LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಅದ್ದೂರಿಯಾಗಿ ಜರುಗಿದ ಅನ್ನದಾಸೋಹ ಕಾರ್ಯಕ್ರಮ

ಶ್ರೀ ಬಾಲಾಜಿ ಯುವಕ ಸಂಘದಿಂದ ಬನ್ನಿಮಹಾಂಕಾಳಮ್ಮ ದೇವಿಗೆ ವಿಶೇಷ ಪೂಜೆ

ಬಳ್ಳಾರಿ : ನವರಾತ್ರಿ ಪ್ರಯುಕ್ತ ಪಟೇಲ್ ನಗರದ  ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಎದುರುಗಡೆ ಇರುವ ಬನ್ನಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಶ್ರೀ ಬಾಲಾಜಿ ಯುವಕ ಸಂಘದ ವತಿಯಿಂದ ಮಹಾಂಕಾಳಮ್ಮ ದೇವಿಗೆ  ವಿಶೇಷ ಪೂಜೆ ಮತ್ತು ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಶ್ರೀ ಬಾಲಾಜಿ ಯುವಕ ಸಂಘದ ಅಧ್ಯಕ್ಷರಾದ ರಾಜೇಶ್ ಅವರ ನೇತೃತ್ವದಲ್ಲಿ, ಇಂದು ಬನ್ನಿ ಮಹಾಂಕಾಳಮ್ಮ ದೇವಿಯ ವಿಶೇಷ ಪೂಜೆ ಕಾರ್ಯಕ್ರಮಗಳು ಮತ್ತು ನೆರೆದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ನಡೆಸಲಾಯಿತು. ಅನ್ನದಾಸೋಹ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ದೇವಿಯ ಪ್ರಸಾದ ಪಡೆದರು.

 

ಸತತವಾಗಿ ಕಳೆದ 25 ವರ್ಷಗಳಿಂದ ಶ್ರೀ ಬಾಲಾಜಿ ಯುವಕ ಸಂಘದ ರಾಜೇಶ್ ಮತ್ತು ಅವರ ತಂಡ ವಿಜಯದಶಮಿ ಮತ್ತು ನವರಾತ್ರಿ ಉತ್ಸವದ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಪ್ರಸಾದ ವಿತರಣೆಯನ್ನು ನಡೆಸುತ್ತಾ ಬಂದಿರುತ್ತಾರೆ, ಅದೇ ರೀತಿಯಾಗಿ ಈ ವರ್ಷವೂ ಸಹ ಬಾಲಾಜಿ ಯುವಕ ಸಂಘವು ವಿಶೇಷ ಪೂಜೆ ಕಾರ್ಯಕ್ರಮಗಳೊಂದಿಗೆ ಮಹಾ  ಮಂಗಳಾರತಿಯನ್ನು ದೇವಿಗೆ ನೆರವೇರಿಸಿ ಅನ್ನದಾನ ಕಾರ್ಯಕ್ರಮವನ್ನು ನಡೆಸಿದರು.



ಬನ್ನಿ ಮಹಾಂಕಾಳಮ್ಮ ದೇವಿಯ ಈ ವಿಶೇಷ ಪೂಜೆ ಕಾರ್ಯಕ್ರಮಕ್ಕೆ   20ನೇ  ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಪೇರಂ ವಿವೇಕ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ದರ್ಶನ ಪಡೆದು ಬನ್ನಿ ಮಹಾಂಕಾಳಮ್ಮ ಕೃಪೆಗೆ ಪಾತ್ರರಾದರು.

 

ಈ ಸಂದರ್ಭದಲ್ಲಿ ಶ್ರೀ ಬಾಲಾಜಿ ಯುವಕ ಸಂಘದ ಅಧ್ಯಕ್ಷರಾದ ಜಿ.ಎನ್.ರಾಜೇಶ್, ಗೌರವ ಅಧ್ಯಕ್ಷರಾದ ಜಿ.ಬಿ.ಟಿ. ರಾಜು, ಕಾರ್ಯದರ್ಶಿ ಬಿ.ಜಿ.ಚಂದ್ರ, ಖಜಾಂಚಿ ಟಿ.ರಾಜಶೇಖರ್, ಸದಸ್ಯರಾದ ಹುಲುಗಪ್ಪ, ದೇವಿನಗರ ಸೀನಾ, ರಂಗನಾಯಕುಲು, ರಾಮಾಂಜಿನಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ