LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಶಿಕ್ಷಕ ವೃತ್ತಿಯ ಸೇವೆ ತೃಪ್ತಿತಂದಿದೆ: ಮಾರುತಿ ಗಾಳಿ

ಕುರುಗೋಡು:  ನನ್ನ ಸೇವಾಅವಧಿಯಲ್ಲಿ ಮಾಡಿದ ಕೆಲಸಗಳು ತೃಪ್ತಿತಂದಿವೆ ಎಂದು ನಿವೃತ್ತ ಉಪ ಪ್ರಾಚಾರ್ಯ ಮಾರುತಿ ಗಾಳಿ ಹೇಳಿದರು.

ಇಲ್ಲಿನ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಯೋನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಜೀವನ ಆರಂಭಗೊಂಡಿದ್ದು ಕುರುಗೋಡಿನ ಬಾಲಕಿಯ ಸರ್ಕಾರಿ ಪ್ರೌಢಶಾಲೆಯಿಂದ ನಿವೃತ್ತಿ ಹೊಂದಿದ್ದು ಕುರುಗೋಡಿ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್ನುವುದು ವಿಶೇಷವಾಗಿದೆ. ನಾನು ಓದಿದ ಶಾಲೆಯಲ್ಲಿಯೇ ಉಪ ಪ್ರಾಚಾರ್ಯರಾಗಿ ಸೇವೆಸಲ್ಲಿಸಿ ಅಲ್ಲಿಯೇ ನಿವೃತ್ತಿಯಾಗುತ್ತಿರುವುದು ಹೆಚ್ಚು ಹರ್ಷ ತಂದಿದೆ.

ನನ್ನ ಜತೆಗೆ ಕಾರ್ಯನಿರ್ವಹಿಸಿದ ಎಲ್ಲ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಹೆಚ್ಚು ವಿದ್ಯಾರ್ಥಿಗಳಿದ್ದರೂ ಅವರನ್ನು ನಿಭಾಯಿಸಲು ಸಾಧ್ಯವಾಗಿದ್ದ ಸಿಬ್ಬಂದಿ ಸಹಕಾರ ದಿಂದ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಸರಳ ಸಜ್ಜನಿಗೆಯ ವ್ಯಕ್ತಿತ್ವದ ಮರುತಿ ಗಾಳಿ ಮತ್ತು ನಾನು ರಾಯಚೂರಿನ ಡಯಟ್‌ನಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದ ಅನುಭವ ವಿದೆ. ಅವರಲ್ಲಿ ವಿಶೇಷಗುಣ ನಾನು ಇಲ್ಲಿಗೆ ಬರಲು ಕಾರಣವಾಗಿದೆ. ಅವರ ವಯೋನಿವೃತ್ತಿ ಹಷದಾಯಕವಾಗಿರಲಿ ಎಂದು ಶುಭ ಹಾರೈಸಿದರು.

ಉಪ ಪ್ರಾಚಾರ್ಯರಾದ ಶಶಿಕಲಾ ಮಾತನಾಡಿ.  ಮಾರುತಿ ಗಾಳಿ ಅವರು ನಮ್ಮ ಶಾಲೆಗೆ  ಉಪ ಪ್ರಾಚಾರ್ಯರಾಗಿ ಬಂದಮೇಲೆ ಶಾಲೆಯ ವಾತಾವರಣವೇ  ಬದಲಾಯಿತು. ಅವರ ಪರಿಶ್ರಮದ ಫಲವಾಗಿ  ಕಳೆದ ವರ್ಷ  ಎಸ್. ಎಸ್. ಎಲ್. ಸಿ. ಪರೀಕ್ಷೆ ಫಲಿತಾಂಶ ದಲ್ಲಿ ತಾಲ್ಲೂಕಿಗೆ  ಪ್ರಥಮ ಸ್ಥಾನ ಬರಲು ಕಾರಣವಾಯಿತು ಎಂದು ಶ್ಲಾಘಿಸಿದರು.

ಉಪ ಪ್ರಾಚಾರ್ಯರಾದರು ಸಹ  ಶಿಕ್ಷಕರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ನಿವೃತ್ತಿ ಯಾದರು ನಮ್ಮ ಶಾಲೆಗೆ ಸದಾಕಾಲ ಬಂದು ಮಾರ್ಗದರ್ಶನ ನೀಡುತ್ತಿರಬೇಕು ಎಂದು ಮನವಿ ಮಾಡಿದರು. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೖಸಿದರು

ಮುಖ್ಯ ಶಿಕ್ಷಕ ಗುರುಬಸವರಾಜ ಮಾತನಾಡಿ, ಮಾರುತಿ ಗಾಳಿ ಮತ್ತು ನಾನು ಒಂದೇ ಶಾಲೆಯಲ್ಲಿ ವೃತ್ತಿ ಆರಂಭಿಸಿದ್ದೇವೆ ಎಂದು ಹೇಳಿಕೊಳ್ಳಲು ಹರ್ಷವಾಗುತ್ತದೆ. ನಾನು ೫ ವರ್ಷಗಳ ಹಿಂದೆ ಬಡ್ತಿಪಡೆದು ಮುಖ್ಯ ಶಿಕ್ಷಕನಾಗಿದ್ದರೂ ಮಾರುತಿ ಗಾಳಿ ಮತ್ತು ನನ್ನ ಸಂಬಂಧ ಸದಾ ಹಸಿರಾಗಿತ್ತು. ನೇರವಾಗಿ ಕಾಣದಿದ್ದರೂ ನಿತ್ಯ ಮೊಬೈಲ್‌ನಲ್ಲಿ ಶಾಲೆಯ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆ ಮಾಡುತ್ತಿದ್ದೆವು ಎಂದು ಅವರ ಸಂಬಂಧ ಮೆಲುಕು ಹಾಕಿದರು.

 news_1780240946_1_817.webp

 

ಹಿರಿಯ ಶಿಕ್ಷಕ ಪುಷ್ಪಲತಾ ಬಿ. ಮಾತನಾಡಿ, ಮಾರುತಿ ಗಾಳಿ ಅವರು ವೃತ್ತಿಯಲ್ಲಿ ಹೆಚ್ಚು ಶಿಸ್ತು ಪರಿಪಾಲಿಸುವ ವ್ಯಕ್ತಿಯಾಗಿದ್ದಾರೆ. ಕೆಲಸದ ವಿಷಯದಲ್ಲಿ ಯಾವುಯದೇ ರಾಜಿಮಾಡಿಕೊಳ್ಳದೆ ಸಹ ಸಿಬ್ಬಂದಿ ಯಿಂದ ಕೆಲಸ ತೆಗೆದುಕೊಳ್ಳುತ್ತಾರೆ. ಉಳಿದಂತೆ ಎಲ್ಲರೊಂದಿಗೆ ಸ್ನೇಹಮಯಿಯಾಗಿರುತ್ತಾರೆ. ಅವರ ನಿವೃತ್ತಿ ಜೀವನ ಉಖಮಯವಾಗಿರಲಿ ಎಂದು ಹಾರೈಸಿದರು.

ನಿವೃತ್ತ ಶಿಕ್ಷಕ ಕೆ.ಎಂ. ಮಲ್ಲಪ್ಪ, ನಿವೃತ್ತ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ. ಗಾದಿಲಿಂಗಪ್ಪ, ನಿವೃತ್ತ ಮುಖ್ಯ ಶಿಕ್ಷಕ ಗುರುಮೂರ್ತಿ, ಪಿ.ಯು. ಕಾಲೇಜು ಪ್ರಾಚಾರ್ಯ ವೇಣುಗೋಪಾಲ್, ಐಟಿಐ ಕಾಲೇಜು ಪ್ರಾಚಾರ್ಯ ತಿಮ್ಮರಾಜು, ಪ್ರೌಢಶಾಲೆ ಮುಖ್ಯ ಶಿಕ್ಷಕ ಹುಸೇನ್ ಬಾಷಾ, ಟಿ.ಮಲ್ಲಮ್ಮ, ನಿರ್ಮಲ, ಸಿದ್ದಮ್ಮ, ಕವಿತಾಬಾಯಿ, ಕೊಟ್ರಪ್ಪ ಮತ್ತು ಶಾಂತ ನಾಯಕ್, ಎಂ ಬಸವರಾಜ್ ,  ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ