ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲಿ 108 ಅಂಬುಲೆನ್ಸ್ ಗಳು ಇಲ್ಲದೇ ಇರುವುದರಿಂದ ರೋಗಿಗಳು ಪರದಾಡುತ್ತಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ 108 ಆರೋಗ್ಯ ಕವಚ ಅಂಬುಲೆನ್ಸ್ ಸಂಖ್ಯೆ 19 ಇದ್ದು ಇದರಲ್ಲಿ ಕೇವಲ7 ಅಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ 12 ಅಂಬುಲೆನ್ಸ್ ಗಳು ದುರಸ್ತಿಯಲ್ಲಿವೆ.
ಆದರೆ ಹರಪನಹಳ್ಳಿ, ಹೂವಿನ ಹಡಗಲಿ 2 ತಾಲೂಕುಗಳಲ್ಲಿ ಸುಮಾರು 15 ರಿಂದ 20 ದಿನಗಳಿಂದ ಯಾವುದೇ 108 ಅಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿಲ್ಲ ಇದರಿಂದ ರೋಗಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದಿರುವುದರಿಂದ ರೋಗಿಗಳು ಸಾಯುತ್ತಿದ್ದಾರೆ. ಅಲ್ಲದೇ ಹರಪನಹಳ್ಳಿ, ಹೂವಿನ ಹಡಗಲಿ ತಾಲ್ಲೂಕುಗಳಲ್ಲಿ ಅಪಘಾತವಾದಗ, ಹೆರಿಗೆ ಸಮಯದಲ್ಲಿ, ಉಸಿರಾಟ ತೊಂದರೆಗಳು ಹೀಗೆ ಆದಾಗ ರಾತ್ರಿ ಹೊತ್ತಿನಲ್ಲಿ ರೋಗಿಗಳ ಜೀವಕ್ಕೆ ಯಾರು ಹೊಣೆ?

ಜಿ.ವಿ.ಕೆ. ಇ.ಎಂ.ಆರ್.ಐ.ಸಂಸ್ಥೆಯು ಅಂಬುಲೆನ್ಸ್ ಗಳನ್ನು ತುಂಬಾ ಒಳ್ಳೆಯ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಆಯಾ ಜಿಲ್ಲೆಗಳ ಡಿ.ಹೆಚ್.ಓ. ಅಧೀನಕ್ಕೆ ನೀಡಿದ್ದು. ಆದರೆ ದುರಸ್ತಿಯಲ್ಲಿ ಇರುವ ಅಂಬುಲೆನ್ಸ್ ಗಳು ರಿಪೇರಿ ಮಾಡಿಸದೇ ಹಾಗೆ ಬಿಟ್ಟಿದ್ದಾರೆ. ಅಲ್ಲದೇ 108 ಅಂಬುಲೆನ್ಸ್ ಸೇವೆಗಳು ಜನರಿಗೆ ತುಂಬಾ ಅವಶ್ಯಕತೆ ಇದೆ. 108 ಅಂಬುಲೆನ್ಸ್ ಮತ್ತು ಸಿಬ್ಬಂದಿಗಳಿಂದ ಲಕ್ಷಾಂತರ ಜೀವಗಳು ಉಳಿದಿವೆ. ಇಷ್ಟು ದಿನಗಳ ಕಾಲ 108 ಅಂಬುಲೆನ್ಸ್ ಆರೋಗ್ಯ ಕವಚ ತುಂಬಾ ಚೆನ್ನಾಗಿ ಜನರಿಗೆ ಸೇವೆ ನೀಡಿದೆ. ಮತ್ತು ವಿಜಯನಗರ ಜಿಲ್ಲೆಯಲ್ಲಿ ಜಿ.ವಿ.ಕೆ.ಇ.ಎಂ.ಆರ್.ಐ. ಸಂಸ್ಥೆ 108 ಅಂಬುಲೆನ್ಸ್ ನಿಂದ ತಿಂಗಳಿಗೆ ಸುಮಾರು 1200 ರಿಂದ 1300 ರೋಗಿಗಳು ಸೇವೆಗಳನ್ನು ಪಡೆಯುತ್ತಿದ್ದಾರೆ. ಈಗ ಯಾಕೆ ಸರಿಯಾಗಿ ಅಂಬುಲೆನ್ಸ್ ಗಳು ಸಾರ್ವಜನಿಕರಿಗೆ ಸೇವೆಗಳನ್ನು ನೀಡುತ್ತಿಲ್ಲ ಯಾಕೆ? ಇದಕ್ಕೆ ಸಂಬಂಧ ಪಟ್ಟ ಆರೋಗ್ಯ ಅಧಿಕಾರಿಗಳು ಮತ್ತು ಜಿ.ವಿ.ಕೆ.ಇ.ಎಂ.ಆರ್.ಐ.ಸಂಸ್ಥೆ ಗಮನ ಹರಿಸಿ ರೋಗಿಗಳ ಪ್ರಾಣಗಳನ್ನು ಉಳಿಸಿ ಅಧಿಕಾರಿಗಳೇ?. ಗಂಡ, ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಹಾಗೆ ಆರೋಗ್ಯ ಇಲಾಖೆ ಮತ್ತು ಜಿ.ವಿ.ಕೆ.ಇ.ಎಂ.ಆರ್.ಐ. ಸಂಸ್ಥೆ ನಡುವೆ ರೋಗಿಗಳು ಬಲಿಪಶುಗಳು ಆಗುತ್ತಿದ್ದಾರೆ.
ಮೊನ್ನೆ ನಮ್ಮ ಹುಡುಗ ಬೈಕ್ ನಲ್ಲಿ ಬಿದ್ದಾಗ 108 ಗೆ ಕರೆ ಮಾಡಿದರೆ ಅಂಬುಲೆನ್ಸ್ ಇಲ್ಲ ರಿಪೇರಿ ಇದೆ ಎಂದು ಹೇಳಿದರು. ಆಗ ನಮ್ಮ ಹುಡುಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಯಾವುದೇ ಅಂಬುಲೆನ್ಸ್ ಸಿಗಲಿಲ್ಲ. ತುಂಬಾ ನೋವಿನಿಂದ ಬಳಲುತ್ತದ್ದನು. ಅಲ್ಲದೇ ನಮ್ಮ ಗ್ರಾಮದಲ್ಲಿ ಗರ್ಭಿಣಿಗೆ ಮಧ್ಯೆ ರಾತ್ರಿ ವೇಳೆಯಲ್ಲಿ ಹೆರಿಗೆ ನೋವು ಶುರುವಾಗಿತ್ತು ಆಗ ಕೂಡ 108 ಅಂಬುಲೆನ್ಸ್ ಬರಲಿಲ್ಲ. ಮೊದಲು ಹೀಗೆ ಇರಲಿಲ್ಲ. ಸ್ವಲ್ಪ ದಿನಗಳಿಂದ ಅಂಬುಲೆನ್ಸ್ ಗಳು ಇಲ್ಲದೇ ತುಂಬಾ ತೊಂದರೆ ಆಗುತ್ತಿದೆ ಯಾಕೆ ಹೀಗೆ. ನಮ್ಮ ಜೀವಕ್ಕೆ ಬೆಲೆ ಇಲ್ಲ ನಾ
ಸಾರ್ವಜನಿಕರು
ನಮ್ಮ ಜಿ.ವಿ.ಕೆ.ಇ.ಎಂ.ಆರ್.ಐ.ಸಂಸ್ಥೆ 108 ಆರೋಗ್ಯ ಕವಚ ಅಂಬುಲೆನ್ಸ್ ಗಳನ್ನು ಈಗ ಯಾವುದೇ ಅಂಬುಲೆನ್ಸ್ ಗಳನ್ನು ದುರಸ್ತಿಗೊಳಿಸಲು ಆಗುವುದಿಲ್ಲ. ಸರ್ಕಾರ ಈಗ ಅಂಬುಲೆನ್ಸ್ ಗಳನ್ನು ಆಯಾ ಜಿಲ್ಲೆಯ ಡಿ.ಹೆಚ್.ಓ.ಗಳ ಅಧೀನಕ್ಕೆ ನೀಡಿದೆ. ಈಗ ಅವರೇ ಅಂಬುಲೆನ್ಸ್ ಗಳನ್ನು ರಿಪೇರಿ ಮಾಡಿಸಬೇಕು.
ಜಿ.ವಿ.ಕೆ.ಇ.ಎಂ.ಆರ್.ಐ.ಸಂಸ್ಥೆಯ ಅಧಿಕಾರಿಗಳು