LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಪಿಎಸ್ ಪಬ್ಲಿಕ್ ಸ್ಕೂಲ್ ನಿಂದ “ಥಿಂಕ್ ರೂಮ್ ಡೇ”

ಬೆಂಗಳೂರು: ಅಚಾರ್ಯ ಪಠಶಾಲಾ ಎಜುಕೇಷನಲ್ ಟ್ರಸ್ಟ್ (ಎಪಿಎಸ್ಇಟಿ) ನಿಂದ ಎಪಿಎಸ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗಾಗಿ ಕಿಂಡರ್‌ ಗಾರ್ಡನ್ ನಿಂದ 8ನೇ ತರಗತಿವರೆಗಿನ “ಥಿಂಕ್ ರೂಮ್ ಡೇ” ಎಂಬ ಹೊಸ ಅನುಭವಾತ್ಮಕ ಕಲಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.

ಎಪಿಎಸ್ ಇಂಜಿನಿಯರಿಂಗ್ ಕಾಲೇಜಿನ ಡಿ.ಆರ್.ಡಿ.ಒ ಪ್ರಾಜೆಕ್ಟ್, ಮಾನವರ ಬದಲು ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಲು ರೂಪುಗೊಂಡ ರೋಬೋಟ್ಸ್ ಗಮನ ಸೆಳೆಯಿತು. ಇದು ಮೌಲ್ಯಯುತ ಜೀವ ಉಳಿಸುವ ರಕ್ಷಣಾ ಇಲಾಖೆಯ ಮಹತ್ವದ ಕಾರ್ಯಕ್ರಮವಾಗಿದೆ.  ಥಿಂಕ್ ಟ್ಯಾಂಕ್ ಸಾರ್ವಜನಿಕರು ಮತ್ತು ಪೋಷಕರಿಗೆ ಮುಕ್ತವಾಗಿತ್ತು.  ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.



ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕುತೂಹಲ, ಸೃಜನಶೀಲತೆ ಇರಬೇಕು.  ಈ  ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನೆಗಳನ್ನು ಪ್ರಾಯೋಗಿಕ, ಪರಿಣಾಮಕಾರಿಯಾಗಿ ಪರಿವರ್ತಿಸಲು ಸಹಕಾರಿಯಾಗಲಿದೆ.  ಬಾಲ್ಯದಲ್ಲಿ ನಾವೀನ್ಯತೆಯನ್ನು ಬೆಳೆಸುವ ಅಗತ್ಯವಿದೆ ಎಂದರು.

ಎಪಿಎಸ್ಇಟಿ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ ಮಾತನಾಡಿ, ಈ ಕಾರ್ಯಕ್ರಮ ಸಾಂಪ್ರದಾಯಿಕ ತರಗತಿಗಳನ್ನು ಮೀರಿದ ಕಲಿಕೆಯನ್ನು ಮುಂದುವರೆಸಲು ಸಹಕಾರಿಯಾಗಲಿದೆ. ಕೈಗೆಟಕುವ ಯೋಜನೆಗಳ ಮೂಲಕ ಸೃಜನಾತ್ಮಕ ಚಿಂತನೆ, ಸಮಸ್ಯೆ, ಪರಿಹಾರ ಮತ್ತು ಕಲ್ಪನೆಗೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ,  ನಾವೀನ್ಯಕರ ಮತ್ತು ಸಮಸ್ಯೆ ಪರಿಹಾರಮುಖಿ ವ್ಯಕ್ತಿಗಳಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ. ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST