ಉತ್ತರಾಖಂಡ - ನೇಪಾಳ ಗಡಿಭಾಗ ಮೂಲದ ಆರೋಪಿಯಾಗಿರುವ ಬಂಧಿತ ಆರೋಪಿ ಭೂಗತ ಪಾತಕಿಗಳಾದ ರವಿ ಪೂಜಾರಿ, ಮುತ್ತಪ್ಪರೈ ರವರ ಸಹವರ್ತಿ ಹಾಗೂ ದೇಶದಾದ್ಯಂತ ಸುಮಾರು 14ಕ್ಕೂ ಹೆಚ್ಚು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 407/2020ರಲ್ಲಿ ಮಾಜಿ ಶಾಸಕರು ಹಾಗೂ ಸಚಿವರಾದ ವರ್ತೂರು ಪ್ರಕಾಶ್ ರವರ ಅಪಹರಣ ಪ್ರಕರಣದಲ್ಲಿಯೂ ಇವನು ಭಾಗಿಯಾಗಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಕವಿರಾಜ್ @ ರಾಜ್‌ನನ್ನು ಕೋಲಾರದ ಸಿಇಎನ್ ಪೊಲೀಸರು ಬಂಧಿಸಿ ಹೆಡಮುರಿಗೆ ಕಟ್ಟಿದ್ದಾರೆ.
ಬಂಧಿತ ಆರೋಪಿಯ ವಿರುದ್ದ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ 294/2004, 364(2), 120(2) 2 ಐಪಿಸಿ., ತಿಲಕ್ ನಗರ ೩೪/೨೦೦೭, ೩೦೨, ೫೦೬(ಬಿ), ೧೨೦(ಬಿ) & ೨೫ ಆರ್ಮ್ಸ್ ಆಕ್ಟ್, ತಮಿಳುನಾಡು ಥಳಿ ೧೧೭/೨೦೦೭, ೩೨೮, ೩೭೯ ಐಪಿಸಿ., ಕೆಂಗೇರಿ ೧೭೪/೨೦೦೭, ೩೯೯, ೪೦೨ ಐಪಿಸಿ., ಆಡುಗೋಡಿ ೨೪೦/೨೦೦೭, ೫೦೬ ಐಪಿಸಿ.,
ತಿಲಕ್ ನಗರ ೨೭೩/೨೦೦೭, ೫೦೬ ರೆ/ವಿ ೩೪ ಐಪಿಸಿ, ೧೪೫/೨೦೦೯, ೧೦೦(ಇ) & (ಜೆ) ಸಿಆರ್ ಪಿಸಿ, ೩೪೩/೨೦೧೪, ೬೬ ಐಟಿ ಆಕ್ಟ್, ೫೦೬ ಐಪಿಸಿ., ೪೮೪/೨೦೧೫, ೧೦೦(ಇ) & (ಜೆ) ಸಿಆರ್ ಪಿಸಿ, ಸರ್ಜಾಪುರ ೪೨/೨೦೧೫, ೩೯೫ ಐಪಿಸಿ, ಕಾಡುಗೋಡಿ ೬೩/೨೦೧೫ ೩೭೯, ೪೨೦ ಐಪಿಸಿ, ಇಂದಿರಾನಗರ ೧೩೬/೨೦೨೧ ೧೨೦(ಬಿ), ೩೬೪(೨), ೩೦೨, ೨೦೧, ರೆ/ವಿ ೧೪೯ ಐಪಿಸಿ. ಬೈಯಪ್ಪನ ಹಳ್ಳಿ ೧೩೦/೨೦೨೧, ೩೫೩,೩೩೨,೩೦೭ ರೆ/ವಿ೨೫ (೧) ಎ ಆರ್ಮ್ಸ್ ಆಕ್ಟ್ ಅಡಿ ಪ್ರಕರಣಗಳು ದಾಖಲಾಗಿದ್ದವು.

ಸತತ ೧೪ ವರ್ಷಗಳ ಕಾಲ ಭೂಗತ ಪಾತಕಿಯನ್ನು ಹುಡುಕಲು ಯತ್ನಿಸಿದ್ದ ಪೊಲೀಸರಿಗೆ ಕೊನೆಗೂ ಯಶ ಲಭಿಸಿದೆ. ಕವಿರಾಜ್ @ ರಾಜ್ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್, ಬಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಆರ್.ರವಿಶಂಕರ್ ಮತ್ತು ಹೆಚ್.ಸಿ, ಜಗಧೀಶ್ ಮತ್ತು ಸಿಇಎನ್ ಪೊಲೀಸ್ ಠಾಣೆಯ ಉಪಾಧೀಕ್ಷಕ ರಾಜೇಶ್ ಆರ್. ರವರುಗಳ ಮಾರ್ಗದರ್ಶನದಲ್ಲಿ ಆರಕ್ಷಕ ನಿರೀಕ್ಷಕ ಎಸ್.ಆರ್. ಜಗದೀಶ್ ಮತ್ತು ಅವರ ತಂಡದ ಅಂಬರೀಶ, ಬಾಲಾಜಿ, ಸಂತೋಷ್, ಜಿಲ್ಲಾ ತಾಂತ್ರಿಕ ತಂಡದ ಮುರಳಿ ಮತ್ತು ಮಂಜುನಾಥ್ ರವರು ಪತ್ತೆ ಕಾರ್ಯದಲ್ಲಿ ತೊಡಗಿದ್ದರು.
ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಆರೋಪಿಯ ಇರುವಿಕೆ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ್ದರು. ಆರೋಪಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ ದೆಹಲಿ, ಉತ್ರರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರು. ಜು.೩೧ರಂದು ಉತ್ತರ ಪ್ರದೇಶದ ನೋಯ್ಡಾ ನಗರದಲ್ಲಿ ಈತನನ್ನು ವಶಕ್ಕೆ ಪಡೆದು ಕೋಲಾರದ ಘನ ಸತ್ರನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್.ಬಿ ಶ್ಲಾಘಿಸಿದ್ದಾರೆ.