ಬೆಂಗಳೂರು : ದುಬೈ ನ ಅತೀ ದೊಡ್ಡ ವೇದಿಕೆಯಲ್ಲಿ ನವೆಂಬರ್ 8 ರಂದು ವಿಜೃಂಭಣೆಯ ಕರ್ನಾಟಕ ರಾಜ್ಯೋತ್ಸವ 2025 ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಡಾ. ಶಿವರಾಜ್ಕುಮಾರ್ ಅವರ ಜನ್ಮದಿನದ ವಿಶೇಷ ಅಂಗವಾಗಿ, ದುಬೈನಲ್ಲಿ ನಡೆಯಲಿರುವ ಅತೀ ದೊಡ್ಡ ಕರ್ನಾಟಕ ರಾಜ್ಯೋತ್ಸವ 2025 ಕಾರ್ಯಕ್ರಮದ ಅಧಿಕೃತ ಫ್ಲೈಯರ್ ಅನ್ನು ಸ್ವತಃ ಡಾ. ಶಿವರಾಜ್ ಕುಮಾರ್ ಡಾ. ಶಿವರಾಜ್ಕುಮಾರ್ ಅನಾವರಣಗೊಳಿಸಿದರು.

ಗಲ್ಫ್ ಕನ್ನಡ ಮೂವೀಸ್ ಸಂಸ್ಥಾಪಕ ದೀಪಕ್ ಸೋಮಶೇಖರ ಮತ್ತು ದರ್ಶನ್ ಸೋಮಶೇಖರ, ಕನ್ನಡಿಗರ ಕೂಟ ತಂಡದ ಪ್ರಧಾನ ಕಾರ್ಯದರ್ಶಿ ಚೇತನ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್ ಕುಮಾರ್ ಅವರ ಅನುಪಸ್ಥಿಯಲ್ಲಿ ನೆರವೆರಿಸಲಾಯಿತು.