LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ಮಿಕರೇ ದುಷ್ಚಟಕ್ಕೆ ಒಳಗಾಗದಿರಿ

ನಾಯಕನಹಟ್ಟಿ : ಕಾರ್ಮಿಕರು ದುಷ್ಟಚಟಕ್ಕೆ ಒಳಗಾಗಬೇಡಿ, ನಿಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿ ಎಂದು ಕರ್ನಾಟಕ ಸ್ಟೇಟ್‌ಕನ್‌ಸ್ಟ್ರಕ್ಷನ್ ಸೆಂಟ್ರಲ್ ಯೂನಿಯನ್ ಹೋಬಳಿ ಅಧ್ಯಕ್ಷರಾದ ಬಿ.ತಿಪ್ಪೇಸ್ವಾಮಿ ಹೇಳಿದರು.

 

ಪಟ್ಟಣದ ಕರ್ನಾಟಕ ಸ್ಟೇಟ್‌ಕನ್‌ಸ್ಟçಕ್ಷನ್ ವಕರ‍್ಸ್ ಸೆಂಟ್ರಲ್ ಯೂನಿಯನ್ ಕಟ್ಟಡ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ನೀವು ಆರೋಗ್ಯವನ್ನು ಚನ್ನಾಗಿ ಕಾಪಾಡಿಕೊಳ್ಳಬೇಕು. ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟ ಸೇವಿಸಿ ಎಂದು ಕಾರ್ಮಿಕರಿಗೆ ಕಿವಿ ಮಾತು ಹೇಳಿದರು. ದೇಶ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದಾಗಿದೆ. ಪ್ರತಿ ನಿರ್ಮಾಣ ಅಭಿವೃದ್ಧಿ ಕೆಲಸದ ಹಿಂದೆ ನಮ್ಮನಿಮ್ಮೆಲ್ಲರ ಶ್ರಮ ಇರುತ್ತದೆ. ರಾಜ್ಯ ಸರ್ಕಾರದ ಅನೇಕ ಯೋಜನೆ ಜಾರಿಗೆ ತಂದಿದೆ. ಅದನ್ನು ಸದುಪಯೋಗ ಪಡೆದುಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಆಸ್ತಿ ಮಾಡದೆ ಒಳ್ಳೆ ಶಿಕ್ಷಣ ಕೊಟ್ಟು ಮಕ್ಕಳನ್ನೆ ಆಸ್ತಿಯನ್ನು ಮಾಡಬೇಕು ಎಂದರು. ಜಗತ್ತಿನಲ್ಲಿ ಯಾರು ಕದಿಯಲಾರದ ವಸ್ತು ವಿದ್ಯೆಯನ್ನು ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿಸಿ ಎಂದು ಕಿವಿ ಮಾತು ಹೇಳಿದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಹೋಬಳಿ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಎನ್.ಸಿ.ತಿಪ್ಪೇಸ್ವಾಮಿ, ಸಂಚಾಲಕರಾದ ಅಬ್ಜಲ್ ಹುಸೇನ್, ಮೋದಿನ ಬಾಷ ಬೋಸಯ್ಯ ಕಾರ್ಯದರ್ಶಿ, ಮಲ್ಲಿಕಾರ್ಜುನ ಖಜಾಂಚಿ, ಸೈಯದ್ ದಾದಪೀರ್ ನಿರ್ದೇಶಕರು, ಟಿ.ರಾಜ, ಪದಾಧಿಕಾರಿಗಳಾದ ಗಾದ್ರಪ್ಪ, ಮಹಮದ್ ದಾದಪೀರ್, ಟಿ.ಓಬಣ್ಣ, ಟಿ.ರಘು, ಮಹಂತೇಶ್, ಎಂ.ಡಿ.ಶರೀಫ್, ಪಿ.ಮಹಂತೇಶ್, ನಾಗರಾಜ್, ಜಿ.ಟಿ.ಅರ್ಜುನ, ಮಹಮದ್ ಇರ್ಪಾನ್ ಬಾಷಾ, ಮಹದೇವಪ್ಪ, ಜಿ.ಬಿ.ತಿಪ್ಪೇಸ್ವಾಮಿ, ಎ.ಟಿ.ತಿಪ್ಪೇಸ್ವಾಮಿ, ಎಂ.ಎಸ್.ಮಹಬೂಬ್ ಬಾಷ, ಡಿ.ತಿಪ್ಪೇಸ್ವಾಮಿ, ಗೌರವ ಅಧ್ಯಕ್ಷರುಗಳಾದ ಸಲ್ಮಾನ್, ಶ್ರೀಧರ್ ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST