LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಅದ್ದೂರಿಯಾಗಿ ನಡೆದ ಜಾತ್ರಾ ಮಹೋತ್ಸವ

ತಮ್ಮೇನಹಳ್ಳಿ: ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ ಗ್ರಾಮದಲ್ಲಿ 27ನೇ ವರ್ಷದ  ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ಅದ್ದೂರಿಯಾಗಿ ನೆರವೇರಿತು  ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪೂಜಾ ವಿಧಿಗಳು, ಕಂಭಾಭಿಷೇಕ, ಒಣಕೆಗಂಗೆ ಸ್ನಾನ, ಮಹಾರಾಜ ಕುದುರೆ ಓಟ,ಉಚಿತ ಅನ್ನಸಂತರ್ಪಣೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆದವು.



601 ಮುತ್ತೈದೆ  ಮಹಿಳೆಯರಿಗೆ ಉಡಿಯಕ್ಕಿ ತುಂಬುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸೇವಾ ಕಾರ್ಯಕ್ರಮವು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಮಹಿಳಾ ಭಕ್ತರಿಗೆ ಗೌರವ ಸೂಚಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಸಂಜೆ 4.30 ಗಂಟೆಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಜಾತ್ರಾ ಮಹೋತ್ಸವದ ಅಂಗವಾಗಿ 27ನೇ ವರ್ಷದ ಶ್ರೀ ಶ್ರೀ ಜಂಬಣ್ಣ ತಾತ ಜಡೀತಾತ ರಥೋತ್ಸವ ಕಾರ್ಯಕ್ರಮವೂ ಭಕ್ತರ ಸಮ್ಮುಖದಲ್ಲಿ ನೆರವೇರಿತು.ರಥೋತ್ಸವದ ಸಂದರ್ಭದಲ್ಲಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿ  ದೇವರ ಕೃಪೆಗೆ ಪಾತ್ರರಾದರು. ಮೂರ್ತಿಗೆ ಅಲಂಕಾರ, ಹೂವಿನ ಸಿಂಗರ, ವಿಶೇಷ ದೀಪಾಲಂಕಾರದಿಂದ ದೇವಾಲಯ ಕಂಗೊಳಿಸಿತ್ತು,ಭಕ್ತಿಭಾವದ ವಾತಾವರಣ ನಿರ್ಮಾಣವಾಗಲಿದೆ.



ಜಾತ್ರಾ ಸಂದರ್ಭ ಭಕ್ತರಿಗೆ ಕುಡಿಯುವ ನೀರು, ಪ್ರಸಾದ ವಿತರಣೆ, ವಾಹನ ನಿಲುಗಡೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಮಿತಿಯವರು ಕ್ರಮ ಕೈಗೊಂಡಿದ್ದಾರೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸ್ವಯಂಸೇವಕರ ತಂಡವನ್ನೂ ನಿಯೋಜಿಸಲಾಗಿದೆ.

ಜಾತ್ರಾ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಭಕ್ತರಲ್ಲಿ ಐಕ್ಯತೆ ಮತ್ತು ಸೇವಾ ಮನೋಭಾವವನ್ನು ಬಲಪಡಿಸುವ ಹಬ್ಬವಾಗಿದೆ. ಸಮಿತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

 

ಗಾಯನ ಹಾಗೂ ನಿರೂಪಣೆಯನ್ನು ತಮ್ಮೇನಹಳ್ಳಿ ಸಂಗೀತ ಶಿಕ್ಷಕರಾದ ಕೆ ಓ ಶಿವಣ್ಣರವರು ನರವೇರಿಸಿದರು.

ಈ ಸಂದರ್ಭದಲ್ಲಿ ಪೂಜ್ಯನೀಯ ವೆಂಕಟೇಶ್ ತಾತನವರ್, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀ ರಾಮ್ ರೆಡ್ಡಿ, ಕೋನಾಪುರ ಸಣ್ಣ ಮಾರಣ್ಣ, ಜೀರಳ್ಳಿ ತಿಪ್ಪೇಸ್ವಾಮಿ, ಹನುಮಯ್ಯ, ಶಿವಾರೆಡ್ಡಿ, ಲಕ್ಷ್ಮಣ್ ರೆಡ್ಡಿ, ಚಂದ್ರಶೇಖರ್, ಹನುಮಂತರೆಡ್ಡಿ, ನಿಂಗಣ್ಣ, ಸಂತೋಷ್, ಊರಿನ ಮುಖಂಡರಾದ ನಾಗರೆಡ್ಡಿ,ಚಿದಾನಂದ, ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು ಊರಿನ ಮುಖಂಡರು ಉಪಸ್ಥಿತರಿದ್ದರು.



ಬಿಜೆಪಿ ಮಂಡಲ ಅಧ್ಯಕ್ಷ ಶ್ರೀರಾಂ ರೆಡ್ಡಿ

ಚೈತ್ರ ಮಾಸದ ಆರಂಭದ ದಿನಗಳಲ್ಲಿ ಪ್ರತಿ ವರ್ಷವೂ ಕೂಡ ಈ ಮಠವು ಮುತ್ತೈದೆ ಹೆಣ್ಣು ಮಕ್ಕಳಿಗೆ ತವರು ಮನೆ ಸ್ಥಾನದಲ್ಲಿ ನಿಂತುಕೊಂಡು. ಸತತ 27 ವರ್ಷಗಳ ಕಾಲ ಮುತ್ತೈದೆ ಹೆಣ್ಣು ಮಕ್ಕಳಿಗೆ ಉಡಿ ತುಂಬ ಕಾರ್ಯವನ್ನು ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ.



ಪೂಜ್ಯನೀಯಶ್ರೀ ವೆಂಕಟೇಶ ತಾತನವರು

ತಂದೆ ತಾಯಿ ಕಳೆದುಕೊಂಡ ಮುತ್ತೈದೆ ಹೆಣ್ಣು ಮಕ್ಕಳಿಗೆ ಹಾಗೂ ಅಣ್ಣ ತಮ್ಮದಿರಿಂದ ದೂರವಾಗಿರುವ ಮುತ್ತೈದೆಯರಿಗೆ ಜಂಬಣ್ಣ ತಾತ ಹಾಗೂ ಜಡಿ ತಾತನವರ ಮಠವು 27 ವರ್ಷಗಳಿಂದ ತವರು ಮನೆಯಾಗಿ ನಿಂತು ಉಡಿ ತುಂಬವ ಕಾರ್ಯ ನಡೆಸಿಕೊಡಲು ಮುಂದಾಗಿದೆ. ಸನಾತನ ಧರ್ಮದಲ್ಲಿ ಹಿಂದೂ ಕಾರ್ಯಗಳಂತೆ ಮುತ್ತೈದೆ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯ ಮಾಡಲಾಗುತ್ತಿದೆ. ಮುತ್ತೈದೆಯರ ಕಷ್ಟ ಕಾಲದಲ್ಲಿ ನೆರವಿಗೆ ನಿಂತು ತವರು ಮನೆ ಉತ್ತುಂಗಕ್ಕೆ ಬೆಳೆಯಲಿ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ