LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣದಲ್ಲಿ ನೈತಿಕತೆ, ಜ್ಞಾನ ಮತ್ತು ಮಾನವೀಯತೆಯನ್ನು ಸಂಯೋಜಿಸುವ ಅಗತ್ಯವಿದೆ : ಎಐಸಿಟಿಇ ಅಧ್ಯಕ್ಷ ಡಾ. ಟಿ. ಜಿ. ಸಿತಾರಾಮ್

ಬೆಂಗಳೂರು: ಶಿಕ್ಷಣದಲ್ಲಿ ನೈತಿಕತೆ, ಜ್ಞಾನ ಮತ್ತು ಮಾನವೀಯತೆಯನ್ನು ಸಂಯೋಜಿಸುವುದು ನಮ್ಮ ಮುಂದಿರುವ ಮಹತ್ವದ ಹಾದಿಯಾಗಿದೆ ಎಂದು ಎಐಸಿಟಿಇ ಅಧ್ಯಕ್ಷ ಡಾ. ಟಿ. ಜಿ. ಸಿತಾರಾಮ್ ಹೇಳಿದ್ದಾರೆ.

ಇಂಡಿಯನ್ ಕೌನ್ಸಿಲ್ ಫಾರ್ ಹೈಯರ್ ಎಜ್ಯುಕೇಶನ್ ನಿಂದ ಕೆಂಗೇರಿ ಬಳಿ ಇರುವ ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (ಎಐಎಂಎ) ಸಹಯೋಗದಲ್ಲಿ ಹಾಗೂ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಶನ್ (ಎಐಸಿಟಿಇ) ಆಯೋಜಿಸಿದ್ದ “ಮಂಥನ್: ಸಮಕಾಲೀನ ಉನ್ನತ ಶಿಕ್ಷಣದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯ ಸಂಯೋಜನೆ” ಕುರಿತ ವೈಸ್ ಚಾನ್ಸಲರ್ಸ್ ಕಾನ್ಕ್ಲೇವ್ ನಲ್ಲಿ ಮಾತನಾಡಿದ ಅವರು, ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಮಗ್ರ ಮತ್ತು ಅಂತರಶಾಸ್ತ್ರೀಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಭಾರತೀಯ ಜ್ಞಾನ ವ್ಯವಸ್ಥೆಯನ್ನು ನೈಜ ಶಿಕ್ಷಣದಡಿ ಜಾರಿಗೊಳಿಸುವುದೇ ದೊಡ್ಡ ಸವಾಲು ಎಂದು ಅವರು ಹೇಳಿದರು.



ಸಿಇಎಸ್‌ ಎಸ್‌ ಅಧ್ಯಕ್ಷ, ಶಿಕ್ಷಣ ತಜ್ಞ ಡಾ. ಎಂ. ಕೆ. ಶ್ರೀಧರ ಮಾತನಾಡಿ,  ಭಾರತೀಯ ಜ್ಞಾನ ವ್ಯವಸ್ಥೆಯನ್ನು ಇಂದಿನ ಮತ್ತು ಭವಿಷ್ಯದ ಶಿಕ್ಷಣದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಂಯೋಜಿಸಬೇಕು. ಈ ಕಾರ್ಯವನ್ನು ಸೂಕ್ಷ್ಮ ಹಂತದಲ್ಲಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಐಸಿಎಫ್‌ಎಐ ಉಪಕುಲಪತಿ ಡಾ. ಟಿ ಕೋಟಿರೆಡ್ಡಿ ಮಾತನಾಡಿ,   ವಸಾಹತುಶಾಹಿಯ ಪರಿಣಾಮದಿಂದ ಭಾರತೀಯ ಜ್ಞಾನ ವ್ಯವಸ್ಥೆಯ ಅಪಾರ ಸಂಪತ್ತನ್ನು ಪಕ್ಕಕ್ಕೆ ತಳ್ಳಲಾಗಿತ್ತು. ಐಕೆಎಸ್ ಅನ್ನು ಸಮಕಾಲೀನ ಶಿಕ್ಷಣದೊಂದಿಗೆ ಸಂಯೋಜಿಸುವುದು ಶಾಶ್ವತ ಶಿಕ್ಷಣದ ಮಾರ್ಗವಾಗಿದ್ದು, ಅದು ಜೀವನಪರ್ಯಂತ ಕಲಿಕೆ, ವಿಮರ್ಶಾತ್ಮಕ ಚಿಂತನೆ, ಅಂತರಶಾಸ್ತ್ರೀಯ ದೃಷ್ಟಿಕೋನ ಮತ್ತು ಸಮಾಜ-ಪರಿಸರದತ್ತ ಜವಾಬ್ದಾರಿ ಬೆಳೆಸುತ್ತದೆ ಎಂದರು.

ಐಎಫ್‌ಎಚ್‌ಸಿ ಉಪ ಕುಲಪತಿ ಡಾ. ಮುದ್ದು ವಿನಯ್ ಮಾತನಾಡಿ, ಭಾರತೀಯ ಜ್ಞಾನ ವ್ಯವಸ್ಥೆ ಕೃತಕ ಬುದ್ಧಿಮತ್ತೆ, ಶಿಕ್ಷಣ, ಸಂಶೋಧನೆಯ ಅಂಶಗಳನ್ನು ಒಳಗೊಂಡಿದೆ. ಅಪಾರ ಹಾಗೂ ಬಳಕೆಯಾಗದ ಸಂಪನ್ಮೂಲಗಳನ್ನು ಸಹ ಹೊಂದಿದೆ. ಪಾಶ್ಚಾತ್ಯ ಶೈಕ್ಷಣಿಕ ಮಾದರಿಗಳಿಗೆ ಮಾತ್ರ ಸೀಮಿತವಾಗದೆ, ನಿರ್ವಹಣೆ ಮತ್ತು ತಂತ್ರಜ್ಞಾನ ಶಿಕ್ಷಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದರು.



ಎಐಎಂಎ ನಿರ್ದೇಶಕ ಡಾ. ರೋಹಿತ್ ಸಿಂಗ್, ಐಐಎಫ್‌ಟಿ ಉಪಕುಲಪತಿ  ಪ್ರೊ. ರಾಕೇಶ್ ಮೋಹನ್ ಜೋಶಿ, ಐಎಫ್‌ಎಚ್‌ಇ ಅಕಾಡೆಮಿಕ್‌ ಡೀನ್ ಡಾ. ವಿನಯ್ ಜೋಶಿ ಮತ್ತಿತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST