ಬಸವಶ್ರೀ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥರಾದ ಡಾ|| ದೊಡ್ಡಬಸಪ್ಪ ಪಾಟೀಲ್ ಮಾತನಾಡಿ, ಕೊಪ್ಪಳ ನಾಗರೀಕನಾಗಿ ನಮ್ಮ ಹೋರಾಟ ಆರೋಗ್ಯ, ಭವಿಷ್ಯಕ್ಕಾಗಿ, ವೈಜ್ಞಾನಿಕವಾಗಿ ಮತ್ತು ಭವಿಷ್ಯದ ನಮ್ಮ ಮಕ್ಕಳಿಗಾಗಿ ಕಾರ್ಖಾನೆಗಳಿಂದ ಬಿಡುವಂತಹ ಅನೇಕ ರಸಾಯನಿಕ ಅನಿಲಗಳು ಅದರಲ್ಲಿ ಸಿಓ, ಎನ್. ಜೀರೋ. ಟೂ, ಎಸ್.ಓ.ಟೂ ಇತರೆ ಅನೆಕ ರಸಾಯನಿಕಗಳು ಜೀವಕ್ಕೆ ಹಾನಿಯುಂಟು ಮಾಡುತ್ತವೆ ಎಂದು ಎಚ್ಚರಿಸಿದರು.

ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಕೆ.ಬಿ.ಗೋನಾಳ (ಮಲ್ಲಿಕಾರ್ಜುನ), ಮಂಜುನಾಥ ಜಿ. ಗೊಂಡಬಾಳ, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ರಾ.ಬ.ದಳ ಜಿಲ್ಲಾಧ್ಯಕ್ಷ ಸತೀಶ ವಿರುಪಾಕ್ಷಪ್ಪ ಮಂಗಳೂರು, ಸುಂಕಪ್ಪ ಅಮರಾಪೂರ, ಲಿಂಗಾಯತ ಧರ್ಮ ಮಹಾಸಭಾದ ಕೊರ್ಲಹಳ್ಳಿ ಈಶ್ವರ, ವಿಜಯಲಕ್ಷ್ಮಿ ಈಶ್ವರ, ರಾಜೇಶ್ವರಿ ರಾಮು ಪೂಜಾರ, ಗಂಗಮ್ಮ ಗೋಸಿ, ರಾ.ಬ.ದಳ ರಾಜೇಶ್ವರಿ ಈ. ಅಂಗಡಿ, ಶೋಭಾ ವಿ. ಕೊರ್ಲಹಳ್ಳಿ, ಶಂಕ್ರಮ್ಮ ಕವಲೂರು, ಶಿಲ್ಪಾ ಗಡಾದ, ಈಶಪ್ರಭು ಅಂಗಡಿ, ಗವಿಸಿದ್ದಪ್ಪ ಗೋಸಿ, ಬಸಪ್ಪ ವದಗನಾಳ, ರಾಮು ಪೂಜಾರ, ಮಖಬೂಲ್ ರಾಯಚೂರು, ಮುಕ್ಕಣ್ಣ ಮೇಸ್ತ್ರಿ ಬಸಾಪುರ, ಮಂಜುನಾಥ ಕವಲೂರು, ದುರಗಪ್ಪ ಕನಕಮನಿ, ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಮಹಾಂತೇಶ ಕೊತಬಾಳ, ಬಸವರಾಜ ನರೇಗಲ್ ಮುಂತಾದವರು ಇದ್ದರು. ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಹೋರಾಟಕ್ಕೆ ಸಾಥ್ ನೀಡಿದರು.