ಬಳ್ಳಾರಿ: ತುಂಗಭದ್ರ ಜಲಾಶಯದಲ್ಲಿನ ಹೂಳನ್ನು ತೆಗೆಯುವ ಕಾರ್ಯ ಆಗಬೇಕು ಎಂದು ತುಂಗಭದ್ರ ರೈತ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ. ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು. ತುಂಗಭದ್ರ ಜಲಾಶಯದಿಂದ ನೀರನ್ನು ಪಡೆಯುವ ಕಾರ್ಖಾನೆಗಳು, ಬೆಳೆಗೆ ನೀರು ಪಡೆಯುವ ರೈತರನ್ನು ತೊಡಗಿಸಿಕೊಂಡು ಹೂಳನ್ನು ತೆಗೆಯಲು ಸರ್ಕಾರ ಮುಂದಾಗಬೇಕು ಎಂದರು.
ನಮ್ಮ ಜಲಾಶಯದಿಂದ ಹರಿದ ನೀರನ್ನು ಆಂದ್ರಪ್ರದೇಶ ಸರ್ಕಾರ ಶ್ರೀಶೈಲಂ ಜಲಾಶಯದಲ್ಲಿ ಸಂಗ್ರಹಿಸಿ 400 ಕಿ.ಲೋ.ಮೀಟರ್ ದೂರದವರಗೆ ನೀರು ತರುತ್ತಿದೆ. ಆದರೆ ನಮ್ಮ ಕರ್ನಾಟಕ ಸರ್ಕಾರ ಹೂಳನ್ನು ತೆಗೆಯಲು ಆಸಕ್ತಿ ತೋರುತ್ತಿಲ್ಲ. ನೀರಾವರಿ ತಜ್ಞರ ಸಭೆ ಕರೆಯಿರಿ. ಹೂಳುನ್ನು ತೆಗೆಯುವುದು ಹೇಗೆ ಎಂದು ಹೇಳಲಿದೆ. ಈ ಬಗ್ಗೆ ಸ್ಪಷ್ಟ ಜ್ಞಾನ ಇಲ್ಲದ ಶಾಸಕರು ಹೂಳು ತೆಗೆಯಲು ಆಗಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ನೀರಾವರಿ ತಜ್ಞರ ಜೊತೆ ಸೇರಿ ಸಾರ್ವಜನಿಕರ ದೇಣಿಗೆಯಿಂದ ಸಂಗ್ರಹಿಸಿದ್ದ 30 ಲಕ್ಷರೂ ವೆಚ್ಚದಲ್ಲಿ 2017 ರಲ್ಲಿ ಹೂಳು ತೆಗೆದಂತೆ. ಮತ್ತೆ ಬರುವ ಮೇ ತಿಂಗಳಲ್ಲಿ ಹೂಳಿನ ಜಾತ್ರೆಯನ್ನು ಮೂರು ರಾಜ್ಯಗಳ ರೈತರನ್ನು ತೊಡಗೊಸಿಕೊಂಡು ನಡೆಸಲು ಉದ್ದೇಶಿಸಿದೆ. ಈ ಬಗ್ಗೆ ಪ್ರತಿ ಗ್ರಾಮಗಳ ರೈತರ ಜೊತೆ ಚರ್ಚಿಸಿ ಸಿದ್ದತೆ ಮಾಡಲಿದೆಂದು ಹೇಳಿದರು. ಜಲಾಶಯದಿಂದ ಹೂಳನ್ನು ರೈತರು ತಮ್ಮ ಜಮೀನುಗಳಿಗೆ ತೆಗೆದುಕೊಂಡು ಹೋಗಬಹುದು. ತುಂಗಭದ್ರ ಮಂಡಳಿಯಿಂದ ಇದಕ್ಕೆ ಅನುಮತಿ ಕೋರಲಿದೆ. ಅವರು ನೀಡದಿದ್ದರೆ. ಕೇಂದ್ರ ನೀರಾವರಿ ಆಯೋಗದಿಂದ ಪಡೆಯಲಿದೆಂದರು.
ನವಿಲೆ ಸಮಾನಾಂತರ ಜಲಾಶಯದ ಬಗ್ಗೆ ಹೇಳುತ್ತ ಎರೆಡು ದಶಕ ಕಳೆಯಲಾಯ್ತು. ಈ ವರೆಗೆ ಏನೂ ಆಗಿಲ್ಲ. ಬರೀ ಕಣ್ಣೀರು ಒರೆಸುವ ತಂತ್ರವಾಗಿದೆ ಇದೆ.
ತುಂಗಭದ್ರ ಗೇಟುಗಳನ್ನು ಬದಲು ಮಾಡುತ್ತಿದೆ. ಇದರ ಜೊತೆಗೆ ಹಳೆಯದಾದ ಗೇಟುಗಳ ಚೈನ್ ಗಳನ್ನು ಸಹ ಬದಲು ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಮುಖಂಡರುಗಳಾದ ಶ್ರೀಧರಗಡ್ಡೆ ವೀರನಗೌಡ, ಜಾಲಿಹಾಳ್ ಶ್ರೀಧರ್, ಮಲ್ಲಾರೆಡ್ಡಿ, ವೀರಭದ್ರ ನಾಯಕ, ದರೂರು ವೀರೇಶ ಮೊದಲಾದವರು ಇದ್ದರು.