ದಾವಣಗೆರೆ: ದಾವಣಗೆರೆಯ AGB ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 25 ಹಾಗೂ 26 ಜುಲೈ 2025ರಂದು ಪ್ರಥಮ ವರ್ಷದ B.Com ಮತ್ತು BCA ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ನೂತನ ಶೈಕ್ಷಣಿಕ ಅಧ್ಯಾಯದ ಅರಿವು ಮೂಡಿಸುವ ಉದ್ದೇಶದಿಂದ ಎರಡು ದಿನಗಳ ಈ ಸಮಾರಂಭ ಆಯೋಜನೆಯಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವೆಂಕಟೇಶ್ ಬಾಬು ಎಸ್ ಅವರು ಯುವ ಮನಸ್ಸುಗಳಿಗೆ ಪ್ರೇರಣಾತ್ಮಕ ಸಂದೇಶ ನೀಡಿದರು.

"ವಿದ್ಯಾಭ್ಯಾಸ ಎಂದರೆ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲ, ಬದುಕನ್ನು ರೂಪಿಸುವ ಶಕ್ತಿ ಸಂಪಾದಿಸುವ ಪವಿತ್ರ ಪ್ರಯಾಣ. B.Com ಮತ್ತು BCA ಎಂಬ ಈ ಎರಡೂ ಕೋರ್ಸ್‌ಗಳು ನವೀನ ತಂತ್ರಜ್ಞಾನ, ಆರ್ಥಿಕ ಜ್ಞಾನ ಮತ್ತು ನಿರ್ವಹಣಾ ಕೌಶಲ್ಯಗಳ ಸಂಯೋಜನೆಯಾಗಿವೆ. ನೀವು ಇಂದಿನಿಂದಲೇ ಸಮಯದ ಮೌಲ್ಯವನ್ನು ಅರಿತು, ಪ್ರತಿ ಕ್ಷಣ ಸದುಪಯೋಗ ಪಡಿಸಿಕೊಳ್ಳಬೇಕು.
ಪ್ರತೀ ವಿದ್ಯಾರ್ಥಿಯು ತನ್ನೊಳಗೆ ಇರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸಬೇಕು. ಕೇವಲ ಅಂಕಗಳನ್ನು ಗಳಿಸುವುದಕ್ಕಲ್ಲ, ನೈತಿಕತೆ, ಮಾನವೀಯತೆ ಮತ್ತು ಸಮಾಜದತ್ತ ಹೊಣೆಗಾರಿಕೆ ಎಂಬ ಮೌಲ್ಯಗಳನ್ನು ರೂಢಿಸಿಕೊಳ್ಳುವುದೇ ಶ್ರೇಷ್ಠ ಶಿಕ್ಷಣ. ನಿಮ್ಮ ಈ ಕಾಲೇಜು ಜೀವನದ ಮೊದಲ ಹಂತದಲ್ಲಿಯೇ ನೀವು ಗುರಿಯನ್ನು ನಿಶ್ಚಯಿಸಿ, ಸದಾ ಕಲಿಯುವ ಮನೋಭಾವವನ್ನು ಕಾಯ್ದುಕೊಳ್ಳಿ.

ಈ ಮೂರು ವರ್ಷಗಳ ಕಾಲ ನೀವು ರೂಪಿಸಿಕೊಳ್ಳುವ ವ್ಯಕ್ತಿತ್ವವೇ ಭವಿಷ್ಯದಲ್ಲಿ ನೀವು ಎಂಥವರು ಆಗುತ್ತೀರಿ ಎಂಬುದನ್ನು ತೀರ್ಮಾನಿಸುತ್ತದೆ. ಆದ್ದರಿಂದ, ಇಂದು ಇಟ್ಟಿರುವ ಒಂದು ನಂಬಿಕೆಯಿಂದ ತುಂಬಿದ ಹೆಜ್ಜೆಯು ನಾಳೆಯ ಯಶಸ್ಸಿನ ದಾರಿ ಖಚಿತಗೊಳಿಸಲಿದೆ."
ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಪ್ರೊ ಬಿ ಪಿ ಕುಮಾರ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಏಳಿಗೆಗಾಗಿ ಕಾಲೇಜ್ ಪ್ರತಿಕ್ಷಣವೂ ಮಿಡಿಯುತ್ತಿರುತ್ತದೆ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ಅಂಕಗಳನ್ನು ಪಡೆಯುವುದra ಕಡೆಗೆ ಗಮನ ಹರಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಭರಮಣ್ಣಗೌಡ ಪಾಟೀಲ್ ಅವರು ಮಾತನಾಡಿದರು.
ವಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಶಶಿಕುಮಾರ್ ಹಾಗೂ ವಿಭಾಗದ ಇತರಧ್ಯಾಪಕರು ಹಾಜರಿದ್ದರು.