ಬಳ್ಳಾರಿ: ಮಹಾನಗರ ಪಾಲಿಕೆ 35ನೇ ವಾರ್ಡ್ ನಲ್ಲಿರುವ `ನಂದನವನ ಉದ್ಯಾನವನ' ಸಾರ್ವಜನಿಕರ ಸ್ವತ್ತಾಗಿದ್ದು ಓರ್ವ ಪ್ರಭಾವಿ ವ್ಯಕ್ತಿಯಿಂದ ಅದನ್ನು ಕಬಳಿಸುವ ಹುನ್ನಾರ ನಡೆದಿದೆ. ಈ ಉದ್ಯಾನವನ ಉಳಿವಿಕೆಗಾಗಿ ನ್ಯಾಯಾಂಗ ಹೋರಾಟ ಮಾಡುವುದಾಗಿ ವೀರನಗೌಡ ಕಾಲೋನಿ ಮತ್ತು ಗಣೇಶನಗರ ನಾಗರೀಕ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಉದ್ಯಾನವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಕೆ.ಬಸವನಗೌಡ, ಉಪಾಧ್ಯಕ್ಷ ವಿ.ವೀರೇಶ ಮತ್ತಿತರರು ವೀರನಗೌಡ ಕಾಲೋನಿ ಟಿ.ಎಸ್.ಸಂಖ್ಯೆ;೩೫೦/೧೩೩ ರಲ್ಲಿರುವ ಪಾರ್ಕ್ ಸಂಪೂರ್ಣ ಅಭಿವೃದ್ಧಿ ಹೊಂದಿದೆ. ಕಳೆದ ದಶಕದಿಂದ ಜನರು ಈ ಪಾರ್ಕ್ನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಎಂ.ರಾಜೇಶ್ವರಿ ನಗರ, ದೇವಿನಗರ, ಸಂಜಯಗಾAಧಿನಗರ, ವೀರನಗೌಡ ಕಾಲೋನಿ, ಗಣೇಶ ಕಾಲೋನಿ, ಅವಂಬಾವಿ ಸೇರಿದಂತೆ ಸುತ್ತ ಮುತ್ತಲಿನ ಬಡಾವಣೆಗಳ ಸಾರ್ವಜನಿಕರು ವಾಯು ವಿಹಾರಕ್ಕಾಗಿ ಈ ಉದ್ಯಾನವನವನ್ನು ಬಳಸುತ್ತಿದ್ದಾರೆ.
ವಕೀಲರು ಆಗಿರುವ ಪ್ರಭಾವಿ ರಾಜಕಾರಣಿಯೊಬ್ಬರು ಮಹಾನಗರ ಪಾಲಿಕೆ ವಿರುದ್ಧ ಪ್ರಕರಣ ದಾಖಲಿಸಿ, ತಮ್ಮ ಪರವಾಗಿ ನ್ಯಾಯ ದೊರಕುವಂತೆ, ಸರ್ಕಾರಿ ಅಧಿಕಾರಿಗಳು ಪ್ರತಿರೋಧಿಸದಂತೆ ಮತ್ತು ಡೆವಲಪರ್ ಪರವಾಗಿ ಮಾಡಿದ್ದಾರೆ. ನಿವಾಸಿಗಳು ಈ ಪ್ರಕರಣದಲ್ಲಿ ಭಾಗಿಯಾಗದಂತೆ ಮತ್ತು ತಮ್ಮಲ್ಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಪರವಾಗಿ ನ್ಯಾಯ ದೊರೆಯುವಂತೆ ತಂತ್ರ ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯಾನವನದ ಸುತ್ತಲಿನ ನಿವಾಸಿಗಳಾದ ನಾವುಗಳು ನ್ಯಾಯಾಂಗ ಹೋರಾಟಕ್ಕೆ ಅಣಿಯಾಗಿದ್ದೇವೆ. ಈ ಮಧ್ಯೆ ಪ್ರಭಾವಿ ವ್ಯಕ್ತಿ ಧಾರವಾಡ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದರ ವಿರುದ್ಧ ನಿವಾಸಿಗಳಾದ ನಾವೂ ಕೂಡ ಹೋರಾಟ ಮಾಡಲು ಅಣಿಯಾಗಿದ್ದೇವೆ. ರಾಜ್ಯ ಸರ್ಕಾರ ಸಾರ್ವಜನಿಕರ ಈ ಉದ್ಯಾನವನವನ್ನು ನಾಗರಿಕರಿಗೆ ಉಳಿಸಿಕೊಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೀರನಗೌಡ ಕಾಲೋನಿ ಮತ್ತು ಗಣೇಶ ನಗರ ನಾಗರೀಕ ಸೇವಾ ಸಂಘದ ಕಾರ್ಯದರ್ಶಿ ಬಸವನಗೌಡ ಪಿ., ಜಂಟಿ ಕಾರ್ಯದರ್ಶಿ ಕೆ.ವಿಜಯಸಿಂಹ, ಖಜಾಂಚಿ ಶರಣಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಬಸವನಗೌಡ, ಡಾ.ಟಿ.ಸುರೇಶ, ಮುರಳಿ ಶ್ಯಾಮ ಗೊತ್ತಿಪತಿ, ಮಂದಪಾಟಿ ಸತ್ಯನಾರಾಯಣರಾಜು, ಹೇಮಂತ್ ಕುಮಾರ್, ವೀರನಗೌಡ, ಬಿ., ಹೆಚ್.ಜಯಪ್ರಕಾಶಗೌಡ, ಬಿ.ಸಿದ್ಧರಾಮನಗೌಡ, ಬಸವರಾಜ ಬಿ.ಎಂ., ಹೆಚ್.ಎನ್.ಉಮೇಶ್, ಎಸ್.ವೀರನಗೌಡ, ಎಂ.ಶರಣಬಸವನಗೌಡ ಸೇರಿದಂತೆ ಸ್ಥಳೀಯ ನಿವಾಸಿಗಳು ಇದ್ದರು.