ಸಮೀಪದ ಗೌಡಗೆರೆ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿತು. ಅವರ ವಿರುದ್ಧ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಸುರೇಶ್ ಘೋಷಿಸಿದರು. 16 ಜನ ಸದಸ್ಯರಿದ್ದು 6 ಜನ ಸದಸ್ಯರು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದರು.
ನಂತರ ಮಾತನಾಡಿದ ಅವರು ಗೌಡಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಜರುಗಿತು, ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣೆ ಅಧಿಕಾರಿಯಾಗಿ ಭಾಗವಹಿಸಿದ್ದೆ. ಅಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಪರಿಶಿಷ್ಟ ಜಾತಿಯ ಮೀಸಲಾತಿ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ಶಾಂತಿ ರೀತಿಯಿಂದ ನಡೆದಿದೆ. ಈ ಸಂದರ್ಭದಲ್ಲಿ ಆರಕ್ಷಕ ಠಾಣೆ ಅಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದರು.

ನೂತನ ಅಧ್ಯಕ್ಷೆ ಮಂಜುಳ ರಂಗಸ್ವಾಮಿ ಮಾತನಾಡಿ ಗೌಡಗೆರೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ಹಿರಿಯ ಮುಖಂಡರು, ಕಾಂಗ್ರೆಸ್ ಮುಖಂಡರ ಸಹಕಾರದಿಂದ ಆಯ್ಕೆ ಮಾಡಲಾಗಿದೆ. ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾಜಿ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು. ನನಗೆ ದೊರೆತ ಅಧಿಕಾರಿದ ಅವಧಿಯಲ್ಲಿ ಗೌಡಗೆರೆ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಸ್ಪಂದಿಸಿ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಹೆಚ್ಚು ಆದಾಯವಿಲ್ಲದೆ ಆರ್ಥಿಕವಾಗಿ ಹಿಂದುಳಿದಿದೆ. ಹಾಗಾಗಿ ಶಾಸಕ ಎನ್.ವೈ.ಗೋಪಾಲಕೃಷ್ಣ, ಸಂಸದರಾದ ಗೋವಿಂದ ಕಾರಜೋಳ ಹತ್ತಿರ ಅನುದಾನವನ್ನು ಹೆಚ್ಚಿಗೆ ತಂದು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಲರಾಜ್ ಮಾತನಾಡಿ ಗೌಡಗೆರೆ ಗ್ರಾಮ ಪಂಚಾಯಿತಿ 16 ಜನ ಸದಸ್ಯರು ಅಭಿವೃದ್ಧಿ ಕಡೆ ಗಮನ ಹರಿಸಬೇಕು, ಎಲ್ಲಾ ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕಿವಿ ಮಾತು ಹೇಳಿದರು.
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಮುದಿಯಪ್ಪ ಮಾತನಾಡಿ ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು ಪಕ್ಷ ಬೇದ ಮರೆತು ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರನ್ನಾಗಿ ನಿಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಎಲ್ಲಾ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಮತದಾರರು ನಿಮ್ಮನ್ನು ಆಯ್ಕೆ ಮಾಡಿರುತ್ತಾರೆ. ಮತದಾರರು ಗ್ರಾಮ ಪಂಚಾಯಿತಿಗೆ ಬಂದಾಗ ಸ್ಪಂದಿಸಿ ನಮ್ಮ ಪಕ್ಷ ಸಂಘಟನೆ ಮಾಡಬೇಕು. ನಮ್ಮ ಕೈಲಾದಷ್ಟು ಮತದಾರರಿಗೆ ನಾವು ಅವರಿಗೆ ಸಹಕಾರ ಕೊಡಬೇಕು, ಅದು ನಮ್ಮ ಕರ್ತವ್ಯ. ನಿಮ್ಮನ್ನು ನಂಬಿ ಮತ ಹಾಕಿರುತ್ತಾರೆ. ಮತದಾರರು ಬಂದಾಗ ಸ್ಪಂದಿಸಿ ನಾವು ಕೆಲಸ ಮಾಡಿಕೊಳ್ಳುವುದು ನಮ್ಮ ಧರ್ಮ. ಮುಂಬರುವ ಚುನಾವಣೆಯಲ್ಲಿ ಹೆಚ್ಚು ಮತಗಳು ಬರುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಿಮ್ಮಪ್ಪಯ್ಯನಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಡೆ ಕಪಿಲೆ ಓಬಣ್ಣ, ಮಹದೇವಪುರ ಬೋರನಾಯಕ, ಶಂಕರಮೂರ್ತಿ, ಮೋಹನ್, ಮುತ್ತಯ್ಯ, ಜೋಗಿಹಟ್ಟಿ ಮಂಜುನಾಥ, ಹೆಚ್.ಬಿ.ತಿಪ್ಪೇಸ್ವಾಮಿ, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ, , ಪಿ.ಡಿ.ಓ ಈಶ್ವರಪ್ಪ, ಹುಳ್ಳಿ ತಿಪ್ಪಣ್ಣ, ವೆಂಕಟೇಶ, ಕೃಷ್ಣಮೂರ್ತಿ, ಸಣ್ಣಬಾಲಪ್ಪ, ಗುರುಸ್ವಾಮಿ, ರ‍್ರಿಸ್ವಾಮಿ, ಸಿ.ರಂಗನಾಥ ಗೌಡಗೆರೆ, ಸಿ.ಮಂಜುನಾಥ ಗೌಡಗೆರೆ, ಜಿ.ಟಿ.ತಿಪ್ಪೇಸ್ವಾಮಿ, ಟಿ.ವೆಂಕಟೇಶ್ ಗೌಡಗೆರೆ, ಬುದಾಳ್ ರಂಗಪ್ಪ, ಎಂ.ಎಲ್.ಎ ರಂಗಪ್ಪ, ಬಿ.ಬಂಗಾರಪ್ಪ, ಗೌಡಗೆರೆ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರುಗಳಾದ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಟಿ.ರಂಗಪ್ಪ, ಶಾಂತಮ್ಮ ತಿಪ್ಪೇಸ್ವಾಮಿ, ರಾಧಮ್ಮ ಬೋರಣ್ಣ, ರೇವಮ್ಮ ಬಸವರಾಜ್, ಜಿ.ಓಬಳೇಶ್, ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರು ಸಣ್ಣಪ್ಪ, ಸದಸ್ಯರಾದ ನಾಗಪ್ಪ, ಸರೋಜಮ್ಮ, ಕಾಂಗ್ರೆಸ್ ಪಕ್ಷದ ಮುಖಂಡರು ಪೊಲೀಸ್ ಇಲಾಖೆ ಯವರು ಹಾಗೂ ಇನ್ನೂ ಇತರರು ಇದ್ದರು.