ಸಮೀಪದ ಗೌಡಗೆರೆ ಗ್ರಾಮ ಪಂಚಾಯಿತಿಯಲ್ಲಿ ಕಾಯಕ ಗ್ರಾಮ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕಾಯಕ ಗ್ರಾಮ ಅಂದರೆ ಕರ್ನಾಟಕದ ಹೊಸ ಕಾರ್ಯಕ್ರಮ ಒಂದು ಜವಬ್ದಾರಿ ಸ್ಥಾನದಲ್ಲಿರುವಂತಹ ಅಧಿಕಾರಿಗಳು ಯಾವ ಗ್ರಾಮ ಪಂಚಾಯಿತಿ ಹಿಂದುಳಿದಿದೆ ಅಂತಹ ಗ್ರಾಮ ಪಂಚಾಯಿತಿಯನ್ನು ಗುರುತಿಸಿ ಜವಬ್ದಾರಿ ಅನುಗುಣವಾಗಿ ಆ ಪಂಚಾಯಿತಿಗಳನ್ನು ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿ ಮಾಡುವುದು ಸರ್ಕಾರದ ಆಶಾಯವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಏನು ಘೋಷಣೆ ಮಾಡಿದ್ದೇವೆ ಕಾಯಕ ಗ್ರಾಮ ಮಾಡುತ್ತೇವೆ ಅಂತ ಹೇಳಿ ಆ ನಿಟ್ಟಿನಲ್ಲಿ ಜಾರಿಗೆ ತರಲಾಗಿದೆ. ಗೌಡಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷೆ ಸದಸ್ಯರುಗಳು ಎಲ್ಲಾರು ಸೇರಿ ಗ್ರಾಮ ಪಂಚಾಯಿತಿಗೆ ನಾವೇಲ್ಲರೂ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಜನವಸತಿ ಸಭೆ, ವಾರ್ಡ್ ಸಭೆ, ಗ್ರಾಮ ಸಭೆ, ಪ್ರತಿ ತಿಂಗಳಿಗೊಮ್ಮೆ ಆನ್‌ಲೈನ್‌ನಲ್ಲಿ ಸಭೆ ನಡೆಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಬೀದಿ ದೀಪ ಅಳವಡಿಸಬೇಕು. ಕಳೆದ ತಿಂಗಳು 17ನೇ ತಾರೀಖಿನಿಂದ ಗ್ರಾಮ ಪಂಚಾಯಿತಿ ತೆರಿಗೆದಾರರ ಶುಲ್ಕ ನಿಯಮಗಳು ಹೊಸ ನಿಮಗಳನ್ನು ಜಾರಿಗೆ ಮಾಡಿದೆ. ಇದು ನಾವು ತೆಗೆದುಕೊಂಡಿಲ್ಲ ಸರ್ಕಾರ ಆಯ್ಕೆಪಟ್ಟಿ ಮಾಡಿ ಕಳುಹಿಸಿದ್ದಾರೆ. ಯರ‍್ಯಾರು ಯಾವ ಪಂಚಾಯಿತಿಯನ್ನು ದತ್ತು ತೆಗೆದುಕೊಳ್ಳಬೇಕು ಅಂತ ಹೇಳಿ ಸರ್ಕಾರ ಪಟ್ಟಿ ಮಾಡಿ ಅಲ್ಲಿಂದಲೆ ಆದೇಶ ಬಂದಿರುವುದು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು, ಗ್ರಾಮೀಣ ಉದ್ಯೋಗ ಗ್ರಾಮ ಪಂಚಾಯಿತಿಗಳನ್ನು ಹಂಚಿಕೆ ಮಾಡಿ ತಳಮಟ್ಟದ ಎಲ್ಲೆಲ್ಲಿ ಏನಿದೆ ಮೂಲ ತಳಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧ ಆಗದೆ ಇರುವುದಕ್ಕೆ ಕಾರಣಗಳು ಏನಿದೆ ಅದನ್ನು ತಾವು ಮನಗಂಡು ನೇಮಕವಾಗಿ ಆ ಗ್ರಾಮ ಪಂಚಾಯಿತಿಯನ್ನು ಬೇಟಿಕೊಟ್ಟು ಇಂತಹ ಸಮಸ್ಯೆಗಳನ್ನು ಏನೇನಿದೆ ಬಗೆಹರಿಸಿ ಪಂಚಾಯಿತಿಗಳನ್ನು ಆ ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು. ಒಂದು ಸಹ ಉದ್ದೇಶದಿಂದ ಈ ಒಂದು ಕಾರ್ಯಕ್ರಮಗಳು ಜಾರಿಗೆ ಬಂದಿದೆ. ಅದರಂತೆ ಗೌಡಗೆರೆ, ಚೌಳೂರು ನನಗೆ ಸರ್ಕಾರ ಕೊಟ್ಟಂತಹ ಗ್ರಾಮ ಪಂಚಾಯಿತಿ ಅಭಿವೃದ್ಧಿ ಪಡಿಸಲು ಸಂಪೂರ್ಣ ಜವಬ್ದಾರಿ ನನ್ನ ಮೇಲಿದೆ ಎಂದರು.

ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿಗಳು ಕೂಡ ಪ್ರತಿ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಅನುದಾನ ಗ್ರಾಮ ಪಂಚಾಯಿತಿಗೆ ಸ್ಥಳೀಯ ಸರ್ಕಾರಗಳು ಗ್ರಾಮ ಪಂಚಾಯಿತಿಯನ್ನು ಹೊರತುಪಡಿಸಿದರೆ, ಇಲ್ಲಿನ ಯಾವುದೇ ಇಲಾಖೆಗಳಿಗೆ ಕಂದಾಯ ವಿದಿಸಿ ವಸೂಲಿ ಮಾಡುವಂತಹ ಅಧಿಕಾರ ಇರುವುದಿಲ್ಲ. ಗ್ರಾಮ ಪಂಚಾಯಿತಿಗೆ ಮಾತ್ರ ತೆರಿಗೆಯನ್ನು ನೀವು ವಿದಿಸಬಹುದು. ನಿವೇ ವಸೂಲಿ ಮಾಡಬಹುದು ವಸೂಲಿಯಾದಂತಹ ಹಣ ಅದನ್ನು ಬಳಸಿಕೊಳ್ಳಬಹುದು ನಿಮಗೆ ಅಧಿಕಾರವಿದೆ. ಈಗ ಹೊಸ ನಿಯಮಗಳು ಜಾರಿಯಾಗುತ್ತಿವೆ. ಪ್ರತಿ ತಿಂಗಳಿಗೊಮ್ಮೆ ಆನ್‌ಲೈನ್‌ನಲ್ಲಿ ಸಭೆಯಾಗಬೇಕು, ಗ್ರಾಮ ಸಭೆ, ವಾರ್ಡ್ ಸಭೆ ನಡೆಸಬೇಕು. ಪ್ರತಿ ತಿಂಗಳಿಗೊಮ್ಮೆ ನೀರುಗಂಟಿಗಳ ಸರಿಯಾದ ಸಮಯಕ್ಕೆ ಕೆಲಸ ಮಾಡುತ್ತಿದ್ದಿರ, ಯಾವ ಹಳ್ಳಿಯಲ್ಲಿ ಸಮಸ್ಯೆ ಏನಿದೆ ಅಂತ ತಿಳಿದುಕೊಳ್ಳಬೇಕು. ಸದಸ್ಯರುಗಳು ಪ್ರತಿ ಮೂರು ಮತ್ತು ನಾಲ್ಕು ತಿಂಗಳಿಗೊಮ್ಮೆ ಸಭೆ ಮಾಡಿದರೆ ಅದು ಹೇಗೆ ಗೊತ್ತಾಗುತ್ತದೆ? ಪ್ರತಿ ತಿಂಗಳಿಗೊಮ್ಮೆ ಸಭೆ ಮಾಡಿದರೆ ನಿಮ್ಮ ಕಿವಿಗೆ ಹೋಗುತ್ತವೆ. ನಿಯಮಿತವಾಗಿ ಸಭೆ ಮಾಡುತ್ತಿರಲ್ಲ ಅಥವಾ ಇಲ್ಲವ ಅಂದರೆ ಪರಿಶೀಲನೆ ಮಾಡುತ್ತೇನೆ. ಕ್ರಿಯಾ ಯೋಜನೆಗಳು ತಯಾರು ಮಾಡಬೇಕು. ಗ್ರಾಮ ಪಂಚಾಯಿತಿಗೆ ತೆರಿಗೆ ವಸೂಲಿ ಮಾಡುವುದಕ್ಕೆ ಅಧಿಕಾರವಿದೆ, ಸಂಗ್ರಹಿಸುವ ಅಧಿಕಾರವಿದೆ, ಖರ್ಚು ಮಾಡುವ ಅಧಿಕಾರವಿದೆ. ಮನೆಗಳು, ನಿವೇಶನ, ಸೋಲಾರ್ ಫ್ಲಾಂಟ್, ಮಿಲ್ಲುಗಳು, ಕೈಗಾರಿಕೆಗಳು, ಜರ್ಲರ್ ಮಿಷನ್, ಸಣ್ಣಪುಟ್ಟ ಇಂಡಸ್ಟಿçಗಳು ಇದೆವ ಎಂಬ ಎಲ್ಲಾ ಮಾಹಿತಿ ನಿಮಗೆ ತಿಳಿದರಬೇಕು ಎಂದು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಮಂಜುಳ ಜಿ.ಹೆಚ್., ಮಂಜಕ್ಕ, ಟಿ.ರಂಗಪ್ಪ, ಶಾಂತಮ್ಮ, ಅನ್ನಪೂರ್ಣೇಶ್ವರಿ, ತಿಪ್ಪೇಶ್ ಗಿಣಿಯರ್, ರೇವಮ್ಮ, ಮಂಜಮ್ಮ, ವೆಂಕಟೇಶ್, ನಾಗಣ್ಣ, ಸಣ್ಣಪ್ಪ, ಸರೋಜಮ್ಮ, ರಾಧಮ್ಮ, ಕೆಂಗರುದ್ರಪ್ಪ, ಲಕ್ಷö್ಮಣ್, ಜಿ.ಓ.ಓಬಳೇಶ್, ಗೌಡಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈಶ್ವರಪ್ಪ, ಗುತ್ತಿಗೆದಾರ ಡಿ.ಜಿ.ಗೋವಿಂದಪ್ಪ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.