LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಏಕಸ್ ಲಿಮಿಟೆಡ್ ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬುಧವಾರ ಆರಂಭ

ಪ್ರತಿ   ಷೇರಿಗೆ ₹ 118 ರಿಂದ ₹ 124 ಕ್ಕೆ ಬೆಲೆ ಪಟ್ಟಿ  ನಿಗದಿ

ಬೆಂಗಳೂರು : ಏಕಸ್ ಲಿಮಿಟೆಡ್ (ಕಂಪನಿ),  ಪ್ರಾಥಮಿಕ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸುವ ಉದ್ದೇಶಕ್ಕೆ ಸಾರ್ವಜನಿಕರಿಗೆ ಷೇರುಗಳನ್ನು ವಿತರಣೆಗೆ ಡಿ.3 ರ  ಬುಧವಾರ ಚಾಲನೆ ದೊರೆಯಲಿದೆ. ಈ  ಆರಂಭಿಕ ಸಾರ್ವಜನಿಕ ಕೊಡುಗೆಯ  (ಐಪಿಒ) ಬೆಲೆ ಪಟ್ಟಿಯನ್ನು ಪ್ರತಿ ಷೇರಿಗೆ ₹ 118 ರಿಂದ ₹ 124 ರಂತೆ ನಿಗದಿಪಡಿಸಲಾಗಿದೆ.

ಕನಿಷ್ಠ 120 ಈಕ್ವಿಟಿ ಷೇರುಗಳಿಗೆ ಮತ್ತು ನಂತರ 120 ಈಕ್ವಿಟಿ ಷೇರುಗಳ ಗುಣಕಗಳಲ್ಲಿ ಬಿಡ್  ಸಲ್ಲಿಸಬಹುದು. ₹ 10 ಮುಖಬೆಲೆಯ ಪ್ರತಿ ಷೇರಿನ ಆರಂಭಿಕ ಸಾರ್ವಜನಿಕ ಕೊಡುಗೆಯು ₹ 6,700 ದಶಲಕ್ಷ(₹ 670 ಕೋಟಿ)ವರೆಗಿನ   ಷೇರುಗಳ ಹೊಸ ನೀಡಿಕೆ ಮತ್ತು ತಲಾ ₹ 10 ಮುಖಬೆಲೆಯ 2,03,07,393 ಈಕ್ವಿಟಿ ಷೇರುಗಳ ಮಾರಾಟ ಕೊಡುಗೆ ಒಳಗೊಂಡಿದೆ.

ಷೇರು ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಲಾಗಿರುವ ಐಪಿಒ ಕರಡು ಪ್ರಸ್ತಾವದ ಮೂಲಕ ಸಾರ್ವಜನಿಕ ವಿತರಣೆ ಮಾಡಲಾಗುವ  ಷೇರುಗಳನ್ನು ಮುಂಬೈ ಷೇರುಪೇಟೆ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ  (ಎನ್ಎಸ್ಇ) ವಹಿವಾಟು ನಡೆಸಲು ಉದ್ದೇಶಿಸಲಾಗಿದೆ. ಈ ಕೊಡುಗೆಯ ಉದ್ದೇಶದಡಿ, ʼಎನ್ಎಸ್ಇʼ ಗೊತ್ತುಪಡಿಸಿದ ಷೇರುಪೇಟೆಯಾಗಿದೆ.

ಜೆಎಂ ಫೈನಾನ್ಶಿಯಲ್ ಲಿಮಿಟೆಡ್, ಐಐಎಫ್ಎಲ್ ಕ್ಯಾಪಿಟಲ್ ಸರ್ವೀಸಸ್ ಲಿಮಿಟೆಡ್ ಮತ್ತು ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್ ಈ ಕೊಡುಗೆ  (ಬಿಆರ್ಎಲ್ಎಂ)   ನಿರ್ವಹಿಸುವ ಹಣಕಾಸು ಸಂಸ್ಥೆಗಳಾಗಿವೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ