ಲಯನ್ಸ್ ಇಂಟರ್ ನ್ಯಾಷನಲ್ ಮತ್ತು ವಿಜಯನಗರ ಲಯನ್ಸ್ ಕ್ಲಬ್ ಸಹಯೋಗ
ಬೆಂಗಳೂರು : ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 ಮತ್ತು ವಿಜಯನಗರದ ಲಯನ್ಸ್ ಕ್ಲಬ್ ಸಹಯೋಗದಡಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಮರೆವು ಕಾಯಿಲೆ ಮಾಚಾರಣೆ ಹಿನ್ನೆಲೆಯಲ್ಲಿ ಬೃಹತ್ ವಾಕಥಾನ್ ಆಯೋಜಿಸಲಾಗಿತ್ತು.
ವಿಜಯನಗರದ ಲಯನ್ಸ್ ಕ್ಲಬ್ ನ ಲಯನ್ಸ್ ಅನುಪಮಾ, ಮಾನಸಿಕ ತಜ್ಞ ಡಾ. ಸಿ.ಆರ್ ಚಂದ್ರಶೇಖರ್, ಡಿಬಿಐಟಿ ಪ್ರಾಂಶುಪಾಲರಾದ ಡಾ. ಬಿ.ಎಸ್. ನಾಗಭೂಷಣ್, ಗ್ಲೋಬೆಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ.ಬಿ.ಎಸ್. ಬಾಲಕೃಷ್ಣ, ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ವಾಕಥಾನ್ ಬೆಳಿಗ್ಗೆ 6:45 ಕ್ಕೆ ಪ್ರಾರಂಭವಾಗಿ 9 ಗಂಟೆಗೆ ಮುಕ್ತಾಯವಾಯಿತು. ಬಿಎಂಎಸ್ಸಿಇ, ಜೆಎಸ್ಎಸ್ ಟೆಕ್ನಾಲಜಿ, ಬಿಎನ್ಎಂಐಟಿ, ಶೇಷಾದ್ರಿಪುರಂ ಕಾಲೇಜುಗಳು ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳು ವಾಕಥಾನ್ ನಲ್ಲಿ ಪಾಲ್ಗೊಂಡು ಮರೆವು ಕಾಯಿಲೆ ಬಗ್ಗೆ ಅರಿವು ಮೂಡಿಸಿದರು.
ಈ ನವಾಕಥಾನ್ ಅನುಪಮಾ ಅವರ ಜೀವಂತ ಅನುಭವದಿಂದ ಹುಟ್ಟಿಕೊಂಡಿದೆ. ತಮ್ಮ ಪತಿ ಸುರೇಶ್ ಬಾಬು, 20 ವರ್ಷಗಳ ಕಾಲಫ್ರಂಟೊ-ಟೆಂಪರಲ್ಡಿಮೆನ್ಶಿಯಾ ವಿರುದ್ಧ ಹೋರಾಡಿದರು. ಆಸಮಯದಲ್ಲಿ, ಅವರು ಕಳಂಕ, ಅರಿವು ಮತ್ತು ಸಂಪನ್ಮೂಲಗಳ ಕೊರತೆಯನ್ನು ಎದುರಿಸಿದರು. ಇದು 7 ನೇ ವರ್ಷಾಚರಣೆಯ ವಾಕಥಾನ್ ಆಗಿದೆ.