ ಸೆ. 27 ರಂದು 7 ನೇ ವಾರ್ಷಿಕ ಸ್ಮರಣಾರ್ಥ ವಾಕಥಾನ್ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಲಯನ್ಸ್ ಅನುಪಮಾ, ಎಂ.ಎಸ್ಸಿ. ಇನ್ಡಿಮೆನ್ಶಿಯಾ ಸ್ಟಡೀಸ್ ನಿಂದ ಆಯೋಜಿಸಿದ್ದು, ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್, ಮತ್ತಿತರೆ ಸಂಘಟನೆಗಳು ಬೆಂಬಲ ನೀಡಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಯನ್ ಅನುಪಮಾ, ವಾಕಥಾನ್ ಬೆಳಿಗ್ಗೆ 6:45 ಕ್ಕೆ ಪ್ರಾರಂಭವಾಗಿ 9 ಗಂಟೆಗೆ ಮುಕ್ತಾಯಗೊಳ್ಳುತ್ತದೆ, ಫ್ರೀಡಂ ಪಾರ್ಕ್ ನಿಂದ ವಿಧಾನಸೌಧಕ್ಕೆ ಹೋಗುವ ಮಾರ್ಗದಲ್ಲಿ ಇದು ಸಂಚರಿಸಲಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯ ಮತ್ತು ನಟ, ನಿರ್ಮಾಪಕ, ಗಂಡಸಿ ಸದಾನಂದ ಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಯನ್ ಆಕಾಶ್ ಎ. ಸುವರ್ಣ, ಪಿಎಂಜೆಎಫ್, ಜಿಲ್ಲಾಗವರ್ನರ್ 317ಎಫ್, ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್, ಡಾ. ಬಿ.ಎಸ್. ನಾಗಭೂಷಣ, ಡಾ. ಸುಬ್ರಹ್ಮಣ್ಯ ಮತ್ತಿತರರು ಭಾಗವಹಿಸಲಿದ್ದಾರೆ. ಬಿಎಂಎಸ್ಸಿಇ, ಜೆಎಸ್ಎಸ್ ಟೆಕ್ನಾಲಜಿ, ಬಿಎನ್ಎಂಐಟಿ, ಶೇಷಾದ್ರಿಪುರಂ ಕಾಲೇಜುಗಳು ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು ವಾಕಥಾನ್ಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಈವಾಕಥಾನ್ ಅನುಪಮಾ ಅವರ ಜೀವಂತ ಅನುಭವದಿಂದ ಹುಟ್ಟಿಕೊಂಡಿದೆ. ತಮ್ಮ ಪತಿ ಸುರೇಶ್ ಬಾಬು, 20 ವರ್ಷಗಳ ಕಾಲಫ್ರಂಟೊ-ಟೆಂಪರಲ್ಡಿಮೆನ್ಶಿಯಾ ವಿರುದ್ಧ ಹೋರಾಡಿದರು. ಆಸಮಯದಲ್ಲಿ, ಅವರು ಕಳಂಕ, ಅರಿವು ಮತ್ತು ಸಂಪನ್ಮೂಲಗಳ ಕೊರತೆಯನ್ನು ಎದುರಿಸಿದರು. ಅದು ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿ ಮತ್ತು ಆರೈಕೆದಾರ ಇಬ್ಬರಿಗೂ ಜೀವನವನ್ನು ಅತ್ಯಂತ ಸವಾಲಿನದ್ದಾಗಿ ಮಾಡಿತು. ಆ ಹೋರಾಟವನ್ನು ವಕಾಲತ್ತು ಸಂಸ್ಥೆಯಾಗಿ ಪರಿವರ್ತಿಸುವ ತಮ್ಮ ಸಂಕಲ್ಪದ ಪರಿಣಾಮ ವಾಕಥಾನ್ ಗೆ ನಾಂದಿಹಾಡಿತು. ಈಗ ಇದು 7 ನೇ ವರ್ಷಾಚರಣೆಯಲ್ಲಿದೆ. ಆಲ್ಝೈಮರ್ ಮತ್ತು ಇತರ ರೀತಿಯ ಬುದ್ಧಿಮಾಂದ್ಯತೆಯು ಪ್ರಗತಿ ಶೀಲ ಮೆದುಳಿನ ಅಸ್ವಸ್ಥತೆಗಳಾಗಿದ್ದು, ಇದು ನಿಧಾನವಾಗಿ ಸ್ಮರಣಶಕ್ತಿ, ಚಿಂತನೆ ಮತ್ತು ನಡವಳಿಕೆಯನ್ನು ಸವೆಸುತ್ತದೆ. ಇದು ವ್ಯಕ್ತಿಗಳ ಮೇಲೆ ಮಾತ್ರವಲ್ಲದೇ ಅವರ ಕುಟುಂಬಗಳು ಮತ್ತು ಆರೈಕೆದಾರರ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.