ಗುರುಗೌರವವೇ ಜೀವನದ ಬೆಳಕಿಗೆ ದಾರಿದೀಪ
ದಾವಣಗೆರೆ : ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಬಿ.ಎ ವಿಭಾಗದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪ್ರೊ ವೆಂಕಟೇಶ್ ಬಾಬು ಅವರು, “ಗುರು ಎಂದರೆ ಕೇವಲ ಪಾಠ ಹೇಳುವವನು ಮಾತ್ರವಲ್ಲ, ಜೀವನದಲ್ಲಿ ಬೆಳಕನ್ನು ನೀಡುವ ದಾರಿದೀಪ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯಂತ ಮಹತ್ವವಿದೆ. ಗುರು ಶಿಷ್ಯ ಸಂಬಂಧವು ಒಂದು ಪವಿತ್ರತೆಯ ಸಂಕೇತವಾಗಿದೆ. ಇಂದಿನ ಯುವಕರು ಗುರುವಿನ ಮಾರ್ಗದರ್ಶನವನ್ನು ಒಳಗೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಘನಗೊಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಂ.ಬಿ.ಎ ವಿಭಾಗದ ಪ್ರೊ ವಿನಾಯಕ್ ಪ್ರೊ ನಾಗರಾಜ್ ಪ್ರೊ ಪ್ರತಿಭಾ ಪ್ರೊ ರಾಧ ರವರು ಗುರು ಪೂರ್ಣಿಮೆಯ ಕುರಿತು ಮಾತನಾಡಿದರು ವಿದ್ಯಾರ್ಥಿಗಳು ತಮ್ಮಬನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.