
ನಂತರ ಪ.ಪಂ.ಮುಖ್ಯಾಧಿಕಾರಿ ಮಾತನಾಡಿ, ಜನರು ಮನೆಯಲ್ಲಿ ಉಪಯೋಗಿಸುವ ಹಣ್ಣು, ತರಕಾರಿ, ಅನ್ನ, ಇತ್ಯಾದಿಗಳು ನಮ್ಮ ಕೈಯಲ್ಲಿ ಇರುವವರೆಗೂ ಅದರದೇ ಗುಣ ಇರುತ್ತವೆ. ಕೈಯಿಂದ ನೆಲಕ್ಕೆ ಹಾಕಿದರೆ ಅದು ಕಸವಾಗುತ್ತದೆ. ಆ ಕಸವನ್ನು ಸ್ವಚ್ಛ ಗೊಳಿಸುವುದೇ ಪೌರ ಕಾರ್ಮಿಕರು. ಪೌರ ಕಾರ್ಮಿಕರು ಮುಖ್ಯ ರಸ್ತೆಗಳನ್ನು ಸ್ವಚ್ಛ ಗೊಳಿಸುತ್ತಾರೆ. ಜನರ ಮನೋಭಾವನೆ ಬದಲಾದಾಗ ಮಾತ್ರ ನಮ್ಮ ಸುತ್ತಲೂ ಸ್ವಚ್ಛತೆ ಕಾಣಲು ಸಾಧ್ಯ. ಜನರು ಕಸವನ್ನು ವಿಂಗಡಿಸಿ ಕೊಡಬೇಕು. ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ಕೊಟ್ಟರೆ ಪಟ್ಟಣ ಸ್ವಚ್ಛವಾಗಿ ಇರುತ್ತದೆ ಎಂದು ಹೇಳಿದರು.
ನಂತರ ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ 7 ಸಾವಿರ ಗೌರ ಧನ ಹಾಗೂ ಉಡುಗೊರೆಗಳನ್ನು ನೀಡಿದರು. ಮತ್ತು ಎಲ್ಲಾ ಪೌರ ಕಾರ್ಮಿಕರಿಗೆ ಸನ್ಮಾನ ನಡೆಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಆರ್.ಲಕ್ಷ್ಮೀ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷೆ ಹುಲಿಗಿ ಬಾಯಿ ರುದ್ರನಾಯ್ಕ, ಪ.ಪಂ.ಸದಸ್ಯರು ಪೂಜಾ ಅಶ್ವಿನಿ ನಾಗರಾಜ್, ವಸಂತ್, ಕೆ.ಮಂಜುನಾಥ, ಹಾಗೂ ಲಾಲ್ಯ ನಾಯ್ಕ, ರುದ್ರನಾಯ್ಕ, ಧರ್ಮ ನಾಯ್ಕ, ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ್, ಪಟ್ಟಣದ ಪೌರ ಕಾರ್ಮಿಕ ಅಧ್ಯಕ್ಷ ಕುಲಹಳ್ಳಿ ಹನುಮಂತ, ಹಾಗೂ ಪಟ್ಟಣ ಪಂಚಾಯತಿ ಎಲ್ಲಾ ಪೌರ ಕಾರ್ಮಿಕರು ಇದ್ದರು.

ಕಲ್ಮಶ ಇಲ್ಲದೇ ಸ್ವಚ್ಛತೆ ಮಾಡುವವರೇ ಪೌರ ಕಾರ್ಮಿಕರು ಇವರು ಮಾಡು ಕೆಲಸ ಯಾರು ಮಾಡಲು ಸಾಧ್ಯವಿಲ್ಲ. ಇವರ ಕಾಯಕಕ್ಕೆ ಸರ್ಕಾರ ಹೆಚ್ಚು ಸಂಭವನೆ ನೀಡಬೇಕು. ಹಾಗೂ ಪೌರ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ಮತ್ತು ಆರೋಗ್ಯ ವಿಮೆ ನೀಡಬೇಕು.
ಲಾಲ್ಯ ನಾಯ್ಕ