LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಟ್ಟಣ ಪಂಚಾಯಿತಿಯಲ್ಲಿ ಆಯುಧಪೂಜೆ ಆಚರಣೆ

ನಾಯಕನಹಟ್ಟಿ : ಪಟ್ಟಣದ ಪಂಚಾಯಿತಿಯಲ್ಲಿ ಬುಧವಾರದಂದು ಆಯುಧಪೂಜೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷೆ ಮಂಜುಳಶ್ರೀಕಾಂತ್ ಮಾತನಾಡಿ ಈ ದಸರಾ ಹಬ್ಬವು ನಿಮ್ಮ ಸಂತೋಷವು ಸಾವಿರ ಪಟ್ಟು ಹೆಚ್ಚಾಗಲಿ ಅದನ್ನು ಪೂರ್ಣವಾಗಿ ಆನಂದಿಸಿ, ನಿಮ್ಮ ಜೀವನದಲ್ಲಿ ಯಾವಾಗಲೂ ಒಳ್ಳೆಯದಾಗಲಿ ನಿಮಗೆ ಸಂತೋಷ ಮತ್ತು ಶಾಂತಿಯನ್ನು ಬಯಸುತ್ತೇನೆ ಎಂದರು.

ನಿಮಗೆ ಪ್ರೀತಿ, ಬೆಳಕು ಮತ್ತು ಹೊಸ ಆರಂಭಗಳಿಂದ ತುಂಬಿದ ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬವು ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ ನಿಮಗೆ ಆರೋಗ್ಯ ತರಲಿ, ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ಚಾಮುಂಡೇಶ್ವರಿ ದೇವಿ ನಿಮಗೆ ಐಶ್ವರ್ಯ, ಆರೋಗ್ಯ ನೀಡಲಿ ಎಂದು ಪೌರಕಾರ್ಮಿಕರಿಗೆ, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಿಗೆ ಹಾಗೂ ಪಟ್ಟಣದ ಎಲ್ಲಾ ಸಾರ್ವಜನಿಕರಿಗೆ ಶುಭಾಶಯಗಳನ್ನು ಕೋರಿದರು.

 

ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಪೌರಕಾರ್ಮಿಕರು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ನಿಮ್ಮ ಮೇಲೆ ಅಪಾರವಾದ ಪ್ರೀತಿ ಇದೆ. ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ವಿಜಯದ ಬೆಳಕು ನಿಮ್ಮನ್ನು ದೇವರು ಕಾಪಾಡಲಿ, ಈ ದಸರಾ ನಿಮ್ಮ ಜೀವನದಲ್ಲಿ ಬೆಳಕು ಮತ್ತು ಭರವಸೆಯನ್ನು ತರಲಿ ಎಂದು ಆಶಿಸಿದರು.

 

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಆರೋಗ್ಯ ನಿರೀಕ್ಷಕ ತಿಪ್ಪೇಸ್ವಾಮಿ, ಪೌರಕಾರ್ಮಿಕರು, ಪ.ಪಂ.ಸಿಬ್ಬಂದಿ ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST