LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಾವು ಕಡಿದಾಗ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ

ಬಳ್ಳಾರಿ : ಹಾವು ಕಚ್ಚಿದ ಸಂದರ್ಭದಲ್ಲಿ ಹೆದರಬಾರದು, ಹಾವು ಕಚ್ಚಿದ ವ್ಯಕ್ತಿಗೆ ಹತ್ತಿರದ ಆಸ್ಪತ್ರೆಗೆ ತಡೆದುಕೊಂಡು ಹೋಗಬೇಕು, ಉಚಿತ ಚುಚ್ಚುಮದ್ದು ಕುಡಿಸುವುದರ ಮೂಲಕ ಜೀವ ಹಾನಿಯನ್ನು ತಡೆಗಟ್ಟಬಹುದು ಎಂದು ಮೋಕಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಮ್ ತಿಳಿಸಿದರು.



 ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಮೋಕಾ, ಹಳಿಮೋಕಾ ಗ್ರಾಮದಲ್ಲಿ ಇಂದು ಹಾವು ಕಡಿತ ಹಾಗೂ  ನಾಯಿ ಕಡಿತದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಹಾವು ಕಚ್ಚಿದಾಗ ವ್ಯಕ್ತಿಯು ಹೆದರದೆ ಕಚ್ಚಿದ ಸ್ಥಳವನ್ನು ಕಟ್ ಮಾಡೋದು, ರಕ್ತ ಹಿರೋದು ಅಥವಾ ಕಾಡು ಔಷದಿ ಹಚ್ಚುವುದು ಮಾಡದೇ, ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲು ತಿಳಿಸಿದರು.

ನಂತರ ನಾಯಿ ಕಚ್ಚಿದಾಗ ಗಾಯವನ್ನು ಚೆನ್ನಾಗಿ ಸೋಪು ಹಾಕಿ ತೊಳೆಯಬೇಕು. ನಾಯಿ ಕಡಿದ ಸ್ಥಳದಲ್ಲಿ ಏನನ್ನು ಹಚ್ಚಬಾರದು. ತಕ್ಷಣ ವೈದ್ಯರ ಹತ್ತಿರ ಕರೆದುಕೊಂಡು ಹೋಗಬೇಕು, ವೈದ್ಯರು ತಿಳಿಸಿದ ಹಾಗೆ ಲಸಿಕೆ ಪಡೆಯಬೇಕು ಎಂದು ತಿಳಿಸಿದರು.



ಈ ಸಂದರ್ಭದಲ್ಲಿ ಮೋಕಾ ಆಸ್ಪತ್ರೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹಮ್ಮದ್ ಇಸಾಕ್ ಮಾರುತಿ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾದ ಚಂದ್ರಮ್ಮ ರಿಹಾನ ಭಾನು, ಆಪ್ತ ಸಮಾಲೋಚಕರಾದ ಯುವರಾಜ್  ಗ್ರಾಮದ ಮುಖಂಡರು ಆಶಾ ಕಾರ್ಯಕರ್ತರು ಮತ್ತು ಸಾರ್ವಜನಿಕರುಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST