LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಐವರು ಅಂತರಾಜ್ಯ ಕಳ್ಳರನ್ನು ಬಂಧಿಸಿದ ತುರವನೂರು ಪೊಲೀಸರು

ಚಿತ್ರದುರ್ಗ :ತಾಲೂಕಿನ  ತುರುವನೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಐದು ಮಂದಿ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧ್ಯ ಪ್ರದೇಶ ಮೂಲದ ಟೋನಿಯಾ, ಕಮಲ್ ನಾಥ್, ಶ್ರವಣ್ ಜೋಗಿ, ಜೈನನಾಥ್ ಚೌಹಾಣ್ ಹಾಗೂ ಸಂತೋಷ್ ನಾಥ್ ಎಂಬ ಐದು ಮಂದಿ ಕಳ್ಳರನ್ನ ಪೊಲೀಸರು ಬಂದಿಸಿ ಕರೆತಂದಿದ್ದಾರೆ.

ಚಿಕ್ಕಗೊಂಡನಹಳ್ಳಿ ಗ್ರಾಮದ ರವಿಕುಮಾರ್ ಎಂಬುವವರು ಸೆಪ್ಟೆಂಬರ್‌ 2 ರಂದು ರಾಷ್ಟ್ರೀಯ ಹೆದ್ದಾರಿ 50 ರ ಟ್ರಕ್ ಟರ್ಮಿನಲ್ ಬಳಿಯ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿ ಮಧ್ಯಾಹ್ನ 1 ಗಂಟೆ ವೇಳೆಗೆ ಪಾಪಾಸ್ ಮನೆಗೆ ಹೋರಟಿದ್ದು,  ಈ ವೇಳೆ ಕಾರಿನಲ್ಲಿ ಸಾಧುಗಳ ವೇಶದಲ್ಲಿ ಬಂದ ಐವರಲ್ಲಿ ಕಾರಿನ ಚಾಲಕ ಬಿಟ್ಟು ಇನ್ನೂ ನಾಲ್ವರು ರವಿಕುಮಾರ್ ಅವರ ಬಳಿ ಬಂದಿದ್ದು ಜಮೀನಿನ ಮೆಕ್ಕೆಜೋಳ ತೆನೆ ಮುರಿದುಕೊಳ್ಳುತ್ತಿದ್ದು, ಈ ವೇಳೆ ಹಿಂದಿಯಲ್ಲಿ ಮಾತನಾಡುತ್ತಿದ್ದ ಸಾಧುಗಳು  ರವಿಕುಮಾರ್ ಅರವಿಗೆ ಭವಿಷ್ಯ ಹೇಳುವುದಾಗಿ ನಂಬಿಸಿ ಬೇಡವೆಂದರು ಅವರ ಕೈಮೇಲೆ ರುದ್ರಾಕ್ಷಿ ಹಾಗೂ ಐದು ರೂಪಾಯಿ ಕಾಯಿನ್ ಇಟ್ಟು ರವಿಕುಮಾರ್ ಅವರ ಕೈನಲ್ಲಿದ್ದ 5 ಗ್ರಾಂ ತೂಕದ ಬಂಗಾರದ ಉಂಗುರವನ್ನ ಎಗರಿಸಿದ್ದು,  ಅದರಲ್ಲೊಬ್ಬ ಸಾಧು ಪೌಡರ್ ಒಂದನ್ನ ರವಿಕುಮಾರ್ ಅವರ ಹಣೆಯ ಮೇಲೆ ಹಚ್ಚಿದ್ದು ಈ ವೇಳೆ ಮಂಪರು ಬಂದಂತಾಗಿದ್ದು , ರವಿಕುಮಾರ್ ಅವರು ಏನನ್ನು ಸಹ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದರು.‌



ನಂತರ ಎಚ್ಚರಗೊಂಡ ರವಿಕುಮಾರ್ ಅವರು ನೋಡಿದಾಗ ಕಳ್ಳರು ಕಾರಿನಲ್ಲಿ ಕೂತುಕೊಂಡು ಹೊರಟಿದ್ದು ರವಿಕುಮಾರ್ ಅವರು ಕಿರುಚಿಕೊಂಡರೂ ಅಷ್ಟರಲ್ಲಾಗಲೇ ಕಳ್ಳರು ಎಸ್ಕೇಪ್ ಆಗಿದ್ದರು. ಇನ್ನೂ ಈ ಬಗ್ಗೆ ಪ್ರಖರಣ ಧಾಖಲಿಸಿಕೊಂಡ ತುರುವನೂರು ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ಟೋಲ್ ಗಳ ಸಿಸಿ ಟಿವಿಗಳಲ್ಲಿ ಆರೋಪಿಗಳು ಕಾರಿನಲ್ಲಿ ತೆರಳಿದ್ದ ಬಗ್ಗೆ ಮಾಹಿತಿ ಪಡೆದು ಕಳ್ಳಂಬೆಳ್ಳ ಟೋಲ್ ಬಳಿ ಕಾರಿನ ಸಮೇತ  ಐದು ಮಂದಿ ಸಾದು ಕಳ್ಳರನ್ನ ವಶಕ್ಕೆ ಪಡೆದು ಬಂದಿಸಿ ಕರೆತಂದಿದ್ದು ಹೆಚ್ಚಿನ ಪರಿಶೀಲನೆಯನ್ನ ನಡೆಸುತ್ತಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ