LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾದಿಗ ಸಮಾಜಕ್ಕೆ ನಿಮ್ಮ ಕೊಡುಗೆ ಏನು?

ನಾಯಕನಹಟ್ಟಿ : ಆರ್.ಎಸ್.ಎಸ್.ನ ಭಾಸ್ಕರ್‌ಪ್ರಸಾದ್ ಅವರೆ ನಮ್ಮ ಮಾದಿಗ ಸಮುದಾಯದ ಶೋಷಿತರ ಗಟ್ಟಿ ಧ್ವನಿ ಹೆಚ್.ಅಂಜನೇಯರವರ ಕುರಿತು ಮಾತನಾಡಿರುವುದನ್ನು ಖಂಡಿಸುತ್ತೇನೆ. ಮಾದಿಗ ಸಮಾಜಕ್ಕೆ ನಿಮ್ಮ ಕೊಡುಗೆ ಏನು? ಎಂದು ವಕೀಲರಾದ ರವೀಂದ್ರ ಪ್ರಶ್ನಿಸಿದರು.

 

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಒಳಮೀಸಲಾತಿ ಅಜೆಂಡ ಹಿಡಿದು ಹೋರಾಟ ಮಾಡುತ್ತಿದ್ದೀರಾ? ನಿಮ್ಮ ಹೋರಾಟವನ್ನು ಇಡೀ ರಾಜ್ಯದ ಜನತೆ ಗಮನಿಸಿದೆ. ನೀವು ನಮ್ಮ ಮಾದಿಗ ಸಮುದಾಯದ ನಾಯಕರನ್ನು ಬೈಯುವುದು, ಹಿಯ್ಯಾಳಿಸುವುದು, ಅಪಮಾನ ಮಾಡುವುದು ಅಗೌರವ ತರುವಂತಹ ಕೆಲಸ ಮಾಡುತ್ತಿದ್ದೀರ. ಇದರಿಂದ ನಿಮ್ಮ ವರ್ಚಸ್ಸನ್ನು ಹೆಚ್ಚಿಸುತ್ತದೆ ಎಂಬುವುದು ಅದು ನಿಮ್ಮ ಮೂರ್ಖತನ ಈ ನಿಮ್ಮ ವರ್ತನೆ ಸಮಾಜದ ಸ್ವಾಸ್ತ್ಯವನ್ನು ಹಾಳುಮಾಡಿ ಕಂದಕವನ್ನು ಉಂಟುಮಾಡುವಂತಿದೆ. ಇದರಿಂದ ಇಡೀ ರಾಜ್ಯದಲ್ಲಿ ನಮ್ಮ ಸಮಾಜ ತಲೆತಗ್ಗಿಸುವಂತಾಗುತ್ತದೆ. ರಾಜ್ಯದಲ್ಲಿ ಪ್ರತಿಯೊಬ್ಬರೂ ಒಳಮೀಸಲಾತಿಗಾಗಿ ಹೋರಾಟವನ್ನು ಮಾಡಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಸಮುದಾಯದ ಎಲ್ಲಾ ಪ್ರಮುಖ ನಾಯಕರು ಒಳಮೀಸಲಾತಿಗಾಗಿ 35 ವರ್ಷಗಳಿಂದ ನಿರಂತರವಾಗಿ ಹೋರಾಟದಲ್ಲಿ ತೊಡಗಿಸಿಕೊಂಡು ತಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ತಾವು ಆರ್.ಎಸ್.ಎಸ್. ಕಛೇರಿಯಲ್ಲಿ ಚಡ್ಡಿಯನ್ನು ಹಾಕಿ ಅವರ ತತ್ವ ಸಿದ್ದಾಂತವನ್ನು ಕಲಿಯುತ್ತಿದ್ದೀರಿ ನಮ್ಮ ಸಮುದಾಯಕ್ಕೆ ತಮ್ಮದು ಏನು ಕೊಡುಗೆ ಇದೆ ಎಂಬುದು ಹೇಳಿ. ತಾವು ತನ್ನ ಮೊಣಚಾದ ಮಾತಿನ ಮೂಲಕ ಮಾತನಾಡಿದರೆ ಏನೂ ಪ್ರಯೋಜನವಿಲ್ಲ ನಿಮಗೆ ತಾಕತ್ತಿದ್ದರೆ ತಾವು ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಿ ಅದನ್ನು ಬಿಟ್ಟು ಸಮುದಾಯದ ನಾಯಕರನ್ನು ಬೈಯುವುದು, ಅವಮಾನಿಸುವುದು ಸರಿಯಲ್ಲ. ನಿಮಗೆ ಬೈಯುವುದಕ್ಕೆ ನೈತಿಕ ಹಕ್ಕು ಇಲ್ಲ ಎಂದರು.



ಭಾಸ್ಕರ್‌ಪ್ರಸಾದ್ ಇನ್ನು ಒಂದು ಶಬ್ದವನ್ನು ಶೋಷಿತರ ಗಟ್ಟಿ ಧ್ವನಿ ಹೆಚ್.ಆಂಜನೇಯರವರ ಬಗ್ಗೆ ಮಾತನಾಡಿದರೆ ನಿಮಗೆ ತಕ್ಕ ಪಾಠವನ್ನು ಸರಿಯಾದ ಸಮಯದಲ್ಲಿ ಕಲಿಸುತ್ತೇವೆ. ಇನ್ನೂ ಅವರ ಬಗ್ಗೆ ಮಾತನಾಡುವ ನಾಲಿಗೆ ಮೇಲೆ ಬಿಗಿ ಹಿಡಿತವಿರಲಿ ಎಂದು ಎಚ್ಚರಿಸಿದರು. ಸಂವಿಧಾನ ಬಂದು ೭೫ ವರ್ಷಗಳ ನಂತರ ಅಭಿವೃದ್ಧಿಯೇ ಕಾಣದ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯರವರು  ಕರ್ನಾಟಕ ರಾಜ್ಯದಲ್ಲಿ ಒಮ್ಮೆ ಸಚಿವರಾದ ಸಂದರ್ಭದಲ್ಲಿ ಇಡೀ ರಾಜ್ಯವೇ ಕಣ್ಣು ತೆರೆದು ನೋಡುವಂತೆ ಕೆಲಸ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅವರ ಹಣ ಖರ್ಚು ಮಾಡಬೇಕೆಂಬ ಮಹತ್ವದ ಕಾಯಿದೆ ಜಾರಿಗೆ ತಂದರು. ಕ್ರಾಂತಿಕಾರಿಕ ಯೋಜನೆಗಳನ್ನು ಜಾರಿಗೊಳಿಸಿ ಇಡೀ ರಾಜ್ಯದಲ್ಲಿಯೇ ಅಲ್ಪಸಂಖ್ಯಾತರ, ಬಡವರ, ದಲಿತರ ಶೋಷಿತ ಅಭಿವೃದ್ಧಿಗೆ ಪೂರಕವಾಗಿ ಕೆಲಸವನ್ನು ಮಾಡಿ ರಾಜ್ಯ ರಾಜಕಾರಣದ ಇತಿಹಾಸದ ಪುಟದಲ್ಲಿ ಅಚ್ಚರಿಸುವಂತಹ ಉಳಿದಿರುವುದು ಇತಿಹಾಸ. ಧಮನಿಕರ ಶಕ್ತಿ ಶೋಷಿತರ ಗಟ್ಟಿ ಧ್ವನಿ ಮಾದಿಗರ ದಂಡನಾಯಕ ಹೆಚ್.ಆಂಜನೇಯರವರು ವಂಚಿತ ಸಮುದಾಯಗಳಿಗೆ ಮಾರ್ಗದರ್ಶಕರು. ಆರ್.ಎಸ್.ಎಸ್.ನ ಭಾಸ್ಕರ್‌ಪ್ರಸಾದ್ ದುರಂಕಾರವನ್ನು ನೆತ್ತಿಗೇರಿಸಿಕೊಂಡು ಮಾತನಾಡುವುದು ಸರಿಯಲ್ಲ ಎಂದು ತೀವ್ರವಾಗಿ ಖಂಡಿಸುತ್ತೇನೆ. ಹೆಚ್.ಆಂಜನೇಯ ಎಂಬುವವರು ಇಡೀ ರಾಜ್ಯಕ್ಕೆ ಚಿರ ಪರಿಚಿತರು. ಹೆಚ್.ಆಂಜನೇಯ ಬರೀ ವ್ಯಕ್ತಿಯಲ್ಲ ಅವರು ಒಂದು ಸಮಾಜಕ್ಕೆ ಶಕ್ತಿ, ಹುಟ್ಟಿನಿಂದಲೇ ಹೋರಾಟವನ್ನು ಮಾಡಿ ಬೆಳೆದವರು. ಬಹಳ ಕಷ್ಟಪಟ್ಟು ಇಡೀ ಶೋಷಿತರ ಸಮುದಾಯಗಳಿಗೆ ಅಪಾರ ಕಾಳಜಿಯನ್ನು ವಹಿಸಿ ಧ್ವನಿಇಲ್ಲದವರ ಪರವಾಗಿ ಧ್ವನಿ ಎತ್ತಿದವರು. ದೀನ ದಲಿತರ ಅಭಿವೃದ್ಧಿ ಪರವಾಗಿ ಕೆಲಸ ನಿರ್ವಹಿಸಿದರು. ಮಾಜಿ ಸಚಿವ ಹೆಚ್.ಆಂಜನೇಯರವರ ಬಗ್ಗೆ ಮಾತನಾಡಿದರೆ ಎಚ್ಚರ! ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST