LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಂಗಾಮತ ಸಂಘದ ಮಹಾಸಭೆ ಶೇಷಾದ್ರಿಪುರಂಗೆ ಸ್ಥಳಾಂತರ

ಬೆಂಗಳೂರು : ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ 2025 – 26 ನೇ ಸಾಲಿನ ಮಹಾಸಭೆ ಮತ್ತು ಮಹಾ ಸರ್ವ ಸದಸ್ಯರ ಸಭೆಯನ್ನು ಶೇಷಾದ್ರಿಪುರಂನಲ್ಲಿರುವ ಬಾಸ್ಕ್ಯು ಮಗಜಿ ಆರ್ಕಿಡ್ ಹೋಟೆಲ್ ನಲ್ಲಿ ನ. 23 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ. ಶ್ರೀನಿವಾಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮುನ್ನ ಆನಂದರಾವ್ ವೃತ್ತದ ಸನಿಹದಲ್ಲಿರುವ ಶ್ರೀ ವಿಶ್ವೇಶ್ವರಯ್ಯ ಇಂಜಿನಿಯರ್ಸ್ ಸಮುದಾಯ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಹಂಚಿಕೆ ಮಾಡಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಕೆಇಬಿ ಇಂನಿಯರ್ಸ್ ಸಂಘಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಿಸಿರುವ ಕಾರಣ ಇಲ್ಲಿ ಮಹಾಸಭೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮಹಾಸಭೆ ಸ್ಥಳವನ್ನು ಶೇಷಾದ್ರಿಪುರಂನಲ್ಲಿರುವ ಬಾಸ್ಕ್ಯು ಮಗಜಿ ಆರ್ಕಿಡ್ ಹೋಟೆಲ್ ಗೆ ಸ್ಥಳಾಂತರಿಸಲಾಗಿದೆ ಎಂದರು.



ಕೆಇಬಿ ಇಂಜಿನಿಯರ್ಸ್ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಕಾರಣ ಅಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ.  ಹೀಗಾಗಿ ಕೊನೆ ಗಳಿಗೆಯಲ್ಲಿ ಬದಲಾವಣೆ ಮಾಡಲಾಗಿದೆ. ಸದಸ್ಯರಿಗೆ ಆದ ತೊಂದರೆಗೆ ವಿಷಾದಿಸುತ್ತಿದ್ದೇವೆ ಎಂದು ಅಧ್ಯಕ್ಷ ಎಂ. ಶ್ರೀನಿವಾಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಡಾ. ಕೃಷ್ಣಯ್ಯ, ಕಾರ್ಯಾಧ್ಯಕ್ಷ ಕೆ.ಎಂ. ಧನಂಜಯ, ಬೆಂ.ನಗರ ಘಟಕದ ಅಧ್ಯಕ್ಷ ಎಂ.ಪಿ. ಮಂಜುನಾಥ್, ಖಜಾಂಚಿ ದತ್ತಾತ್ರೆಯ ಶಶಿಕಿರಣ್, ಉಪಾಧ್ಯಕ್ಷ ಎಚ್.ಡಿ. ಕಟ್ಟಿಮನಿ, ನಿರ್ದೇಶಕ ಎನ್. ನಾರಾಯಣ ಸ್ವಾಮಿ, ಸಂಘಟನಾ ಕಾರ್ಯದರ್ಶಿ ಎನ್. ವೆಂಕಟಸ್ವಾಮಿ, ಪದಾಧಿಕಾರಿಗಳಾದ ವಿ ಚಂಗಪ್ಪ, ಎಂ. ಮುನಿರಾಜ್ ಮತ್ತಿತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST