ಅವರು ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಹಾಗೂ ಎಸ್.ಎಲ್.ಆರ್ ಮೆಟಾಲಿಕ್ಸ್ ಇವರ ಸಹಯೋಗದಲ್ಲಿ ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟಿಸಿ ಮಾತನಾಡಿದ ಅವರು, ಒಂದರಿಂದ ಎರಡು ದಿನಗಳ ಕಾಲ ಊಟ ಇಲ್ಲದೇ ಜೀವಿಸಬಹುದು ಆದರೆ ನೀರು ಇಲ್ಲದೇ ಒಂದು ದಿನ ಕೂಡು ಬದುಕುಳಿಯುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ನೀರು ಅಮೂಲ್ಯವಾಗಿದ್ದು ಜೀವ ಉಳಿಸುವ ಶಕ್ತಿ ಅದಕ್ಕೆ ಇದೆ ಪ್ರತಿಯೊಬ್ಬರು ನೀರನ್ನ ಮಿತವಾಗಿ ಬಳಸಿ ನಾವು ಮುಂದಿನ ಪೀಳಿಗಗೆ ಉಳಿಸುವ ಜವಬ್ದಾರಿ ನಮ್ಮ ಮೇಲಿದೆ ಎಂದರು.
ಪ್ರಾದೇಶಿಕ ಸಾರಿಗೆ ನಿವೃತ್ತ ಅಧಿಕಾರಿ ಪರಮೇಶ್ವರಪ್ಪ ಮಾತನಾಡಿ, ಬಿರು ಬೇಸಿಗೆ ಸಮಯದಲ್ಲಿ ಎರಡು ತಿಂಗಳ ಕಾಲ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟ್ಟಿಗೆ ಮಾಡಿರುವುದು ಒಳ್ಳೆಯ ಕಾರ್ಯವಾಗಿದೆ.

ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಹೆಚ್ಚು ಇರುತ್ತದೆ ಈ ಸನಯದಲ್ಲಿ ನಾವು ನೀರನ್ನ ಬಳಕೆ ಮಾಡಬೇಕು ಪ್ರತಿ ವರ್ಷ ಎಸ್.ಎಲ್.ಆರ್ ಮೆಟಾಲಿಕ್ಸ್ ನವರು ನಮ್ಮ ಊರಿನವರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ನಮ್ಮ ಸಹಕಾರ ಇವರಿಗೆ ಇರುತ್ತದೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಕೆಲಸ ಕಾರ್ಯಗಳನ್ನ ಮಾಡಿ ಎಂದರು.
ಇದೇ ವೇಳೆ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಲ್ಲೇಶಪ್ಪ ಮಾತನಾಡಿ ನಮ್ಮ ಮನವಿ ಮೇರೆಗೆ ಸಿ.ಎಸ್.ಆರ್ ಯೊಜನೆ ಅಡಿಯಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಮಾಡಿದ್ದಾರೆ, ಇದರ ಜೊತೆಗೆ ಜೋಡಿ ರಥೋತ್ಸವ ಇರುವುದರಿಂದ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಪ್ರತಿ ವಾರ್ಡ್ ಗಳಿಗೆ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಎಲ್.ಆರ್ ಕಂಪನಿಯ ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ, ಮಾರುತಿ ಗೋಸಂಗಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ನ ಅಧ್ಯಕ್ಷ ಭೀಮರಾಜ.ಯು ಮರಿಯಮ್ಮನಹಳ್ಳಿ ಪಟ್ಟಣದ ಮುಖಂಡರಾದ ವಿಶ್ವನಾಥ, ಎಲೆಗಾರ ಮಂಜುನಾಥ, ರೋಗಾಣಿ ಮಂಜುನಾಥ, ನಾಗೇಶ್ ಹಾಗೂ ಇನ್ನಿತರರಿದ್ದರು.
ನಾವು ಕಳೆದ ಎರಡು ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಏಪ್ರಿಲ್ ಮತ್ತು ಮೇ ಎರಡು ತಿಂಗಳ ಕಾಲ ಸಿ.ಎಸ್.ಆರ್ ಯೊಜನೆ ಅಡಿಯಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಮಾಡಲಾಗುತ್ತದೆ, ಇದರ ಜೊತೆಗೆ ಜೋಡಿ ರಥೋತ್ಸವ ಇರುವುದರಿಂದ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಪ್ರತಿ ವಾರ್ಡ್ ಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ, ಎರಡು ತಿಂಗಳ ಕಾಲ ಕುಡಿಯುವ ನೀರಿನ ಅರವಟ್ಟಿಗೆ ಮಾಡಲಾಗಿದೆ ನೀರನ್ನ ಮಿತವಾಗಿ ಬಳಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಿ
ಮಲ್ಲಿಕಾರ್ಜುನ, ಎಸ್.ಎಲ್.ಆರ್ ಕಂಪನಿಯ ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥ