ಅವರು ಪಟ್ಟಣದಲ್ಲಿ ಹೆಲ್ಮೆಟ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು, ಹೆಲ್ಮೆಟ್ ಚಿಕ್ಕದಾದರೂ ಜೀವ ದೊಡ್ಡದು. ನಮಗಾಗಿ ಹಾಗೂ ನಮ್ಮನ್ನು ನಂಬಿದ ಕುಟುಂಬಕ್ಕಾಗಿ ಕಡ್ಡಾಯವಾಗಿ ಬೈಕ್ ಸವಾರರು ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಿ ಎಂದು ಜಾಗೃತಿ ಮೂಡಿಸಿದರು. ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತಗಳಾಗುತ್ತಿದ್ದು ತಲೆ ಪೆಟ್ಟಾಗಿ ಮೃತಪಟ್ಟ ಘಟನೆಗಳು ಜರುಗಿವೆ. ಹೆಲ್ಮೆಟ್ ಧರಿಸುವುದರಿಂದ ಜೀವಾಪಾಯದಿಂದ ಪಾರಾಗ ಬಹುದು. ಅಲ್ಲದೆ ಕಡ್ಡಾಯವಾಗಿ ಸವಾರರು ಲೈಸೆನ್ಸ್ ಹೊಂದಿರ ಬೇಕು, ತ್ರಿಬಲ್ ರೇಡಿಂಗ್ ಮಾಡುವಂತಿಲ್ಲ. ಡಿಂಕ್ ಅಂಡ್ ಡ್ರೈವ್ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. ವಾಹನ ಸವಾರರು ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಚಲಾಯಿಸದಂತೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಎಸ್‌ಐಗಳಾದ ರೂಪಲಾ ನಾಯ್ಕ, ಯಮುನಾ ನಾಯ್ಕ, ಪೇದೆಗಳಾದ ವಿಜಯ ಕುಮಾರ, ನಂದೀಶ್, ಸಂತೋಷ್, ಜಾತಪ್ಪ, ಪರಶುರಾಮ ಇತರರಿದ್ದರು.